BPL Card: ರಾಜ್ಯದಲ್ಲಿ ಸರ್ಕಾರವು ಯಾರೆಲ್ಲಾ ಅರ್ಹ ಫಲಾನುಭವಿಗಳ ಬಳಿಯ ಬಿಪಿಎಲ್ ಕಾರ್ಡ್ ರದ್ದಾಗಿವೆಯೋ, ಅಂತಹವರು ಮತ್ತೆ ಅರ್ಜಿ ಸಲ್ಲಿಸಿ ಹಿಂಪಡೆಯಬಹುದು ಎಂದು ತಿಳಿಸಿತ್ತು. ಇದೀಗ ಇದೇ ಪಡಿತರ ಚೀಟಿ ವಿತರಣೆ ಕುರಿತು ಬಿಗ್ ಅಪ್ಡೇಟ್‌ವೊಂದನ್ನ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಸರ್ಕಾರವು ಇತ್ತೀಚೆಗಷ್ಟೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಮುಂದಾಗಿತ್ತು. ಇದೇ ವೇಳೆ ಅರ್ಹರ ಬಳಿಯ ಈ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆಗ ಸರ್ಕಾರ ಯಾರೆಲ್ಲಾ ಅರ್ಹರ ಬಳಿಯ BPL ಕಾರ್ಡ್ ರದ್ದಾಗಿವೆಯೋ ಅವರು ಮತ್ತೆ ಅರ್ಜಿ ಸಲ್ಲಿಕೆ ಮಾಡಿ ವಾಪಾಸ್ ಪಡೆಯಬಹುದು ಎಂದು ನೆಮ್ಮದಿಯ ಸುದ್ದಿ ನೀಡಿತ್ತು.
ಅದರಂತೆಯೇ ಇತ್ತೀಚೆಗಷ್ಟೇ ಅರ್ಹರು ಅರ್ಜಿ ಸಲ್ಲಿಕೆ ಮಾಡಿ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ಹಿಂಪಡೆಯಬಹುದು ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಇದೀಗ ಅನಾರೋಗ್ಯಕ್ಕೆ ಒಳಗಾದವರಿಗೆ ಬೇಗನೇ ಕಾರ್ಡ್ ವಿತರಣೆ ಮಾಡುವಂತೆ ಕಟ್ಟಿನಿಟ್ಟಿನ ಸೂಚನೆ ನೀಡಲಾಗಿದೆ ಎನ್ನುವ ಅಪ್ಡೇಟ್ ಮಾಹಿತಿ ಲಭ್ಯವಾಗಿದೆ. 'ತುರ್ತು ಆರೋಗ್ಯ ಸೇವೆಗಳ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಸರ್ಕಾರ ಉತ್ತಮ ಅವಕಾಶ ನೀಡಿದೆ. ಅನಾರೋಗ್ಯ ಪೀಡಿತರಿಗೆ ಯಾವುದೇ ವಿಳಂಬವಿಲ್ಲದೆ 15 ದಿನಗಳ ಒಳಗಾಗಿ ಕಾರ್ಡ್ ವಿತರಿಸುವಂತೆ ಸರ್ಕಾರವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ,' ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಅವರು ತಿಳಿಸಿದರು ಎಂದು ತಿಳಿದುಬಂದಿದೆ. * ಗ್ರಾಮೀಣ ಪ್ರದೇಶದಲ್ಲಿ ಇರುವವರಿಗೆ ಕುಟುಂಬದ ಒಟ್ಟು ವಾರ್ಷಿಕ ಆದಾಯವು 1.20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರಬಾರದು. ಇನ್ನೂ ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಹಾಗಾದ್ರೆ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು ಹಾಗೂ ಬೇಕಾಗುವ ದಾಖಲೆಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. * ಹೊಸ ಸದಸ್ಯರ ಹೆಸರು ಸೇರ್ಪಡೆ * ಆಧಾರ್ ಕಾರ್ಡ್ * ಮದುವೆ ಪ್ರಮಾಣ ಪತ್ರ * ಪೋಷಕರ ಪಡಿತರ ಚೀಟಿ * ಮಗುವಿನ ಜನನ ಪ್ರಮಾಣಪತ್ರ * ಬೆಂಗಳೂರು ಒನ್ * ಅಧಿಕೃತ ವೆಬ್‌ಸೈಟ್ https://ahara.kar.nic.in/home ಗೆ ಭೇಟಿ ನೀಡಿ ಬಿಪಿಎಲ್ ಕಾರ್ಡ್ ವಿತರಣೆ ಕುರಿತು ಅಪ್ಡೇಟ್ ಮಾಹಿತಿ
ಬಿಪಿಎಲ್ ಕಾರ್ಡ್ ಮರುಪಡೆಯಲು ಏನೆಲ್ಲಾ ಷರತ್ತುಗಳಿವೆ?
* ನಗರ ಪ್ರದೇಶದಲ್ಲಿರುವವರಿಗೆ ವಾರ್ಷಿಕ ಕುಟುಂಬ ಆದಾಯ 1.50 ಲಕ್ಷ ರೂಪಾಯಿ ಒಳಗೆ ಇರಬೇಕಾಗುತ್ತದೆ.
* ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
* ಅರ್ಜಿದಾರರ ಹೆಸರಿನಲ್ಲಿ 7 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಇರಬಾರದು.
* ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
* ಒಂದು ಕುಟುಂಬವು 3 ಹೆಕ್ಟೇರ್‌ಗಳಿಗಿಂತ (7.5 ಎಕರೆ) ಹೆಚ್ಚು ಕೃಷಿ ಭೂಮಿಯನ್ನು ಹೊಂದಿರಬಾರದು
* ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರಬಾರದು
* ಕುಟುಂಬವು 4 ಚಕ್ರದ ವಾಹನನ್ನು ಹೊಂದಿರಬಾರದು.
* ಮಾಸಿಕ ವಿದ್ಯುತ್ ಬಿಲ್ 450 ರೂಪಾಯಿಗಿಂತ ಹೆಚ್ಚಿರಬಾದು.ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ
ಏನೆಲ್ಲ ತಿದ್ದುಪಡಿಗೆ ಅವಕಾಶ?
* ನ್ಯಾಯಬೆಲೆ ಅಂಗಡಿ ವಿಳಾಸ ಬದಲಾವಣೆ
* ಮೊಬೈಲ್ ಸಂಖ್ಯೆ ಜೋಡಣೆ
* ಹೆಸರು ತೆಗೆದುಹಾಕುವುದು
* ಕುಟುಂಬದ ಮುಖ್ಯಸ್ಥರ ಬದಲಾವಣೆ
* ಫೋಟೋ ಬದಲಾವಣೆಪತ್ನಿ ಹೆಸರು ಸೇರ್ಪಡೆಗೆ ಬೇಕಾಗುವ ದಾಖಲೆಗಳು
ಮಗುವಿನ ಹೆಸರು ಸೇರ್ಪಡೆಗೆ ಬೇಕಾದ ದಾಖಲೆಗಳು
* ಪೋಷಕರ ಆಧಾರ್ ಕಾರ್ಡ್ಎಲ್ಲೆಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು?
* ಗ್ರಾಮ ಒನ್
* ಕರ್ನಾಟಕ ಒನ್ ಸೇರಿದಂತೆ ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು.ಪಡಿತರ ಚೀಟಿ ತಿದ್ದುಪಡಿ ವಿಧಾನಗಳು
* ಮುಖ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ.
* ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.
* ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
* ಬಳಿಕ ಅಲ್ಲಿ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ.
* ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿ.
* ಅರ್ಜಿ ಸಲ್ಲಿಕೆ ವೇಳೆ ನೀವು ನೀಡಿರುವಂತಹ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಮಾತ್ರ ನಿಮಗೆ ಅಪ್ಡೇಟ್ ಆಗಿರುವ ಹೊಸ ರೇಷನ್ ಕಾರ್ಡ್ ನಿಮ್ಮ ಮನೆಗೆ ಬರಲಿದೆ.