Central Jail: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜೈಲಿನಿಂದ 8 ಕೈದಿಗಳು ಪರಾರಿಯಾಗಿದ್ದರು: ಸಚಿವ ಪ್ರಿಯಾಂಕ್ ಖರ್ಗೆ


Central Jail: ಕರ್ನಾಟಕದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂರು ಕೈದಿಗಳು ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂರು ಕೈದಿಗಳು ತಪ್ಪಿಸಿಕೊಂಡ ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪಕ್ಕಾಗಿ ಸಂಬಂಧಿಸಿದ ಜೈಲಾಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮುಂದುವರಿದು ತಪ್ಪಿಸಿಕೊಂಡ ಕೈದಿಗಳ ಸೆರೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಈಗ ಓರ್ವ ಕೈದಿಯನ್ನು ಸೆರೆ ಹಿಡಿಯಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

Advertisement

ನಾನು ಗೃಹಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಗೃಹ ಇಲಾಖೆಯ ಪ್ರತಿ ವಿಭಾಗಗಳ ಪರಿಶೀಲನಾ ಸಭೆ ನಡೆಸಿ, ಅದರ ಎಲ್ಲಾ ವಿಭಾಗಗಳ ಬಲವರ್ಧನೆಗೆ, ಉನ್ನತೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಕಾರಾಗೃಹಗಳ ಸ್ಥಿತಿಗತಿಗಳ ಪರಿಶೀಲನೆ ಮತ್ತು ಬಂದೀಖಾನೆಗಳ ಸಿಬ್ಬಂದಿಯ ಕಾರ್ಯಕ್ಷಮತೆಯ ಪರಿಶೀಲನೆ ನಡೆಸಲಿದ್ದೇನೆ. ಜೈಲುಗಳ ಸುಧಾರಣೆ, ಭದ್ರತಾ ವ್ಯವಸ್ಥೆಯ ಉನ್ನತೀಕರಣ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವಂತಹ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ.

Advertisement

ಟೀಕೆಗಳಿಗೆ ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು. 2010ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ 8 ಕೈದಿಗಳು ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಪ್ರಕರಣ ಎಂದು ಪರಿಗಣಿಸಬಹುದು. ಇದು ಅಂದಿನ ಗೃಹಸಚಿವರ ವೈಫಲ್ಯವೆಂದು ಬಿಜೆಪಿ ಹೇಳುತ್ತದೆಯೇ? ಬಿಜೆಪಿ ಅವಧಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅತಿಥಿ ಗೃಹವಾಗಿ ಬದಲಾಗಿ, ಕೈದಿಗಳಿಗೆ ಸಕಲ ಸವಲತ್ತುಗಳು ದೊರಕುತ್ತಿದ್ದ ಸುದ್ದಿಗಳನ್ನು ರಾಜ್ಯವೇ ನೋಡಿದೆ. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ಆದರೆ ಇದೀಗ ಈ ಟ್ವೀಟ್ ಟೀಕೆ ಹಾಗೂ ಟ್ರೋಲ್‌ಗೆ ಕಾರಣವಾಗಿದೆ.

Advertisement

ಆರ್‌ಎಸ್‌ಎಸ್ ಕಾರಣ ಇರಬೇಕು ಅಲ್ವಾ ಎಂದ ನೆಟ್ಟಿಗರು

ಇನ್ನು ಈ ಟ್ವೀಟ್‌ಗೆ ಹಲವು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ ಮಾಡ್ಸಿದ್ರೆ ಹಿಂಗೆ ಆಗುತ್ತಿರಲಿಲ್ಲ ಅಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ತಪ್ಪು ಆಗಿರಬಹುದು ಆದರೆ ಈಗ ಅದನ್ನು ಹೇಳಿ ಈಗ ನಡೆದಿರುವ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವು ಆಗುತ್ತಿರಬಹುದು. ಇಲಾಖೆಯ ಅಧಿಕಾರಿಗಳ ಮೇಲೂ ನಿಗಾ ಇರಲಿ ಸರ್ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಬಿಜೆಪಿಗರಿಗೆ ಎಲ್ಲದರಲ್ಲೂ ನಿಮ್ಮ ತಪ್ಪು ಕಾಣುತ್ತೆ ,ಇವರ ಲೆಕ್ಕದಲ್ಲಿ ಎಲ್ಲ ನೀವೇ ಪೊಲೀಸು ಅಧಿಕಾರಿಗಳ ಆಯ್ಕೆ ಮಾಡಿದ ಹಾಗೆ ಇದೆ. ಇವರ ಮಾತು ನೋಡುವಾಗ ಇವರ ಏಜೆಂಟ್ ಅಧಿಕಾರಿಗಳು ಓಡಿ ಹೋಗಲು ಸಹಾಯ ಮಾಡಿದ್ದಾರೆ ಎಂಬಂತಿದೆ ಎಂದೂ ಕೆಲವು ನೆಟ್ಟಿಗರು ಗಂಭೀರ ಆರೋಪ ಮಾಡಿದ್ದಾರೆ.

Advertisement

English Summary

Central Jail: 8 prisoners escaped from jail during the BJP government: Minister Priyank Kharge