Chicken Price Hike: ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆಯ ಬೆಲೆಯು ಏಕಾಏಕಿ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಆಷಾಢ ತಿಂಗಳಲ್ಲಿ ಕೋಳಿ ಹಾಗೂ ಮೊಟ್ಟೆ ಸೇರಿದಂತೆ ವಿವಿಧ ಮಾಂಸಾಹಾರಕ್ಕೆ ಬೇಡಿಕೆ ಹೆಚ್ಚಾಗಿ ಇರಲ್ಲ. ಆದರೆ ಈ ಬಾರಿ ದಿಢೀರ್ ಎಂದು ಕೋಳಿ ಮಾಂಸದ ಬೆಲೆಯು ವಿಪರೀತ ಹೆಚ್ಚಳವಾಗಿದೆ. ಕೋಳಿ ಆಹಾರದ ಬೆಲೆ ಏರಿಕೆ ಆಗಿರುವುದು, ಪೂರೈಕೆಯಲ್ಲಿ ಕುಸಿತ ಹಾಗೂ ನೆರೆ ರಾಜ್ಯಗಳಿಗೆ ಕೋಳಿಯನ್ನು ರವಾನೆ ಮಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳಿಗೆ ಈ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಕೋಳಿ ಮಾಂಸದ ಬೆಲೆ ಏರಿಕೆಗೆ ಇನ್ನೂ ಬೇರೆ ಬೇರೆ ಕಾರಣಗಳು ಸಹ ಇವೆ. ಹಾಗಾದರೆ ಕೋಳಿ ಹಾಗೂ ಕೋಳಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವೇನು ಎನ್ನುವ ವಿವರ ಈ ಲೇಖನದಲ್ಲಿದೆ.
ಆಷಾಢ ಮಾಸದಲ್ಲೂ ಕೋಳಿ ಮಾಂಸಕ್ಕೆ (Chicken) ಭಾರೀ ಬೇಡಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಕರ್ನಾಟಕದ ಮಾಂಸಕ್ಕೆ ಭಾರೀ ಬೇಡಿಕೆ ಇರುವುದು ಸಹ ಕರ್ನಾಟಕದಲ್ಲಿ ಕೋಳಿ ಮತ್ತು ಕೋಳಿ ಮೊಟ್ಟೆಯ ಬೆಲೆ ದುಬಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೋಳಿಗೆ ನೀಡುವ ಆಹಾರದ ಬೆಲೆ ಹೆಚ್ಚಾಗಿರುವುದರಿಂದ ಸಾಕಾಣಿಕೆಗೆ ಹಿನ್ನಡೆ ಆಗುತ್ತಿದೆ. ಅಲ್ಲದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಆಷಾಢ ಮಾಸದಲ್ಲೂ ಮದುವೆ, ಗೃಹಪ್ರವೇಶ ಹಾಗೂ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಈ ತಿಂಗಳಿನಲ್ಲಿ ಶುಭ ಕಾರ್ಯಗಳ ಸಂಖ್ಯೆಯೂ ಕಡಿಮೆ ಇರುವುದರಿಂದ ಮಾರಾಟಕ್ಕೆ ಬರುವ ಕೋಳಿ ಸಂಖ್ಯೆ ಕಡಿಮೆ ಇರಲಿದೆ. ಆದರೆ ಇದೀಗ ವಿಚಿತ್ರವಾಗಿ ಕೋಳಿಗೆ ಹೆಚ್ಚು ಬೇಡಿಕೆ ಉಂಟಾಗಿದ್ದು, ಚಿಕನ್ ಬೆಲೆ ಹೆಚ್ಚಳವಾಗುತ್ತಿದೆ.
ಇನ್ನು ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೋಳಿ ಮಾಂಸ - ಕೋಳಿ ಮೊಟ್ಟೆ ಬೆಲೆಯು ಭಾರೀ ಹೆಚ್ಚಳವಾಗಿದೆ. ಕರ್ನಾಟಕದ ಕೋಳಿ ಸಾಕಾಣಿಕೆದಾರರು ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧ ಹೊರ ರಾಜ್ಯಗಳಿಗೆ ಹೆಚ್ಚು ಪ್ರಮಾಣದಲ್ಲಿ ಕೋಳಿ ಮಾರಾಟ ಮಾಡುತ್ತಾರೆ. ಇದರಿಂದ ಪರೋಕ್ಷವಾಗಿ ನಗರದಲ್ಲಿ ಕೋಳಿಗಳ ಸರಬರಾಜು ಕಡಿಮೆ ಆಗಿದೆ. ಒಂದು ಕೆಜಿ ಕೋಳಿ ಮಾಂಸದ ಬೆಲೆಯು 360 ರೂಪಾಯಿ ಹಾಗೂ ಮೊಟ್ಟೆ ಬೆಲೆಯು 9 ರೂಪಾಯಿ ಆಗಿದೆ. ವಾರಾಂತ್ಯ, ರಜಾದಿನಗಳು ಮತ್ತು ಹಬ್ಬದ ಅವಧಿಗಳು ಹೆಚ್ಚಾಗಿ ಬೇಡಿಕೆಯನ್ನು ಹೆಚ್ಚಿಸಿದೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ಬೆಲೆ ಹೆಚ್ಚಳವಾಗಿದೆ. 16 ಜುಲೈ 2026 ರಂದು ಕೋಳಿ ಬೆಲೆಗಳು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಚಿಕನ್ ಬಳಕೆ ಹೆಚ್ಚಾಗುತ್ತಿದೆ. ಮನೆ ಅಡುಗೆ, ರೆಸ್ಟೋರೆಂಟ್‌ಗಳು, ಬೀದಿಬದಿ ಆಹಾರ ವ್ಯಾಪಾರದಲ್ಲೂ ಹೆಚ್ಚಾಗಿದೆ. ಪ್ರೋಟೀನ್ ಮೌಲ್ಯ, ರುಚಿ ಸೇರಿದಂತೆ ಹಲವು ಕಾರಣಕ್ಕೆ ಜನ ಹೆಚ್ಚಾಗಿ ಚಿಕನ್ ಬಳಕೆ ಮಾಡುತ್ತಿದ್ದಾರೆ. ಇದೂ ಸಹ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.ಎಷ್ಟಾಗಿದೆ ಚಿಕನ್ - ಕೋಳಿ ಮೊಟ್ಟೆ ಬೆಲೆ, ಹೆಚ್ಚಳಕ್ಕೆ ಕಾರಣವೇನು