ಬೆಂಗಳೂರು: ಸ್ಥಳೀಯ ಪ್ರಯಾಣಿಕರಿಗೆ ಉತ್ತಮ ಸೇವೆ, ನಗರ ರೈಲ್ವೆ ಸಾರಿಗೆ ಸುಧಾರಣೆಗೆ ಮುಂದಾಗಿರುವ ರೈಲ್ವೆ ಮಂಡಳಿಯು ಅರಸೀಕರೆ-ಯಲಹಂಕ ಮಾರ್ಗದಲ್ಲಿ ಮೆಮು ರೈಲುಗಳ ಸೇವೆ ಆರಂಭಕ್ಕೆ ಈಗಾಗಲೇ ಚಾಲನೆ ನೀಡಿದೆ. ಉದ್ಘಾಟನೆಗೂ ಒಂದು ದಿನ ಮುನ್ನ ಜುಲೈ 13ರಂದು ಉದ್ದೇಶಿತ ಮಾರ್ಗದಲ್ಲಿ ಮೆಮು ರೈಲುಗಳ ಸಂಚಾರ ನಡೆಯಲಿದೆ. ಜುಲೈ 14ರಂದು ಅಧಿಕೃತ ಚಾಲನೆ ನೀಡಲಾಗುತ್ತದೆ.
ನಾಳೆ ಮಂಗಳವಾರ ತಿಪಟೂರು ರೈಲು ನಿಲ್ದಾಣದಲ್ಲಿ ಮಧ್ಯಾಹ್ನ 3.45ಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮೆಮು ರೈಲುಗಳ ಸೇವಾರಂಭಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಒಟ್ಟು ಸುಮಾರು 26 ನಿಲ್ದಾಣಗಳ ಜನರಿಗೆ ಈ ಮೆಮು ರೈಲುಗಳ ಸೇವೆಯ ಪ್ರಯೋಜನ ಸಿಗಲಿದೆ. ಮೆಮು ರೈಲುಗಳ ಸೇವೆ ಅರಸೀಕೆರೆ, ತಿಪಟೂರು, ಯಶವಂತಪುರ, ಯಲಹಂಕ ಸೇರಿದಂತೆ ನೂರಾರು ಪ್ರಯಾಣಿಕರಿಗೆ ಸಿಗಲಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
* ಅರಸೀಕೆರೆ-ಯಲಹಂಕದ ನಡುವಿನ ಸಂಪರ್ಕ ವೃದ್ಧಿ. ಸಾರ್ವಜನಿಕರ ಅನುಕೂಲಕ್ಕಾಗಿ ಮೆಮು ರೈಲುಗಳನ್ನು ವಾರದಲ್ಲಿ ಭಾನುವಾರ ಬಿಟ್ಟು ಆರು ದಿನ ಲಭ್ಯವಿರಲಿದೆ. ಎರಡು ದಿಕ್ಕಿನಲ್ಲಿ ಈ ರೈಲುಗಳು ಸಂಚರಿಸಲಿವೆ. ಜುಲೈ 14ರಂದು ಉದ್ಘಾಟನೆಯ ದಿನ ವಿಶೇಷ ಉದ್ಘಾಟನಾ ರೈಲನ್ನು ಕಾರ್ಯಾರಣೆ ಮಾಡಲು ನಿರ್ಧರಿಸಲಾಗಿದೆ. ಮಧ್ಯಮ ವರ್ಗದ ಪ್ರಯಾಣಿಕರಿಗೆ ಆರಾಮದಾಯಕ, ಕಡಿಮೆ ಖರ್ಚಿನಲ್ಲಿ ಸಾರಿಗೆ ನೀಡುವ, ಮುಖ್ಯವಾಗಿ ರೈಲು ಸಾರಿಗೆ ಸುಧಾರಿಸುವ ಉದ್ದೇಶ ಇಲಾಖೆ ಹೊಂದಿದೆ. ಈ ಮೆಮು ರೈಲು (66505) ಪ್ರತಿದಿನ ಬೆಳಗ್ಗೆ 6.45ಕ್ಕೆ ಯಲಹಂಕ ನಿಲ್ದಾಣ ಬಿಡುತ್ತದೆ. ಬೆಳಗ್ಗೆ 11 ಗಂಟೆಗೆ ಅರಸಿಕೇರೆ ತಲುಪುತ್ತದೆ. ಅಲ್ಲಿಂದ ಕೊಡಿಗೇಹಳ್ಳಿ, ಯಶವಂತಪುರ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ಬೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗಹಳ್ಳಿ, ನಿಡವಂದ, ದಾಬಾಸ್‌ಪೇಟೆ, ಹಿರೇಹಳ್ಳಿ, ಕ್ಯಾತಸಂದ್ರ, ತುಮಕೂರು, ಹೆಗ್ಗೆರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರಸ್ತೆ, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರ್ಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀಶಾರದಾ ಹೊನ್ನವಳ್ಳಿ ರೋಡ್ ಮಾರ್ಗವಾಗಿ ಮೆಮು ರೈಲುಗಳು ಎರಡು ದಿಕ್ಕಿನಲ್ಲಿ ಸಂಚರಿಸುತ್ತವೆ. ಈ ಎಲ್ಲ ನಿಲ್ದಾಣಗಳಲ್ಲಿ ರೈಲುಗಳು ನಿಲುಗಡೆ ನೀಡುತ್ತವೆ. ಪ್ರಯೋಜನಗಳೇನು?
* ದೀಘಕಾಲದಿಂದ ಬಾಕಿ ಇರುವ ಪ್ರಾದೇಶಿಕ ಬೇಡಿಕೆ ಈಡೇರಿಸುವುದು.
* ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಅಗತ್ಯ ಸೇವೆಗಳಿಗೆ ಸುಗಮ ಸಂಪರ್ಕ ಮತ್ತು ಸುಲಭ ಪ್ರವೇಶವನ್ನು ಸಿಗುತ್ತದೆ.
* ಅರಸೀಕರೆ ಮತ್ತು ಯಲಹಂಕದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಕ್ಕಂತಾಗುತ್ತದೆ.Vande Bharat ರೈಲಿನಲ್ಲಿ ಕಳಪೆ ಹಾಲು ನೀಡಿ ವಂಚನೆ?, ಕಾಂಗ್ರೆಸ್ ನಾಯಕನ ವಿಡಿಯೋ ವೈರಲ್, IRCTC ಪ್ರತಿಕ್ರಿಯೆ
8 ಕೋಚ್‌ಗಳ ಮೆಮು ರೈಲು
ಸಂಚಾರ ಸಮಯ, ಮಾರ್ಗ, ನಿಲ್ದಾಣಗಳ ವಿವರ