ಜುಲೈ 17ರಂದು ದೇಶದ 2ನೇ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲಿಗೆ 'ನಮೋ' ಚಾಲನೆ: ಮಾರ್ಗ, ವೇಳಾಪಟ್ಟಿ


ನವದೆಹಲಿ: ಭಾರತದ ಎರಡನೇ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿಗೆ (Sleeper Vande Bharat Express) ಪ್ರಧಾನಿ ನರೇಂದ್ರ ಮೋದಿಯವರು ಇದೇ ಜುಲೈ 17ರಂದು ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮೂಲಕ ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ರೈಲು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲಾಗಿ ಲೋಕಾರ್ಪಣೆಗೊಳ್ಳಲಿದೆ ಎಂಬ ಆಸೆ ನಿರಾಶೆಯಾಗಿದೆ. ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಪ್ರಧಾನಿ ಚಾಲನೆ ನೀಡುವ ಹೊಸ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.

Advertisement

ಈ ರೈಲು ವಾರಣಾಸಿಯಿಂದ ಪಂಜಾಬ್ ರಾಜ್ಯದ ಅಮೃತಸರದ ಛೆಹರ್ತಾದೊಂದಿಗೆ ಸಂಪರ್ಕಿಸಲಿದ್ದು, ಮೊದಲ ಸಂಚಾರ ನಾಳೆ ಬುಧವಾರ ಶುರುವಾಗಲಿದ್ದು, ಈ ವಂದೇ ಭಾರತ್ ಸ್ಲೀಪರ್ (14624/14623) ರೈಲಿಗೆ 'ಸಂತ ರವಿದಾಸ್ ಎಕ್ಸ್‌ಪ್ರೆಸ್' ಎಂದು ಹೆಸರಿಡಲಾಗಿದೆ. ಇದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ಜಲಂಧರ್ ಹೊಸ ರೈಲು ನಿಲ್ದಾಣವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಿದ್ದಾರೆ. ಪಂಚಾಜ್ ಹಾಗೂ ಉತ್ತರ ಪ್ರದೇಶದ ನಡುವಿನ ರೈಲು ಸಂಪರ್ಕ ಸುಧಾರಣೆಯಲ್ಲಿ, ಪರಿಣಾಮಕಾರಿ ಸೇವೆ ನೀಡುವಲ್ಲಿ ಈ ಹೊಸ ರೈಲು ಪ್ರಮುಖ ಪಾತ್ರ ವಹಿಸಲಿದೆ.

Advertisement

ಸ್ಲೀಪರ್ ಸದ್ಯ ಬಿಡುಗಡೆಯಾಗಿರುವ ರೈಲು ವೇಳಾಪಟ್ಟಿ ಪ್ರಕಾರ, ಛೆಹರ್ತಾ-ವಾರಾಣಾಸಿ ಸ್ಲೀಪರ್ ವಂದೇ ಭಾರತ್ ರೈಲು (14624) ಪ್ರತಿ ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸಂಚರಿಸಲಿದೆ. ನಿಗದಿತ ದಿನ ಮಧ್ಯಾಹ್ನ 2.5ಕ್ಕೆ ಛೆಹತಾದಿಂದ ಹೊರಟು, ಅಮೃತರ ಮಾರ್ಗವಾಗಿ ಲಕ್ನೋ ಮೂಲಕ ಸಾಗಿ ಮರುದಿನ ಮಧ್ಯಾಹ್ನ 12.15ಕ್ಕೆ ವಾರಣಾಸಿಗೆ ಬರುತ್ತದೆ.

MEMU Train: ನಾಳೆ ಯಲಹಂಕ-ಅರಸೀಕೆರೆ ಮೆಮು ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಪ್ರಯೋಜನಗಳೇನು?

ಇನ್ನೂ ವಾರಣಾಸಿ-ಛೆಹರ್ತಾ ಸ್ಲೀಪರ್ ವಂದೇ ಭಾರತ್ ರೈಲು (14623) ಪ್ರತಿ ಗುರುವಾರ, ಶನಿವಾರ ಮತ್ತು ಸೋಮವಾರ ಸಂಜೆ 7.5ಗಂಟೆಗೆ ವಾರಣಾಸಿ ನಿಲ್ದಾಣದಿಂದ ಹೊರಡುತ್ತದೆ. ಮತ್ತದೆ ಮಾರ್ಗವಾಗಿ ಮಾರನೇ ದಿನ ಸಂಜೆ 4.35ಕ್ಕೆ ಛೆಹರ್ತಾ ನಿಲ್ದಾಣಕ್ಕೆ ಬಂದು ಸೇರುತ್ತದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

Advertisement

ಎರಡು ದಿಕ್ಕಿನಲ್ಲಿ ನಿಲುಗಡೆ ನಿಲ್ದಾಣಗಳು ಯಾವುವು?

ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರಡು ದಿಕ್ಕಿನಲ್ಲೂ ಔನ್‌ಪುರ ನಗರ, ಸುಲ್ತಾನ್ ನಗರ, ಲಕ್ನೋ, ಶಹಜಾನ್‌ ನಗರ, ಬರೇಲಿ, ಮೊರಾದಾಬಾದ್, ಸಹರಾನ್ ನಗರ, ಅಂಬಲಾಕ್ಯಾಂಟ್, ಲುಧಿಯಾನ, ಜಲಂದರ್ ನಗರ ಮತ್ತು ಅಮೃತಸರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಯಾವಾಗ?

ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣದಿಂದ ಮುಂಬೈ ನಿಲ್ದಾಣವರೆಗೆ ಸ್ಲೀಪರ್ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಅಂತಿಮ ಹಂತದ ತಾಂತ್ರಿಕ ಪರೀಕ್ಷೆಗಳು ನಡೆಸಲು ರೈಲನ್ನು ಇತ್ತೀಚೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣಕ್ಕೆ ಆಗಮಿಸಿದೆ. ಎಲ್ಲ ಅಂತಿಮ ತಾಂತ್ರಿಕೆ ತಪಾಸಣೆಗಳು ಮುಗಿದ ಬಳಿಕ ರೈಲನ್ನು ರವಾನಿಸಲಾಗುತ್ತದೆ. ಆದಷ್ಟು ಶೀಘ್ರವೇ ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ದೊರೆಯಲಿದೆ.

English Summary

Prime Minister Narendra Modi will inaugurate India's second Vande Bharat Sleeper connecting Varanasi and Chheharta on July 17.