ಬಿಹಾರ ರಾಜಕಾರಣದಲ್ಲಿ ಪ್ರಶಾಂತ್ ಕಿಶೋರ್ ಇಂದು ಭಾರೀ ಚರ್ಚೆಯಲ್ಲಿದ್ದಾರೆ. ತಮ್ಮ 'ಜನ್ ಸುರಾಜ್' ಪಕ್ಷದ ಮೂಲಕ ಇದೀಗ ಬಾಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು, ತಮ್ಮ ನಾಮಪತ್ರ ಇತ್ತೀಚೆಗಷ್ಟೇ ಸಲ್ಲಿಸಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಚರ್ಚೆಯಾಗುತ್ತಿಲ್ಲ. ಬದಲಿಗೆ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿದ್ದ ಅವರ ಆಸ್ತಿ ವಿವರಗಳು ಇದೀಗ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯುತ್ತಿವೆ. ಇದರಲ್ಲಿ ವಿಶೇಷವೆಂದರೆ, ಪ್ರಶಾಂತ್ ಕಿಶೋರ್ ಅವರಿಗಿಂತ ಅವರ ಪತ್ನಿ ಡಾ. ಜಾಹ್ನವಿ ದಾಸ್ ಅವರೇ ಹೆಚ್ಚು ಆಸ್ತಿ ಹೊಂದಿದ್ದಾರೆ. ಇವರಿಬ್ಬರ ಆಸ್ತಿ ವಿವರಗಳು ಇದೀಗ ರಾಜಕೀಯ ವಲಯದಲ್ಲಿಯೂ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಡಾ. ಜಾಹ್ನವಿ ದಾಸ್ ಯಾರು?
ಡಾ. ಜಾಹ್ನವಿ ದಾಸ್ ಅವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು ರಾಜಕೀಯ ಕ್ಷೇತ್ರದಿಂದ ತುಂಬ ದೂರ ಉಳಿದ್ದಾರೆ. ದೆಹಲಿಯ ಪ್ರಮುಖ ಆಸ್ಪತ್ರೆಯಾದ ಅಪೋಲೋ ಇಂದ್ರಪ್ರಸ್ಥದಲ್ಲಿ 'ಸೀನಿಯರ್ ಅಡ್ವೈಸರ್ - ಸ್ಪೆಷಲ್ ಪ್ರಾಜೆಕ್ಟ್ಸ್' ಆಗಿ ಕೆಲಸ ಮಾಡುತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಜಾಹ್ನವಿ, ತಮ್ಮದೇ ಆದ ಪ್ರತ್ಯೇಕ ಐಡೆಂಟಿಟಿ ಹೊಂದಿದ್ದಾರೆ. ಚುನಾವಣೆ ಆಯೋಗಕ್ಕೆ ಸಲ್ಲಿಸಿದ ವರದಿಗಳ ಪ್ರಕಾರ, ಡಾ. ಜಾಹ್ನವಿ ದಾಸ್ ಅವರು ಬರೋಬ್ಬರಿ 111 ಕೋಟಿ ರೂಪಾಯಿಗೂ ಅಧಿಕ ಆಸ್ತಿಯ ಒಡತಿ ಎನ್ನುವುದು ತಿಳಿದುಬಂದಿದೆ. ಇದೇ ಕಾರಣ ನೋಡಿ ಎಲ್ಲರ ಅಚ್ಚರಿಯಿಂದ ನೋಡುತ್ತಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿರುವ ಪ್ರಕಾರ, ಪ್ರಶಾಂತ್ ಕಿಶೋರ್ ಅವರು 22.19 ಕೋಟಿ ರೂಪಾಯಿಗೂ ಅಧಿಕ ಚರಾಸ್ತಿ ಹೊಂದಿದ್ದಾರೆ. ಆದರೆ, ಅವರ ಪತ್ನಿ ಜಾಹ್ನವಿ ಬಳಿ ಸುಮಾರು 99.51 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಅಂದರೆ, ಪ್ರಶಾಂತ್ ಕಿಶೋರ್ ಅವರ ಚರಾಸ್ತಿಗಿಂತ ಅವರ ಪತ್ನಿಯ ಚರಾಸ್ತಿಯೇ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಇನ್ನು ಸ್ಥಿರಾಸ್ತಿ ವಿಚಾರಕ್ಕೆ ಬಂದರೆ, ಪ್ರಶಾಂತ್ ಕಿಶೋರ್ ಅವರು 59.25 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಹೊಂದಿದ್ದು, 14.62 ಕೋಟಿ ರೂ. ಮೌಲ್ಯದ ಆಸ್ತಿ ಪಿತ್ರಾರ್ಜಿತವಾಗಿ ಬಂದಿದೆ. ಈ ಎಲ್ಲಾ ಆಸ್ತಿಗಳನ್ನಾ ಸೇರಿಸಿದರೆ ಪ್ರಶಾಂತ್ ಕಿಶೋರ್ ಅವರ ಒಟ್ಟು ಆಸ್ತಿ ತುಂಬವಾಗಿದೆ. ಆದರೆ, ಒಟ್ಟಾರೆ ಆಸ್ತಿಯ ಲೆಕ್ಕಾಚಾರದಲ್ಲಿ ಡಾ. ಜಾಹ್ನವಿ ದಾಸ್ ಅವರು ತಮ್ಮ ಪತಿಯನ್ನ ಹಿಂದಿಕ್ಕಿದ್ದಾರೆ. 2024-25ರಲ್ಲಿ ಪ್ರಶಾಂತ್ ಕಿಶೋರ್ ಒಟ್ಟು ವಾರ್ಷಿಕ ಆದಾಯ 58.45 ಲಕ್ಷ ರೂ. ಎಂದು ಉಲ್ಲೇಖಿಸಲಾಗಿದೆ. ವಿಶೇಷವೆಂದರೆ, ಇದೇ ಅವಧಿಯಲ್ಲಿ ಅವರು ತಾವು ಸ್ಥಾಪಿಸಿದ 'ಜನ್ ಸುರಾಜ್ ಪಾರ್ಟಿ'ಗೆ ಬರೋಬ್ಬರಿ 10 ಕೋಟಿ ದೇಣಿಗೆಯಾಗಿ ನೀಡಿದ್ದಾರೆ. ಇದಕ್ಕೂ ಮುನ್ನ, 2023-24ರಲ್ಲಿ ಅವರ ವಾರ್ಷಿಕ ಆದಾಯ 8.89 ಕೋಟಿ ರೂ.ಗೂ ಅಧಿಕವಾಗಿತ್ತು. ಪ್ರಶಾಂತ್ ಕಿಶೋರ್ ಕೇವಲ ರಾಜಕೀಯ ವ್ಯಕ್ತಿಯಾಗಿ ಮಾತ್ರವಲ್ಲ, ಒಬ್ಬ ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದಲ್ಲದೇ ಪ್ರಶಾಂತ್ ಕಿಶೋರ್ ಅವರು'ವೇಧಾ ವೆಂಚರ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯಲ್ಲಿ ಸಂಪೂರ್ಣ ಒಡೆತನ ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗಮನಿಸಬೇಕು. ಅಫಿಡವಿಟ್‌ನಲ್ಲಿ ಕೇವಲ ಆಸ್ತಿ ಮಾತ್ರವಲ್ಲ, ಅದರ ಜೊತೆಗೆ ಅವರ ಮೇಲಿರುವ ಸಾಲದ ವಿವರವನ್ನೂ ನೀಡಲಾಗಿದೆ. ಪ್ರಶಾಂತ್ ಕಿಶೋರ್ ಅವರ ಮೇಲೆ ಒಟ್ಟು 5.77 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಮತ್ತು ಹಣಕಾಸಿನ ಸಾಲವಿದೆ. ಅದೇ ರೀತಿ, ಅವರ ಪತ್ನಿ ಡಾ. ಜಾಹ್ನವಿ ದಾಸ್ ಅವರ ಮೇಲೆ ಸುಮಾರು 55.38 ಲಕ್ಷ ರೂ.ಗಳ ಸಾಲವಿದೆ ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ, ಸದ್ಯಕ್ಕೆ ಪ್ರಶಾಂತ್ ಕಿಶೋರ್ ಪತ್ನಿಯ ಆಸ್ತಿ ವಿಷಯವೇ ಎಲ್ಲೆಡೆ ಚರ್ಚೆಯಾಗುತ್ತಿದೆ.ಇಬ್ಬರ ಮೇಲಿರುವ ಸಾಲದ ಹೊರೆ ಎಷ್ಟು?