ಮ್ಯಾನೇಜರ್ ರಜೆಯಲ್ಲಿದ್ದಾಗ ಬಾಸ್‌ಗೆ ಸಹಾಯ ಮಾಡಿದ್ದೇ ತಪ್ಪಾಯ್ತಾ? IT ಉದ್ಯೋಗಿಗೆ ಸಿಕ್ತು ಈ ರೀತಿ ಅಪ್ರೈಸಲ್ ರೇಟಿಂಗ್


ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಆಫೀಸ್ಸಿನಲ್ಲಿರುವ ಪೋಲಿಟಿಕ್ಸ್‌ ಉದ್ಯೋಗಿಗಳ ಮೇಲೆ ಹೇಗೆ ನೆಗಿಟಿವ್‌ ಪರಿಣಾಮ ಬೀರುತ್ತದೆ ಎಂಬುದಕ್ಕೆ ರೆಡ್ಡಿಟ್‌ನಲ್ಲಿ ಈಗ ವೈರಲ್‌ ಆಗುತ್ತಿರುವ ಈ ಘಟನೆಯೇ ಒಂದು ಒಳ್ಳೆಯ ಉದಾಹರಣೆ. 10 ವರ್ಷಗಳಿಗೂ ಹೆಚ್ಚು ಅನುಭವವಿರುವ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ಮ ಮ್ಯಾನೇಜರ್ ರಜೆಯಲ್ಲಿದ್ದಾಗ, ಅವರ ಮೇಲಧಿಕಾರಿಗೆ ಸಹಾಯ ಮಾಡಿದ್ದಕ್ಕಾಗಿ ವರ್ಷದ ಕೊನೆಯಲ್ಲಿ ಮಾಡುವ ಮೌಲ್ಯಮಾಪನದಲ್ಲಿ ಭಾರೀ ನಷ್ಟ ಅನುಭವಿಸಿರುವ ಕಥೆ ಇದೀಗ ವೈರಲ್ ಆಗಿದೆ.

Advertisement

ರೆಡ್ಡಿಟ್‌ನಲ್ಲಿ ವೈರಲ್‌ ಆಗಿರುವ ಪೋಸ್ಟ್ ಪ್ರಕಾರ, ಈ ಐಟಿ ಉದ್ಯೋಗಿಯ ಮ್ಯಾನೇಜರ್ ಎರಡು ವಾರಗಳ ಕಾಲ ರಜೆಯಲ್ಲಿದ್ದರು. ಈ ಅವಧಿಯಲ್ಲಿ, ಮ್ಯಾನೇಜರ್ ಅವರ ಬಾಸ್ ಆಫೀಸ್ಸಿನ ಕೆಲವು ತುರ್ತು ಕೆಲಸಗಳಿಗಾಗಿ ಈ ಸಾಫ್ಟ್‌ವೇರ್ ಎಂಜಿನಿಯರ್ ಅವರನ್ನು ಸಂಪರ್ಕಿಸಿದ್ದರು.

Advertisement

ಮ್ಯಾನೇಜರ್ ಕಚೇರಿಯಲ್ಲಿ ಇಲ್ಲದ ಕಾರಣ, ಕಂಪನಿಯ ಕೆಲಸಕ್ಕೆ ತೊಂದರೆಯಾಗದಿರಲಿ ಎಂಬ ಒಂದು ಒಳ್ಳೆಯ ಕಾರಣ ಇಟ್ಟುಕೊಂಡು ಈ ಉದ್ಯೋಗಿ ಬಾಸ್‌ಗೆ ಸಹಾಯ ಮಾಡಿ, ವಹಿಸಿದ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಹಾಗಾಯೇ ಕಷ್ಟದ ಸಮಯದಲ್ಲಿ ಸಂಸ್ಥೆಗೆ ನೆರವಾದೆ ಎಂಬ ಹೆಮ್ಮೆ ಕೂಡ ಅವರಲ್ಲಿತ್ತು. ಆದರೆ, ಇದು ಮುಂದೊಂದು ದಿನ ತಮಗೆ ಮುಳುವಾಗುತ್ತದೆ ಎಂದು ಅವರು ಊಹಿಸಿಯೇ ಇರಲಿಲ್ಲ.

ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಯುವಕ ಈಗ ಭಾರತದ ಬಾಹ್ಯಾಕಾಶ ರೂವಾರಿ: ಇದು ಪವನ್ ಕುಮಾರ್ ಚಂದನ ಯಶೋಗಾಥೆ
Advertisement

ಕಡಿಮೆ ಅಪ್ರೈಸಲ್ ರೇಟಿಂಗ್ ನೀಡಲು ಕಾರಣವೇನು?

ವರ್ಷದ ಕೊನೆಯಲ್ಲಿ ಮಾಡುವ ಅಪ್ರೈಸಲ್ ಅಂದರೆ ಮೌಲ್ಯಮಾಪನದ ಸಮಯ ಬಂದಾಗ, ಮ್ಯಾನೇಜರ್‌ಗೆ ಈ ವಿಷಯ ತಿಳಿದಿದೆ. ತನ್ನ ಅನುಪಸ್ಥಿತಿಯಲ್ಲಿ ತನ್ನ ಬಾಸ್‌ಗೆ ನೇರವಾಗಿ ಸಹಾಯ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು, ಮ್ಯಾನೇಜರ್ ಈ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಉದ್ದೇಶಪೂರ್ವಕವಾಗಿ ಕಡಿಮೆ ಅಪ್ರೈಸಲ್ ರೇಟಿಂಗ್ ನೀಡಿದ್ದಾರೆ. ಅಚ್ಚರಿಯೆಂದರೆ, ಈ ರೇಟಿಂಗ್‌ಗೆ ಆ ಘಟನೆಯೇ ಕಾರಣ ಎಂಬುದನ್ನು ಮ್ಯಾನೇಜರ್ ಅಪ್ರೈಸಲ್ ಫೀಡ್‌ಬ್ಯಾಕ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಕೂಡ.

ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಕ್ಕಾಗಿ ಈ ರೀತಿ ಶಿಕ್ಷೆ ಅನುಭವಿಸುತ್ತಿರುವುದು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲು ಎಂದು ಉದ್ಯೋಗಿ ತಮ್ಮ ಅಳಲನ್ನ ರೆಡ್ಡಿಟ್‌ನಲ್ಲಿ ತೋಡಿಕೊಂಡಿದ್ದಾರೆ. "ನನ್ನ ಮ್ಯಾನೇಜರ್ ಸಂಪರ್ಕಕ್ಕೆ ಸಿಗದಿದ್ದಾಗ, ಬಾಸ್‌ಗೆ ನೆರವಾಗುವುದು ತಪ್ಪೇ? ಇದೇನು ಕೆಲಸದ ಮೌಲ್ಯಮಾಪನವೋ ಅಥವಾ ಅಹಂಕಾರದ ಪ್ರದರ್ಶನವೋ?" ಎಂದು ಅವರು ಪ್ರಶ್ನಿಸಿದ್ದಾರೆ.

Advertisement

ಮ್ಯಾನೇಜರ್‌ ಪ್ರತಿಕ್ರಿಯೆ

ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಉದ್ಯೋಗಿ, ತಮಗೆ ಸಹಾಯ ಕೇಳಿದ್ದ ಹಿರಿಯ ಅಧಿಕಾರಿ ಹಾಗೂ ಹೆಚ್‌ಆರ್‌ ವಿಭಾಗದ ಅಧಿಕಾರಿಗಳ ಬಳಿ ದೂರು ನೀಡಿದರು. ಆದರೆ, ಅವರಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಈ ಬಗ್ಗೆ ಮ್ಯಾನೇಜರ್ ಬಳಿ ನೇರವಾಗಿ ಕಾರಣ ಕೇಳಿದಾಗ, "ನೀನು ಈ ಬಗ್ಗೆ ನೀನು ನನಗೆ ಮೊದಲೇ ಮಾಹಿತಿ ನೀಡಿ, ನನ್ನ ಪ್ರತಿಕ್ರಿಯೆ ಬರುವವರೆಗೂ ಕಾಯಬೇಕಿತ್ತು" ಎಂಬ ಅಹಂಕಾರದ ಉತ್ತರ ಬಂದಿದೆ.

₹1.5 ಲಕ್ಷ ಸಂಬಳದ ಕೆಲಸ ಬಿಟ್ಟು ಊರಿಗೆ ಮರಳಿದ ಯುವಕ: ಈಗ ತಿಂಗಳಿಗೆ ₹4 ಲಕ್ಷ ಆದಾಯ, ಯಶಸ್ಸಿನ ಕಥೆ!
Advertisement

ಸಂವಹನದ ಕೊರತೆಯೋ ಅಥವಾ ಅಹಂಕಾರವೋ?

ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಹುತೇಕ ನೆಟ್ಟಿಗರು ಮ್ಯಾನೇಜರ್‌ನ ಅಸುರಕ್ಷಿತ ಭಾವನೆ ಹಾಗೂ ಅವರ ನಾಯಕತ್ವವನ್ನ ಟೀಕಿಸಿದ್ದಾರೆ. "ಉತ್ತಮ ನಾಯಕರು ತಮ್ಮ ತಂಡದವರ ಬೆಳವಣಿಗೆಯನ್ನು ಕಂಡು ಹೆಮ್ಮೆಪಡುತ್ತಾರೆ, ಆದರೆ ನಿಮ್ಮ ಮ್ಯಾನೇಜರ್ ಇನ್‌ಸೆಕ್ಯೂರಿಟಿ ಫೀಲ್‌ ಮಾಡುತ್ತಿದ್ದಾರೆ" ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಇದೊಂದು ಕಮ್ಯುನಿಕೇಶನ್‌ ಕೊರತೆ ಎಂದಿದ್ದಾರೆ. ಅಲ್ಲದೇ "ನೀವು ಕೆಲಸ ಮಾಡಿದ್ದು ತಪ್ಪಲ್ಲ, ಆದರೆ ಆ ಬಗ್ಗೆ ನಿಮ್ಮ ಮ್ಯಾನೇಜರ್‌ಗೆ ಒಂದು ಇಮೇಲ್ ಕಳುಹಿಸಿ ಮಾಹಿತಿ ನೀಡಬೇಕಿತ್ತು" ಎಂದು ಸಲಹೆ ನೀಡಿದ್ದಾರೆ.

English Summary

A software engineer shared on Reddit how helping his skip-level manager during his boss's absence led to a poor appraisal rating.