Viral Video: ದೇಶಾದ್ಯಂತ ಸುಗಮ ಸೇವೆ ನೀಡುತ್ತಿರುವ ರೈಲ್ವೆ ಜಾಲದಲ್ಲಿ ನಿತ್ಯ ಸಾವಿರಾರು ಮಾರ್ಗಗಳಲ್ಲಿ ಕೋಟ್ಯಾಂತರ ಜನ ಓಡಾಡುತ್ತಾರೆ. ಕೆಲವೊಮ್ಮೆ ರೈಲಿನ ಒಳ-ಹೊರಗೆ, ನಿಲ್ದಾಣಗಳಲ್ಲಿ ಅಹಿತಕರ ಘಟನೆಗಳು, ಅಪಘಾತಗಳು, ಭಯಾನಕ ದುರಂತಗಳು ನಡೆದು ಬಿಡುತ್ತವೆ. ಇಂಥದ್ದೇ ಒಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಚಲಿಸುವ ರೈಲಿನ ಹೊರಭಾಗದಲ್ಲಿ ನೇತಾಡುತ್ತಿದ್ದ ವ್ಯಕ್ತಿಯೊಬ್ಬರು ಇನ್ನೇನು ನಿಲ್ದಾಣ ಬಂತು ಅಪಾಯದಿಂದ ಪಾರಾದ ಎನ್ನುವಷ್ಟರಲ್ಲಿ ಹಳಿಪಾಲಾಗಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಎಂಥವರನ್ನು ಆಘಾತಗೊಳಿಸುತ್ತದೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಗೌರವ್ (@k_gauravs) ಎಂಬುವವರು ಹಂಚಿಕೊಂಡ ವಿಡಿಯೋದ ಪ್ರಕಾರ, ಚಲಿಸುತ್ತಿರುವ ರೈಲಿನಲ್ಲಿ ಬಾಗಿಲು ಅಥವಾ ಕಿಟಕಿ ಭಾಗದಲ್ಲಿ ವ್ಯಕ್ತಿಯೊಬ್ಬ ನೇತಾಡುವುದು ಕಾಣಿಸುತ್ತದೆ. ರೈಲು ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿದೆ ಎನ್ನಬಹುದು. ರೈಲಿನ ಒಳಗೂ ಹೋಗದೇ, ಇಳಿಯಲು ಆಗದೇ ವ್ಯಕ್ತಿ ನೇತಾಡುತ್ತಿದ್ದ, ಒಂದಷ್ಟು ದೂರು ಜಲ್ಲಿಕಲ್ಲಿನ ಮೇಲೆ ರೈಲಿನೊಂದಿಗೆ ಓಡುತ್ತಾನೆ.
ಈ ರೈಲಿನ ಒಳಗಿಂದ ಆತನ ಕೈಯನ್ನು ಯಾರೋ ಹಿಡಿದುಕೊಂಡಿದ್ದಾರೆ. ಹೀಗಾಗಿಯೇ ಆತ ಕೆಳಗೆ ಬಿಳದೇ, ಒಳಗೆ ಹೋಗಲಾರದೇ ಕೆಲವು ನಿಮಿಷಗಳ ಕಾಲ ನೇತಾಡಿದ್ದಾನೆ. ರೈಲಿನೊಂದಿಗೆ ಓಡಿಕೊಂಡು ಬರುವ ವ್ಯಕ್ತಿಯು ಇನ್ನೇನು ರೈಲು ಪ್ಲಾರ್ಟ್‌ಫಾರ್ಮ್ ಕಡೆಗೆ ಬಂದು ನಿಧಾನವಾಗುತ್ತದೆ ಎನ್ನುವಷ್ಟರಲ್ಲಿ ದುರಂತವೊಂದು ನಡೆದೇ ಹೋಗಿದೆ. ರೈಲೊಳಗಿದ್ದ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದು, ಚೀರಾಡಿದ್ದಾರೆ. ರೈಲು ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಕಾಲು ಮೇಲೆತ್ತಿಕೊಂಡು ನೆಲ ತೆರಸಿಕೊಂಡೇ ರೈಲಿನೊಂದಿಗೆ ಸಾಗುವ ವ್ಯಕ್ತಿಗೆ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲು ಮಧ್ಯದ ಒಂದಡಿ ಜಾಗದಲ್ಲಿ (ಸಂದಿ) ಸಿಲುಕುತ್ತಾನೆ. ಇಷ್ಟೊತ್ತು ನೇತಾಡಿಕೊಂಡು ಬಂದ ವ್ಯಕ್ತಿ ನೋಡ ನೋಡುತ್ತಲೇ ಸಂದಿಯಲ್ಲಿ ಕಳೆದು ಹೋಗುತ್ತಾನೆ. ಇದರ ಈ ಭಯಾನಕ ವಿಡಿಯೋ ವೈರಲ್ ಆಗಿದೆ. 'ನಿಮ್ಮ ಒಂದು ತಪ್ಪಾದ ಹೆಜ್ಜೆಯಿಂದ ಆಗುವ ಅಚಾತುರ್ಯಕ್ಕೆ ಇನ್ನೊಂದು ಅವಕಾಶ ಸಿಗದು!. ಈ ಘಟನೆ ಎಲ್ಲಿ ನಡೆದಿದೆ ಎಂಬುದನ್ನು ತಿಳಿಸಿ. ಪರಿಶೀಲಿಸಿ ಸೂಕ್ತ, ಸತ್ಯವಾದ ಮಾಹಿತಿ ನೀಡಿ. ದಯವಿಟ್ಟು ಇಲ್ಲದ ಸಲ್ಲದೇ ಮಾಹಿತಿ ಹರಡದಂತೆ' ಪೋಸ್ಟ್‌ಗೆ ಜೊತೆಗೆ ಶಿರ್ಷಿಕೆ ಬರೆದುಕೊಂಡು ಗೌರವ್ ಅವರು ಪೋಸ್ಟ್ ಮಾಡಿದ್ದಾರೆ. ಅಸಲಿಗೆ ಈ ಘಟನೆ ನಡೆದಿದ್ದು ಎಲ್ಲಿ, ಯಾವ ರೈಲು ಎಂಬ ನಿಖರ ಮಾಹಿತಿ ತಿಳಿಯಬೇಕಿದೆ. 'ಈ ವ್ಯಕ್ತಿಯ ಪರಿಸ್ಥಿತಿ ಮತ್ತು ಅಂತ್ಯದಲ್ಲಿ ಏನಾಯಿತೆಂದು ನೋಡಿದರೆ ಭಯವೆನಿಸುತ್ತದೆ. ಆತ ಬುದಕುಳಿದಿದ್ದಾನೆ ಎಂದು ಭಾವಿಸಿದ್ದೇನೆ' ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಎರಡನೇ ಬಳಕೆದಾರರು 'ಈತ ಕಳ್ಳ, ಪ್ರಯಾಣಿಕರ ವಸ್ತು ಎಗರಿಸಿ ಸಿಕ್ಕಿ ಬಿದ್ದಾಗ ಆತನನ್ನು ಹಿಡಿದಿದ್ದಾರೆ. ಆಗ ಈ ಘಟನೆ ನಡೆದಿರಬೇಕು' ಎಂದು ಊಹಿಸಿದ್ದಾರೆ. 'ಇವನು ಕಳ್ಳ ಏನ್ನನೋ ಕಳ್ಳತನ ಮಾಡಿ ರೈಲಿನಿಂದ ಜಿಗಿಯುವಾಗ ಇದೆಲ್ಲ ನಡೆದಿದೆ' ಎಂದು ಮೂರನೇಯವರು ಕಾಮೆಂಟ್ ಮಾಡಿದ್ದಾರೆ. ಈ' ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ' ಎಂದು ಮತ್ತೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. 'ಜಗತ್ತಿಗೆ ಮೂರ್ಖನೊಬ್ಬ ಕಡಿಮೆ ಆಗಿದ್ದಾನೆ. ತನ್ನಷ್ಟಕ್ಕೆ ತಾನೇ ಕೊನೆಯಾಗಿ ಒಳಿತು ಮಾಡಿದ್ದಾನೆ. ಬಹುಶಃ ರೈಲು ಆತನ ಮೇಲೆ ಹರಿದುಹೋಗಿದೆ' ಎಂದು ಐದನೇ ಬಳಕೆದಾರರು ಹೇಳಿದ್ದಾರೆ. ಬಹುತೇಕ ಮಂದಿ ಆತನ ಕಳ್ಳನಿರಬೇಕು. ತಪ್ಪಿಸಿಕೊಳ್ಳುವಾಗ ಸಿಕ್ಕಿಬಿದ್ದು ಈ ಗತಿ ತಂದುಕೊಂಡಿದ್ದಾನೆ ಅಂತಲೇ ಭಾವಿಸಿ ಅಭಿಪ್ರಾಯ ಹೊರ ಹಾಕಿದ್ದಾರೆ. ಯಾರೇ ಆದರೂ ಜೀವ ಅತ್ಯಮೂಲ್ಯ. ಅದನ್ನು ಈ ರೀತಿ ಕಳೆದುಕೊಳ್ಳುವ, ರೀಲ್ಸ್ ಚಟಕ್ಕೆ ಬಿದ್ದು ಇಲ್ಲವೇ ಕಳ್ಳತನ ಮಾಡಿ, ಮತ್ತೇನೆನೋ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳಬಾರದು. ಸದಾ ಜಾಗೃತರಾಗಿರಬೇಕು. (ಗಮನಿಸಿ: ಎಕ್ಸ್ ವಿಡಿಯೋ ಪ್ರವೇಟ್ ಇರುವ ಕಾರಣ ಎಂಬೇಡ್ ಮಾಡಲಾಗಿಲ್ಲ)BMTC ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದ ಚಾಲಾಕಿ ಮಹಿಳೆ! ನೋಡೋಕೆ ಮುಖ ಸೈಲೆಂಟು, ಮಾಡಿದ ಕೆಲಸ ವೈಲೆಂಟೂ! Video
ಅಷ್ಟಕ್ಕೂ ಆಗಿದ್ದೇನು?
'ಈತ ಕಳ್ಳ, ಬಾಂಗ್ಲಾದಲ್ಲಿ ನಡೆದ ಘಟನೆ': ನೆಟ್ಟಿಗರು ಹೇಳಿದ್ದೇನು?