ನವದೆಹಲಿ: ದೇಶವ್ಯಾಪಿ ರೈಲು ಪ್ರಯಾಣಿಕರಿಂದ ಭಾರೀ ಮೆಚ್ಚುಗೆ ಪಡೆದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಆಗಾಗ ನಕಾರಾತ್ಮಕ ವಿಷಯಗಳಿಂದಲೂ ಸುದ್ದಿಯಾಗುತ್ತದೆ. ಇದೀಗ ರೈಲು ಪ್ರಯಾಣಿಕರಿಗೆ ಆಹಾರದಲ್ಲಿ ನೀಡಲಾದ ಹಾಲಿನ ಗುಣಮಟ್ಟದ ಕುರಿತು ಗಂಭೀರ ಚರ್ಚೆಗಳು ಶುರುವಾಗಿದೆ. ಇದು ಹಾಲಾ ಅಥವಾ ರಸಾಯನಿಕವಾ? ಎಂದು ಪ್ರಯಾಣ ಮಾಡುತ್ತಿದ್ದ ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನಿಸಿದ್ದಾರೆ. IRCTC ಹಾಗೂ ರೈಲ್ವೆ ಸಚಿವರಿಗೆ ಟ್ಯಾಗ್ ಮಾಡಿ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಜಾಮುದ್ದೀನ್ ನಿಂದ ಝಾನ್ಸಿ ಕಡೆಗೆ ಎಂದಿನಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22470) ಪ್ರಯಾಣ ಬೆಳೆಸಿದೆ. ಇದರಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಅವರು ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಸ್ಯ್ನಾಕ್ಸ್ ನಲ್ಲಿ ಒದಗಿಸಲಾದ "ಹಾಲು" ನೋಡಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಗುಣಮಟ್ಟ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವತಃ ರಾಜಕಾರಣಿಯೊಬ್ಬರಿಗೆ ಈ ರೀತಿ ಆದಾಗ ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆಯು ಉದ್ಭವಿಸಿದೆ.
ಈ ಕುರಿತು ಸಚಿವರು ಎಕ್ಸ್ ಖಾತೆಯಲ್ಲಿ ಎಕ್ಸ್ ಪೋಸ್ಟ್ ಮಾಡಿದ್ದು, ಅದರಲ್ಲಿ ತಮಗೆ ಪ್ರಯಾಣದ ವೇಳೆ ಆದ ಅನುಭವ, ವಂದೇ ಭಾರತ್ ರೈಲಿನಲ್ಲಿ ಒದಗಿಸಲಾಗುತ್ತಿರುವ ಆಹಾರ ಗುಣಮಟ್ಟ ಬಗ್ಗೆ ಕಿಡಿ ಕಾರಿದ್ದಾರೆ. ಅವರ ಆನ್‌ಲೈನ್ ದೂರಿಗೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (IRCTC) ಪ್ರತಿಕ್ರಿಯಿಸಿದೆ. ರಾಜೇಂದ್ರ ಪಾಲ್ ಅವರು, 'IRCTC ಮತ್ತು ಭಾರತೀಯ ರೈಲ್ವೆ ಪ್ರಯಾಣಿಕರ ಆರೋಗ್ಯದೊಂದಿಗೆ ಈ ರೀತಿ ಆಟವಾಡುತ್ತವೆಯೇ' ಎಂದು ವಿಡಿಯೋಗೆ ಶಿರ್ಷಿಕೆ ನೀಡಿದ್ದಾರೆ. ಕಾರ್ನ್ ಫ್ಲೇಕ್ಸ್ ಜೊತೆಗೆ ಹಾಕಿಕೊಳ್ಳಲು ನೀಡಲಾದ ಹಾಲು ಹಾಲಿನಂತೆ ಕಾಣುತ್ತಿಲ್ಲ. ಬದಲಾಗಿ ರಸಾಯನಿಕದಂತೆ ಕಾಣಿಸುತ್ತಿದೆ. ಇದು ತುಂಬ ನಾಚಿಕೆಗೇಡಿನ ಸಂಗತಿ. ಈ ಹಾಲು ನೋಡಿದರೆ ನಕಲಿ ರಸಾಯನಿಕದಿಂದ ಮಾಡಲ್ಪಟ್ಟಿದೆ. ಇಂತಹ ಕಳಪೆ ಹಾಲು ನೀಡಿ ರೈಲ್ವೆ ಇಲಾಖೆ ಪ್ರಯಾಣಿಕರನ್ನು ವಂಚಿಸುತ್ತಿದೆ ಎಂದು ಅವರು ದೂರಿದರು. ಇನ್ನೂ ವಿಡಿಯೋದಲ್ಲಿ ಹಾಲು ಒಡಕು ಒಡಕು ರೀತಿಯಲ್ಲಿ ಮೊಸರಿನಂತೆ ಕಾಣಿಸುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೂಡಲೇ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಹಾಗೂ ಐಆರ್‍ಸಿಟಿಸಿ ಮುಖ್ಯಸ್ಥರು ಈ ಬಗ್ಗೆ ತನಿಖೆ ನಡೆಸಬೇಕು. ಜನರಿಗೆ ಆಗುತ್ತಿರುವ ವಂಚನೆ ತಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ನಿರ್ಲಕ್ಷ್ಯ ಅಥವಾ ಕಲಬೆರಕೆ ಸಹಿಸುವಿಲ್ಲ. ಈ ವಿಚಾರದಲ್ಲಿ ರಾಜಿ ಇಲ್ಲ ಎಂದ ಅವರು, ಕೂಡಲೇ ಕಂಪನಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ. ಇದರೊಂದಿಗೆ ತಮ್ಮ ರೈಲು, ಪಿಎನ್‌ಆರ್ ಸಂಖ್ಯೆಯ (PNR: 2955075897, VGLJ ರೈಲು ಸಂಖ್ಯೆ 22470, ದಿನಾಂಕ 11-07-2026 ರಂದು ಪ್ರಯಾಣ, ಕೋಚ್: E2 - 1,2,3,4) ಮಾಹಿತಿ ಒದಗಿಸಿದ್ದಾರೆ. ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (IRCTC), ರೈಲಿನಲ್ಲಿ ಸಿಬ್ಬಂದಿ ಒದಗಿಸಿದ ಹಾಲು ಅನುಮೋದಿ ಬ್ರ್ಯಾಂಡ್‌ನ ಉತ್ಪನ್ನವಾಗಿದೆ. OMFED ಬ್ರ್ಯಾಂಡ್‌ನ ಹಾಲು ನೀಡಲಾಗಿದೆ. ಇದರ ವ್ಯಾಲಿಟಿಡಿ 2027 ಆಗಸ್ಟ್ ಮೇ 12ರವರೆಗೆ ಇದೆ ಎಂದು ತಿಳಿಸಿದೆ. ಈ ಮೂಲಕ ಉತ್ತಮ ಹಾಲನ್ನು ಒದಗಿಸಿದ್ದೇವೆ ಎಂದು ತಿಳಿಸಿದೆ. ಮಾತ್ರವಲ್ಲದೇ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಐಆರ್‍ಸಿಟಿಸಿ ತರಾಟೆಗೆ ತೆಗೆದುಕೊಂಡಿದ್ದು, ಆಹಾರ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಮತ್ತೊಮ್ಮೆ ಸೂಚಿಸಿದೆ. ಮಜಂದೆ ಇಂಥಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಅಂತಲೂ ಭರವಸೆ ನೀಡಿದೆ. ಇದೇ ವಿಚಾರಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಒಬ್ಬರು, 'ನೀವು ಪ್ರತಿ ಬಾರಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವಾಗಲು ಇಂಥದ್ದೆ ಕಟ್ಟ ಅನುಭವ ಪಡೆದು ಹೊರ ಬರುತ್ತೀರಿ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ರೈಲಿನಲ್ಲಿ ನೀಡುವ ತಂಪು ಪಾನೀಯಗಳನ್ನು ಸರಿಯಾಗಿ ಪರಿಶೀಲಿಸಬೇಕೆಂದು' ಆಗ್ರಹಿಸಿದ್ದಾರೆ. ಮೂರನೇಯವರು ಈ ಹಾಲನ್ನು FSSAI ಗೆ ಕಳುಹಿಸಿ ಪರಿಶೀಲಿಸಬೇಕೆಂದು ತಿಳಿಸಿದ್ದಾರೆ. Reality Check: ಸಾರಿಗೆ ಸಚಿವರಿಗೇ 'ಚಿಲ್ಲರೆ ಕೊಡಿ ಇಲ್ಲ ಬಸ್‌ನಿಂದ ಇಳೀರಿ': BMTC ಬಸ್ ಡ್ರೈವರ್- ಕಂಡಕ್ಟರ್ ಅಮಾನತು
ಕಳಪೆ ಹಾಲು ನೀಡಿ ವಂಚನೆ?
IRCTC ಉತ್ತರವೇನು?
IMD Weather Forecast: ಮುಂದಿನ ಜುಲೈ 16ರ ತನಕ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ
ನೆಟ್ಟಿಗರ ಪ್ರತಿಕ್ರಿಯೆ ಏನು?