ಕಲಬುರಗಿ/ಯಾದಗಿರಿ: ರಾಜ್ಯಾದ್ಯಂತ ಮಳೆ ಕೊರತೆ ಆಗಿದ್ದು, ಬರಗಾಲ ಭೀತಿ ಆವರಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಈ ಸಂಕಷ್ಟ ತುಸು ಹೆಚ್ಚೇ ಎನ್ನಬಹುದು. ಮಳೆ ಆಗದೇ ಬಿತ್ತನೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮುಗ್ಗರಿಸಿದ ಈ ಭಾಗದ ಜನರು, ರೈತರು ವಲಸೆ ಹೋಗುತ್ತಿದ್ದಾರೆ. ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಭಾಗದಲ್ಲಿ ವಲಸೆ ಪ್ರಮಾಣ ಹೆಚ್ಚಾಗಿದೆ. ಸ್ಥಳೀಯವಾಗಿ ದುಡಿಯಲು ಕೆಲಸಗಳು ಇಲ್ಲ. ಮಳೆ ಕೈ ಕೊಟ್ಟಿದ್ದು, ಬೇರೆ ಬೇರೆ ನಗರಗಳು, ರಾಜ್ಯಗಳಿಗೆ ತೆರಳುವುದು ಅನಿವಾರ್ಯವಾಗಿದೆ.
ಈ ಭಾಗದಿಂದ ಚೆನ್ನೈ, ಹೈದರಾಬಾದ್, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ ಹೀಗೆ ಅನೇಕ ಕಡೆಗಳಿಗೆ ವಲಸೆಗೆ ಹೋಗುವವರ ಪ್ರಮಾಣ ಶೇ.50ರಷ್ಟಕ್ಕೆ ಏರಿದೆ. ಬರಗಾಲದಲ್ಲೂ ಕುಟುಂಬ ನಿರ್ವಹಿಸಲೇಬೇಕಿದ್ದು, ವಲಸೆ ಅನಿವಾರ್ಯ ಎನ್ನುತ್ತಿದ್ದಾರೆ. ಸಣ್ಣ ಹಿಡುವಳಿದಾರರು, ಭೂಮಿ ಇಲ್ಲದವರು, ಶ್ರಮಿಕ ವರ್ಗದ ಕುಟುಂಬ ಸದಸ್ಯರು ಊರು ಬಿಡುತ್ತಿದ್ದಾರೆ. ಇನ್ನೂ ಕೆಲವರು ಜಿಲ್ಲೆಯ ಗ್ರಾಮೀಣ ಭಾಗದಿಂದ ಬೆಳಗ್ಗೆ 6ಗಂಟೆಗೆ ಮನೆ ಯಿಂದ ಹೊರಟು ಕಲಬುರಗಿಯಂತಹ ಪಟ್ಟಣಗಳಿಗೆ ಬಂದು ಕೆಲಸಕ್ಕೆ ಕಾಯುವವರ ಗುಂಪು ಸೇರುತ್ತಾರೆ. ಅಲ್ಲಿಂದ ಯಾರಾದರೂ ಕೆಲಸಕ್ಕೆ ಕರೆದರೆ ಹೋಗಿ ಮರಳಿ ಮನೆ ಸೇರುತ್ತಾರೆ. ಕೆಲವೊಮ್ಮೆ ಕೆಲಸಗಳು ಇಲ್ಲದೇ ಗಂಟೆಗಳ ಕಾಲ ಕಾದು ನಿರಾಶೆ ಹೊತ್ತು ಮನೆಗೆ ಮರಳುತ್ತಾರೆ. ಜನರ ವಲಸೆಯಿಂದ ಕಲಬುರಗಿ ನಗರ ವ್ಯಾಪ್ತಿಯಲ್ಲಿ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಿತ್ಯ ಜನದಟ್ಟಣೆ (ಶೇ.50ರಷ್ಟು ಹೆಚ್ಚಳ) ಆಗುತ್ತಿದೆ ಎಂದು 'ಡಿಎಚ್'ವರದಿ ಮಾಡಿದೆ.
ರಾಜ್ಯದಲ್ಲಿ ಬರಗಾಲ ಆತಂಕ ಹೆಚ್ಚಾಗಿದೆ. ಮಳೆ ಇಲ್ಲದೇ ಬೆಳೆದ ಬೆಳೆ ಹುಟ್ಟಲಿಲ್ಲ. ವಾರದಲ್ಲಿ ಮೂರು ದಿನವು ಕೆಲಸ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕಲ್ಯಾಣ ಕರ್ನಾಟದ ಭಾಗದ ಏಳು ಜಿಲ್ಲೆಗಳಲ್ಲಿ ಈ ವರ್ಷ 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಬರೀ 11.36 ಲಕ್ಷೆ ಹೆಕ್ಟೇರ್‍ನಲ್ಲಿ ಮಾತ್ರವೇ ಬಿತ್ತನೆ ಆಗಿದೆ. ಬಿತ್ತಿದ ಬೆಳೆ ಮೊಳಕೆಯೊಡೆಯಲು ಸಹ ಸೂಕ್ತ ಮಳೆ ಇಲ್ಲದೇ ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಮುಂಗಾರು ನೆಚ್ಚಿಕೊಂಡು ಬಿತ್ತನೆಗಾಗಿ ಸುಮಾರು 40,000 ರೂಪಾಯಿ ಖರ್ಚು ಮಾಡಲಾಯಿತು. ಆದರೆ ಮಳೆಯೂ ಇಲ್ಲ, ಬೆಳೆಯೂ ಇಲ್ಲದ ನಷ್ಟ ಅನುಭವಿಸುತ್ತಿದ್ದೇವೆ ಎಂದು ರೈತ ರಂಗಪ್ಪ ತಿಳಿಸಿದ್ದಾರೆ. ಈ ಭಾಗದಲ್ಲಿ ಶೇ.36ರಷ್ಟು ಮಳೆ ಕೊರತೆ ಆಗಿದೆ. ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ, ಕೆಲಸಗಳು ಸೃಷ್ಟನೆ ಆಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸಲಿದೆ. ಇನ್ನೂ ಮಳೆ ಆಶ್ರಿತ ರೈತರಿಗೆ ಮಳೆ ಕೊರತೆ ಆಗಿದೆ. ಅವರು ಮಾತ್ರವಲ್ಲದೇ ನೀರಾವರಿ ವ್ಯವಸ್ಥೆ ಹೊಂದಿರುವ ಸಣ್ಣ ಹಿಡುವಳಿದಾರರು ಸಹಿತ ಮುಂಬೈ, ಬೆಂಗಳೂರು, ಹೈದರಾಬಾದ್ ನತ್ತ ವಲಸೆ ಹೋಗುತ್ತಿದ್ದಾರೆ ಎಂದು ವರದಿ ಆಗಿದೆ. ಕಲಬುರಗಿಯ ಚಂದ್ರನಗರದಲ್ಲಿ ಶೇ.50ರಷ್ಟು ಮಂದಿ ಉದ್ಯೋಗವರಸಿ ವಲಸೆ ಹೋಗುತ್ತಾರೆ. ಮಕ್ಕಳನ್ನು ನೋಡಿಕೊಳ್ಳಲು ಮನೆ ಮುಂದೆ ವೃದ್ಧರು ಇರುತ್ತಾರೆ. ಮನೆ, ರಸ್ತೆಗಳು ಬಿಕೋ ಎನ್ನುತ್ತವೆ. ಪಟ್ಟಣಗಳಲ್ಲಿ ಕೆಲಸ ಸಿಗದಿದ್ದಾಗ ಒಂದಷ್ಟು ದಿನ ನೋಡುವ ನಿವಾಸಿಗಳು ಕಾಯುವ ಗೊಡವೆಯೇ ಬೇಡವೆಂದು ಬೇರೆ ಊರುಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಹೊಟ್ಟೆ ಹೊರೆ ತುಂಬಿಸಿಕೊಳ್ಳಲು ಈ ಭಾಗದ ಜನರು ಮಂಗಳೂರು, ಪುತ್ತೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಲೆನಾಡಿನ ಭಾಗದಲ್ಲಿ ಕಾಫಿ ತೋಟದಲ್ಲಿ ನಿರತಾಗಿದ್ದಾರೆ. ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡುತ್ತಾ ಬರಗಾಲದ ಜೀವನ ಬಂಡಿ ಸಾಗಿಸುತ್ತಿದ್ದಾರೆ. ರೈತರು ಸೇರಿದಂತೆ ಜನಸಾಮಾನ್ಯರಿಗೆ ಬಂದೊದಗಿದ ಈ ಸಂಕಷ್ಟವು ಅವರ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಬಡತನ ಪ್ರಮಾಣ ಹೆಚ್ಚಾಗುವ ಜೊತೆಗೆ ಜನರ ಆರೋಗ್ಯವು ಹದಗೆಡುವೆ ಸಾಧ್ಯತೆ ಇದೆ ಎಂದು ರಾಯಚೂರು ಸಂಸದ ಕುಮಾರ್ ನಾಯಕ್ ಅವರು ಪ್ರತಿಕ್ರಿಯಿಸಿದ್ದಾರೆ. ನರೇಗಾ ಯೋಜನೆಯಡಿ ಕೂಲಿ ಕೆಲಸ ಕೊಡಬೇಕಾದ ರಾಜ್ಯ ಸರ್ಕಾರವು, ನರೆಗಾ ಯೋಜನೆ ಹೆಸರು 'ವಿಬಿ-ಜಿ-ರಾಮ್ ಜಿ' ಎಂದು ಬದಲಾಗಿದ್ದು, ಅದರ ಪರಿವರ್ತನೆಯ ಸವಾಲು ಎದುರಿಸುತ್ತಿದೆ. ಈ ಕಾರ್ಯದಲ್ಲಿ ರಾಯಚೂರು ಜಿ.ಪಂ ನಿರತವಾಗಿದೆ. ಒಟ್ಟಾರೆ ಬರಗಾಲ ಕಲ್ಯಾಣ ಕರ್ನಾಟಕದ ಭಾಗದ ಜನರನ್ನು ಹೆಚ್ಚು ಬಾಧಿಸುತ್ತಿದೆ.ಬರಗಾಲ: ಬಿತ್ತನೆ ಪ್ರಮಾಣ ಭಾರೀ ಇಳಿಕೆ, ಆರ್ಥಿಕ ನಷ್ಟ
Karnataka Rains: ಆರ್ಭಟಿಸಿದ್ದ ಮುಂಗಾರು ದುರ್ಬಲ! ಬರೀ 7 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ, ಮತ್ತೆ ಬರ ಭೀತಿ
ಶೇ.36ರಷ್ಟು ಮಳೆ ಕೊರತೆ, ವಲಸೆ ಹೆಚ್ಚಳ
ಬಡತನ-ಅನಾರೋಗ್ಯ ಪ್ರಮಾಣ ಏರಿಕೆ ಸಂಭವ!
Karnataka Dam Water Level: ಭಾರೀ ಮಳೆ, ರಾಜ್ಯದ ಅಣೆಕಟ್ಟುಗಳ ಒಳಹರಿವು ಭಾರೀ ಹೆಚ್ಚಳ, ರೈತರಲ್ಲಿ ಹೊಸ ಭರವಸೆ