ಹರಿಯಾಣ; ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಕ್ರಾಂತಿ ಉಂಟು ಮಾಡಿದ್ದ ವಂದೇ ಭಾರತ್ ರೈಲು ಬೆನ್ನಲ್ಲೇ ಪರಿಸರ ಸ್ನೇಹಿ ದೇಶದ ಸುಸ್ಥಿರ ರೈಲು ಸಾರಿಗೆಗೆ ಪೂರಕವಾದ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಜುಲೈ 17) ಚಾಲನೆ ನೀಡಿದರು. ಹೈಡ್ರೋಜನ್ ರೈಲುಗಳನ್ನು ಹೊಂದಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಸೇರ್ಪಡೆಯಾಗಿದೆ. ಈ ರೈಲಿನ ಮಾರ್ಗ, ಚಾಲನೆ ಹೇಗೆ, ಇದರ ವೈಶಿಷ್ಟ್ಯಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರು ಹೈಡ್ರೋಜನ್ ರೈಲಿನ ಮೊದಲ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಇಂಧನ ಚಾಲಿತ ರೈಲಿಗೆ ಪರ್ಯಾಯ ರೈಲು ಇದಾಗಿದೆ. ಹೈಡ್ರೋಜನ್ ಇಂಧನ ಕೋಶಗಳಿಂದ ಇಂಧನ ಉತ್ಪಾದಿಸಿ, ಕೇವಲ ನೀರಿನ ಆವಿಯನ್ನು ಹೊರಸೂಸುತ್ತದೆ. ದೇಶದ ಸುಸ್ಥಿರ ರೈಲು ಕ್ರಾಂತಿಗೆ ಇಂದು ಪ್ರಧಾನಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಡೀ ಭಾರತವೇ ಪರಿಸರ ಸ್ನೇಹಿತ, ಹೈಡ್ರೋಜನ್ ಚಾಲಿತ ಮೊದಲ ರೈಲು ಕಾರ್ಯಾಚರಣೆಗೆ ಸಾಕ್ಷಿಯಾಗಿದೆ.
ಉತ್ತರ ರೈಲ್ವೆ ವ್ಯಾಪ್ತಿಗೆ ಬರುವ ಹರಿಯಾಣದ ಜಿಂದ್- ಸೋನಿಪತ್ ನಡುವಿನ ಒಟ್ಟು 89 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಈ ಹೈಡ್ರೋಜನ್ ರೈಲು ಕಾರ್ಯಾಚರಣೆ ಮಾಡಲಿದೆ. ನಿತ್ಯವು ಎರಡು ದಿಕ್ಕಿನಲ್ಲಿ ಎರಡು ಬಾರಿ (ಒಟ್ಟು 4 ಟ್ರಿಪ್ ಸೇವೆ) ಸಂಚಾರ ಮಾಡಲಿದ್ದು, ಒಟ್ಟು 12 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇಂಧನ ಇಲ್ಲದೇ ಕೇವಲ ಹೈಡ್ರೋಜನ್ ಇಂಧನ ಕೋಶಗಳಿಂದ ಈ ರೈಲು ಚಲಿಸುತ್ತದೆ. ರೈಲಿನಲ್ಲಿ ಇಂಧನ ಮತ್ತು ಹೈಡ್ರೋಜನ್ ಎರಡು ತುಂಬಿಸಲು ಆಗುವಂತೆ ವಿನ್ಯಾಸ ಮಾಡಲಾಗಿದೆ. ಸರಳವಾಗಿ ಹೇಳಬೇಕಾದರೆ ನೀಲಿ ಬಣ್ಣದ ಈ ರೈಲು ಯಾವುದೇ ಡೀಸೆಲ್, ಕಲ್ಲಿದ್ದಲು ಮತ್ತು ವಿದ್ಯುತ್ ಸಂಪರ್ಕ ಇಲ್ಲದೇ ಸಂಚಾರ ಮಾಡುತ್ತದೆ. ಹೈಡ್ರೋಜನ್ ಕೋಶಗಳ ಸಿಲಿಂಡರ್ ಅಳವಡಿಸಲಾಗಿರುತ್ತದೆ. ಅದರಲ್ಲಿರುವ ಗ್ಯಾಸ್ ವಾತಾವರಣದಲ್ಲಿರುವ ಆಮ್ಲಜನಕೊಂದಿಗೆ ಮಿಶ್ರಣಗೊಂಡು ವಿದ್ಯುತ್ ಉತ್ಪಾದಿಸುತ್ತದೆ. ಅದರಿಂದ ರೈಲು ಸಂಚಾರ ಮಾಡುತ್ತದೆ. ಜನರೇಟ್ ಆಗುವ ವಿದ್ಯುತ್‌ನಲ್ಲಿ ಪರಿಸರಕ್ಕೆ, ಜನರಿಗೆ ಹಾನಿಯಾಗುವ ಯಾವುದೇ ಅನಿಲ, ಹೊಗೆ ಉತ್ಪಾದನೆ ಆಗುವುದಿಲ್ಲ. ಹೀಗಾಗಿ ಇದು ಸಂಪೂರ್ಣ ಪರಿಸರ ಸ್ನೇಹಿ ರೈಲಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಬರೋಬ್ಬರಿ 136 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರೈಲನ್ನು ತಯಾರಿಸಲಾಗಿದೆ. ಒಂದು ಬಾರಿಗೆ 2600 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಹಾಗೂ ಅವರಿಗೆ ಆರಾಮದಾಯಕ ಅನುಭವ ನೀಡುವ 10 ಅತ್ಯಾಧುನಿಕ ಬೋಗಿಗಳಿವೆ. ಪ್ರತಿ ಗಂಟೆಗೆ ಗರಿಷ್ಠ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಭಾರತೀಯ ರೈಲ್ವೆ ಮೂಲ ಸೌಕರ್ಯ, ಬ್ರಿಡ್ಜ್, ಕಣಿವೆ ಭಾಗದ ಇನ್ನಿತರ ಕಾರಣಗಳಿಂದ ರೈಲಿನ ವೇಗವನ್ನು ಗಂಟೆಗೆ 75ಕಿಲೋ ಮೀಟರ್‌ಗೆ ಸೀಮಿತಗೊಳಿಸಲಾಗಿದೆ. * ಇನ್ನೂ ರೈಲಿನಲ್ಲಿ ನೀರು ಸೋರಿಕೆ ಆಗದಂತೆ, ಜ್ವಾಲೆ, ಶಾಖ ಹೆಚ್ಚಾಗದಂತೆ, ಹೊಗೆಯಾಡದಂತೆ ನಿರ್ವಹಿಸಲು ಸುರಕ್ಷತಾ ಸೆನ್ಸಾರ್ ಅಳವಡಿಸಲಾಗಿದೆ. * ರೈಲಿನ ಪರಿಸ್ಥಿತಿಯನ್ನು ಕ್ಷಣ ಕ್ಷಣಕ್ಕೂ ಅವಲೋಕಿಸಲಾಗುತ್ತದೆ. * ಸಂಭವನೀಯ ಅಪಾಯ ಪತ್ತೆ ಹಚ್ಚಿ ನಿರಂತರವಾಗಿ ತ್ವರಿತ ಪ್ರತಿಕ್ರಿಯಿಸುವ ಸ್ವಯಂಚಾಲಿತ ವ್ಯವಸ್ಥೆ ಈ ರೈಲಿನಲ್ಲಿದೆ. * 2022ರಲ್ಲಿ ಜರ್ಮನಿಯಲ್ಲಿ ಹೈಡ್ರೋಜನ್ ರೈಲು ಸಂಚಾರ ಆರಂಭವಾಯಿತು. * ಸದ್ಯ ಚೀನಾ, ಜಪಾನ್, ಇಟಲಿ, ಆಸ್ಟ್ರಿಯ, ಬ್ರಿಟನ್ ದೇಶಗಳಲ್ಲಿದ್ದು, ಇಂದಿನಿಂದ ಭಾರತವು ಹೈಡ್ರೋಜನ್ ರೈಲು ಹೊಂದಿದೆ ಪಟ್ಟಿಗೆ ಸೇರ್ಪಡೆಯಾಗಿದೆ.89 ಕಿಮೀ ಸಂಚಾರ, ಮಾರ್ಗ ಯಾವುದು?
ಜುಲೈ 17ರಂದು ದೇಶದ 2ನೇ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿಗೆ 'ನಮೋ' ಚಾಲನೆ: ಮಾರ್ಗ, ವೇಳಾಪಟ್ಟಿ
ಈ ರೈಲಿನ ಚಲನೆ ಹೇಗೆ?
10 ಬೋಗಿಯ ಹೈಡ್ರೋಜನ್ ರೈಲಿನ ವೈಶಿಷ್ಟ್ಯಗಳೇನು?
ಇತರ ಪ್ರಮುಖಾಂಶಗಳು