ರಾಜಧಾನಿ ಎಕ್ಸ್‌ಪ್ರೆಸ್‌ ಕಳ್ಳತನ ಪ್ರಕರಣ: ದಂಪತಿಗೆ ₹80 ಸಾವಿರ ಪರಿಹಾರ ನೀಡಲು ಆದೇಶ


ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ 3ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಚಿನ್ನದ ಮಾಂಗಲ್ಯ ಸರ ಹಾಗೂ ನಗದು ಇರುವ ಹ್ಯಾಂಡ್ ಬ್ಯಾಗ್ ಕಳ್ಳತನ ಆಗಿತ್ತು. ಈ ಪ್ರಕರಣದಲ್ಲಿ ವಸ್ತುಗಳನ್ನು ಕಳೆದುಕೊಂಡ ದಂಪತಿಗೆ ₹80 ಸಾವಿರ ಪರಿಹಾರ ನೀಡುವಂತೆ ಉತ್ತರ ರೈಲ್ವೆ ಪಂಜಾಬ್ ರಾಜ್ಯ ಗ್ರಾಹಕ ಆಯೋಗ ಆದೇಶವನ್ನು ನೀಡಿದೆ.

Advertisement

2021ರ ಡಿಸೆಂಬರ್ 14ರಂದು ದಂಪತಿಗಳು ತಮ್ಮ ಮಗುವಿನೊಂದಿಗೆ ಡಿಬ್ರುಗಢ-ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ 3ಎಸಿ ಕೋಚ್್ನಲ್ಲಿ ಪ್ರಯಾಣ ಮಾಡುವಾಗ ಸರಿಸುಮಾರು 15 ಗ್ರಾಂ ಚಿನ್ನದ ಮಾಂಗಲ್ಯ ಸರ, ₹5,000 ನಗದು ಮತ್ತು ಬ್ಯಾಂಕ್ ಪಾಸ್‌ಬುಕ್ ಇದ್ದ ಹ್ಯಾಂಡ್‌ಬ್ಯಾಗ್ ಕಳ್ಳತನ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

Advertisement


ಈ ಘಟನೆ ನಡೆದ ತಕ್ಷಣ ಕೋಚ್ ಅಟೆಂಡೆಂಟ್ ಅವರನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಪಟ್ಟರು ಅವರು ಸಿಗಲಿಲ್ಲ. ನಂತರ ರೈಲ್ವೆ ಇಲಾಖೆಯ ಭದ್ರತಾ ಪಡೆ (RPF) ಸಿಬ್ಬಂದಿ ಹಾಗೂ ಟಿಕೆಟ್ ಪರಿಶೀಲನೆ ಮಾಡುವವರಿಗೆ ಮಾಹಿತಿಯನ್ನು ನಿಡಿದ್ದು ನವದೆಹಲಿ ತಲುಪಿದ ನಂತರ ಜೀರೀ ಎಫ್ಐಆರ್ ದಾಖಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ಗ್ರಾಹಕ ಆಯೋಗವು, ರೈಲ್ವೆ ಇಲಾಖೆ ಸೇವೆಯಲ್ಲಿ ನಿರ್ಲಕ್ಷೆ ಮತ್ತು ಸೇವಾ ಲೋಪ ಕಂಡುಬಂದಿದೆ ಎಂದು ಅಭಿಪ್ರಾಯ ತಿಳಿಸಿದೆ. ದೂರು ಬಂದಿರಲಿಲ್ಲ ಎಂದು ರೈಲ್ವೆ ಇಲಾಖೆ ವಾದಿಸಿದರು, ಆರ್‌ಪಿಎಫ್ ದಾಖಲೆಗಳಲ್ಲಿ ಪ್ರಯಾಣಿಕರು ಕಳ್ಳತನ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರ ವಿಚಾರ ಇಲ್ಲಿ ಚರ್ಚೆಗೆ ಬಂದಿತ್ತು ಆದ್ದರಿಂದ ಇದು ರೈಲ್ವೆ ಇಲಾಖೆಯ ವಾದಕ್ಕೆ ವಿರುದ್ದವಾಗಿದೆ ಎಂದು ಆಯೋಗ ಹೇಳಿದೆ.

Advertisement
Vande Bharat ರೈಲಿನಲ್ಲಿ ಕಳಪೆ ಹಾಲು ನೀಡಿ ವಂಚನೆ?, ಕಾಂಗ್ರೆಸ್ ನಾಯಕನ ವಿಡಿಯೋ ವೈರಲ್, IRCTC ಪ್ರತಿಕ್ರಿಯೆ

ಇದಲ್ಲದೆ, ಘಟನೆ ನಡೆದ ಸಮಯದಲ್ಲಿ ಕೋಚ್ ಅಟೆಂಡೆಂಟ್ ಕರ್ತವ್ಯದಲ್ಲಿ ಇದ್ದರು ಎಂಬುದಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಅಥವಾ ಕರ್ತವ್ಯ ನಿರ್ವವಹಿಸಿರುವದರ ಬಗ್ಗೆ ಆಯೋಗಕ್ಕೆ ತಿಳಿಸಲು ರೈಲ್ವೆ ಇಲಾಖೆ ವಿಫಲವಾಗಿದೆ ಎಂದು ಆಯೋಗ ಗಮನಿಸಿದೆ.

ಗ್ರಾಹಕ ಆಯೋಗ ತನ್ನ ಆದೇಶದಲ್ಲಿ, ದೂರುದಾರರು ಕಳ್ಳತನ ಆಗಿರುವ ಬಗ್ಗೆ ತಕ್ಷಣವೇ ಆರ್್ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಹಾಗೂ ನವದೆಹಲಿಗೆ ತಲುಪಿದ ಬಳಿಕ ಜೀರೋ ಎಫ್ಐಆರ್ ದಾಖಲಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಎಂದು ಹೇಳಿದೆ. ಹೀಗಿರುವಾಗ ರೈಲ್ವೆ ಆಡಳಿತಕ್ಕೆ ಯಾವುದೆ ರೀತಿಯ ಮಾಹಿತಿ ಇರಲಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

Advertisement
ಪ್ರಯಾಣಿಕರೇ ಗಮನಿಸಿ: ಜುಲೈ 22ರಿಂದ ಈ ಮಾರ್ಗದ ರೈಲುಗಳ ಸಂಚಾರ ಭಾಗಶಃ ರದ್ದು, ಹಲವು ರೈಲುಗಳು ಲೇಟ್‌

ರೈಲ್ವೆ ಪ್ರಯಾಣಿಕರ ಸುರಕ್ಷತೆಯನ್ನು ಇಲಾಖೆ ಸಿಬ್ಬಂದಿಯ ಕರ್ತವ್ಯ ಆಗಿರುತ್ತದೆ, ಕೋಚ್‌ಗಳಲ್ಲಿ ಕರ್ತವ್ಯ ನಿರ್ವವಹಿಸುವ ಸಿಬ್ಬಂದಿಯ ಲಭ್ಯತೆ ಮತ್ತು ಭದ್ರತಾ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವವಹಿಸಬೇಕು ಎಂದು ಆಯೋಗ ತಿಳಿಸಿದೆ. ಸೇವೆಯಲ್ಲಿ ಆಗಿರುವ ನಿರ್ಲಕ್ಷಕ್ಕೆ ದಂಪತಿಯ ದೂರನ್ನು ಭಾಗಶಃ ಮಾನ್ಯಗೊಳಿಸಿ ಪರಿಹಾರ ನೀಡುವಂತೆ ಆದೇಶಿಸಿರುವುದಾಗಿ ಹೇಳಲಾಗಿದೆ.

ಈ ಹಿನ್ನಲೆಯಲ್ಲಿ ದಂಪತಿಗೆ ಕಳ್ಳತನದದಿಂದ ಉಂಟಾದ ನಷ್ಟಕ್ಕೆ ₹70 ಸಾವಿರ ಹಾಗೂ ಮಾನಸಿಕ ಹಿಂಸೆ ಮತ್ತು ತೊಂದರೆಗೆ ₹10 ಸಾವಿರ ಸೇರಿ ಒಟ್ಟು ₹80 ಸಾವಿರ ರೂಪಾಯಿ ಪರಿಹಾರವನ್ನು ಉತ್ತರ ರೈಲ್ವೆ ಇಲಾಖೆಗೆ ನೀಡುವಂತೆ ಪಂಜಾಬ್ ರಾಜ್ಯ ಆಯೋಗ ಆದೇಶಿಸಿದೆ.

English Summary

Theft Rajdhani Express: Rajdhani Express Theft Takes Dramatic Turn as Consumer Commission Rules Against Railways