ರೈಲು ಮತ್ತು ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಚೆರ್ತಲಾದಲ್ಲಿ ಪ್ರೀಮಿಯಂ ಟ್ರಾವೆಲ್ ಲೌಂಜೌ


ಕೇರಳದ ಚೆರ್ತಲಾ ರೈಲು ನಿಲ್ದಾಣದಲ್ಲಿ ದಕ್ಷಿಣ ರೈಲ್ವೆ ವಲಯವು ತನ್ನ ಮೊದಲ ಪ್ರೀಮಿಯಂ ಟ್ರಾವೆಲ್ ಲೌಂಜ್ ಸ್ಥಾಪಿಸಲು ಮುಂದಾಗಿದೆ. ತಿರುವನಂತಪುರಂ ವಿಭಾಗಕ್ಕೆ ಸೇರಿದ ಈ ನಿಲ್ದಾಣದಲ್ಲಿ ಈ ವಿಶೇಷವಾದ ಹವಾನಿಯಂತ್ರಿತ ಕೊಠಡಿಯನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಇದು ರೈಲು ಪ್ರಯಾಣಿಕರ ಅಷ್ಟೆ ಅಲ್ಲದೆ ಹೆದ್ದಾರಿ ಮಾರ್ಗದಲ್ಲಿ ಸಾಗುವ ಪ್ರಯಾಣಿಕರಿಗೆ ಅವಕಾಶವಿರಲಿದೆ.

Advertisement

ರೈಲ್ವೆ ಅಧಿಕಾರಿಗಳು ಹೇಳುವ ಪ್ರಕಾರ, ಅತಿ ಶೀಘ್ರದಲ್ಲೇ ಈ ಯೋಜನೆಯ ಟೆಂಡರ್ ಆಹ್ವಾನಿಸಿ ಇದನ್ನು ಗುತ್ತಿಗೆ ನೀಡಲಾಗುತ್ತದೆ. ಇದರ ವಿಸ್ತಾರ ಸುಮಾರು 7,000 ಚದರ ಅಡಿ ಆಗಿರುತ್ತದೆ. ಇದನ್ನು ರೈಲ್ವೆ ಸಂಬಂದಪಟ್ಟ ಜಾಗದಲ್ಲಿ ಈ ವಿಶೇಷವಾದ ಪ್ರೀಮಿಯಂ ಟ್ರಾವೆಲ್ ಲೌಂಜ್ ನಿರ್ಮಾಣಮಾಡಲಿದ್ದು, ಪ್ರಯಾಣಿಕರಿಗೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಈ ಯೋಜನೆಯಲ್ಲಿ ಒದಗಿಸಲಾಗುತ್ತದೆ.

Advertisement

ಈ ಪ್ರೀಮಿಯಂ ಲೌಂಜ್‌ನಲ್ಲಿ ಮಿನಿ ಕೆಫೆಟೇರಿಯಾ, ಮಿನಿ ಸೂಪರ್ ಮಾರ್ಟ, ಎಲೆಕ್ಟ್ರಾಕ್ ವಾಹನಗಳಿಗೆ (EV) ಚಾರ್ಜಿಂಗ್ ಸೌಲಭ್ಯ, ಸಣ್ಣ ಗಾಡಿಗಳ ಸರ್ವಿಸ್ ಕೇಂದ್ರ, ಸ್ಲೀಪಿಂಗ್ ಪಾಡ್್ಗಳು ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ.

ಜುಲೈ 17ರಂದು ದೇಶದ 2ನೇ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲಿಗೆ 'ನಮೋ' ಚಾಲನೆ: ಮಾರ್ಗ, ವೇಳಾಪಟ್ಟಿ

ರೈಲ್ವೆ ಅಧಿಕಾರಿಗಳ ಪ್ರಕಾರ ದೊಡ್ಡ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಈ ರೀತಿಯ ಉತ್ತಮ ಸೌಲಭ್ಯಗಳನ್ನು ನೀಡಲಾಗಿದೆ, ಚಿಕ್ಕ ನಿಲ್ದಾಣದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕೂಡುವ ಉದ್ದೇಶದಿಂದ ಚೆರ್ತಲಾವನ್ನು ರೈಲ್ವೆ ಜಾಗವನ್ನು ಆಯ್ಕೆ ಮಾಡಲಾಗಿದೆ. ಈ ಲೌಂಜ್ ಕೇವಲ ರೈಲು ಪ್ರಯಾಣಿಕರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಇದನ್ನು ಉಪಯೋಗಿಸವುದಕ್ಕೆ ಮುಕ್ತವಾಗಿರುತ್ತದೆ.

Advertisement

ಇದರ ಜೊತೆಗೆ ಚೆರ್ತಲಾ ರೈಲು ನಿಲ್ದಾಣದಲ್ಲಿ ಖಾಲಿ ಇರುವ ಜಾಗವನ್ನು ಇದಕ್ಕೆ ಬಳಸಿಕೊಂಡು, ಫುಡ್ ಸ್ಟ್ರೀಟ್ಸ್‍ ಅಭಿವೃದ್ದಿ ಮಾಡುವ ಯೋಜನೆಯೂ ಇದೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಸಿಗುತ್ತದೆ ಮತ್ತು ರೈಲ್ವೆ ಇಲಾಖೆ ಇದರ ಹೊರತಾಗಿ ಆದಾಯದಲ್ಲಿ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರಿ ಬೇಡಿಕೆ: ಆದಾಯದಲ್ಲೂ ದಾಖಲೆ ಬೆಳವಣಿಗೆ

ಈಗಾಗಲೇ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಿಕ್ಯೂಟೀವ್ ಲೌಂಜ್ಂಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ಚೆರ್ತಲಾದಲ್ಲಿ ನಿರ್ಮಾಣವಾಗಲಿರುವ ಈ ಹೊಸ ಪ್ರೀಮಿಯಂ ಟ್ರಾವೆಲ್ ಲೌಂಜ್ ಇನ್ನಷ್ಟು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ರೈಲು ಹಾಗೂ ಹೆದ್ದಾರಿ ಪ್ರಯಾಣಿಕರ ಅಗತ್ಯಗಳನ್ನು ಒಂದೇ ಸ್ಥಳದಲ್ಲಿ ಪೂರೈಸುವ ಉದ್ದೇಶ ಕೂಡ ಈ ಯೋಜನೆಯಲ್ಲಿ ಕೂಡಿದೆ.

Advertisement

ಈ ಹಿಂದೆ ಉತ್ತರ ವಲಯದಲ್ಲಿ ವಂದೇ ಭಾರತ್ ರೈಲುಗಳು ಬಗ್ಗೆ ಸಾರ್ವಜನಿಕರಲ್ಲಿ ಹಚ್ಚಿದ ಆಸಕ್ತಿ ಮತ್ತು ಇದರಿಂದ ಈ ಬಾಗದ ರೈಲ್ವೆ ಇಲಾಖೆಗೆ ಕಳೆದ ಮೂರು ತಿಂಗಳಲ್ಲಿ ಯಾವ ಮಾರ್ಗದಲ್ಲಿ ವಂದೇ ಭಾರತ್ ರೈಲು ಅತಿಹೆಚ್ಚು ಸಂಚರಿಸುತ್ತಿವೆ ಎಂಬುದು ಕೂಡ ಒಂದು ಕುತುಹಲ ಹೆಚ್ಚಾಗಿದೆ. ಇದು ಭಾರತೀಯ ರೈಲ್ವೆ ಇಲಾಖೆಯು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಜೂತೆಗೆ ವಂದೇ ಭಾರತ್ ರೈಲುಗಳ ಆದಯಾವು ಹೆಚ್ಚಿಗೆ ಆಗಿದೆ. ಉತ್ತರ ವಲಯದ ರೈಲ್ವೆ ವಿಭಾಗಕ್ಕೆ ಸುಮಾರು 13.21 ಕೋಟಿ ಆದಾಯ ಗಳಿಕೆ ಜಾಸ್ತಿ ಅಗಿದ್ದು ಕಳೆದ ವರ್ಷಕ್ಕಿಂತ ಶೇಕಡಾ 72ರಷ್ಟು ಹೆಚ್ಚಳವಾಗಿದೆ.

English Summary

The Southern Railway: The Southern Railway Establish First Premium Travel Lounge At Cherthala Railway Station in Kerala.