ಭಾರತೀಯ ರೈಲ್ವೆ ಇಲಾಖೆ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್್ಶೀಟ್, ಟವೆಲ್, ಕಂಬಳಿ, ದಿಂಬು ಹಾಗೂ ಪಿಲ್ಲೋ ಕವರ್‌ಗಳ ಕಳ್ಳತನ ಆಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ರೈಲ್ವೆ ಇಲಾಖೆಯ 1.27 ಕೋಟಿ ಬೆಡ್‌ರೋಲ್ ವಸ್ತುಗಳು ಕಳ್ಳತನ ಆಗಿವೆ ಎಂದು ಮಾಹಿತಿ ಹಕ್ಕು ಮೂಲಕ ಬಹಿರಂಗ ಆಗಿದೆ.
ದಿ ಇಂಡಿಯನ್ನ ಎಕ್ಸಪ್ರೆಸ್ ಭಾರತೀಯ ರೈಲ್ವೆ ಇಲಾಖೆಯ ಒಟ್ಟು 69 ವಿಭಾಗಗಳಿಗೆ ಆರ್‌ಟಿಐ ಅರ್ಜಿ ಸಲ್ಲಿಸಿತ್ತು. ಇದರಲ್ಲಿ 16 ರೈಲ್ವೆ ವಲಯಗಳ 54 ವಿಭಾಗಗಳಿಂದ ಮಾಹಿತಿ ಸಿಕ್ಕಿದೆ. ಕೋವಿಡ್ ಬಳಿಕ 2022 ಜನವರಿಯಿಂದ ಬೆಡ್‌ರೋಲ್ ಸೇವೆ ಪುನರಾರಂಭ ಆದ ನಂತರ 2026ರ ಮೇ ತಿಂಗಳವರೆಗೆ ಇಷ್ಟು ಪ್ರಮಾಣದ ಕಳ್ಳತನ ನಡೆದಿದೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
2022ರಿಂದ 2025ರವರೆಗೆ ಈ ಸಾಲಿನಲ್ಲಿ ಬೆಡ್‌ರೋಲ್ ವಸ್ತುಗಳ ಕಳ್ಳತನದಲ್ಲಿ ಶೇಕಡಾ 56ರಷ್ಟು ಏರಿಕೆ ಆಗಿದೆ, ಬೆಡ್‌ರೋಲ್ ಕಳ್ಳತನದಿಂದ ಈ ಗುತ್ತಿಗೆದಾರರಿಗೆ ಸರಿವಸುಮಾರು ₹104.51 ಕೋಟಿಯಷ್ಟು ನಷ್ಟವಾಗಿದೆ. ಗುತ್ತಿಗೆದಾರ ಬಳಿ ಕೆಲಸ ಮಾಡುವ ಕೋಚ್ ಅಟೆಂಡೆಂಟ್‌ಗಳ ಹೇಳಿಕೆಯಂತೆ ಎಸಿ ಕೋಚ್‌ಗಳಲ್ಲಿ ಕಳುವಾದ ಯಾವುದೆ ವಸ್ತುಗಳ ಕೆಲವು ಸಂದರ್ಭಗಳಲ್ಲಿ ಅವರ ಸಂಬಳದಿಂದಲೇ ಕಡಿತ ಮಾಡಲಾಗಿದೆ. ಈ ಇಡಿ ಪ್ರಕರಣದಲ್ಲಿ ಶೇಕಡಾ 67ರಷ್ಟು ಪ್ರಕರಣಗಳು ಕೇವಲ 10ವಿಭಾಗಗಳಲ್ಲಿ ನಡೆದಿದೆ. ಬಿಕಾನೇರ್, ಜೋಧ್‌ಪುರ್, ಜೈಪುರ್, ರಾಂಚಿ, ದೆಹಲಿ, ಮುಂಬೈ, ಅಹಮದಾಬಾದ್, ಸೋನ್್ಪುರ್, ದಾನಾಪುರ್ ಹಾಗೂ ಬಿಲಾಸ್್ಪುರ್ ವಿಭಾಗಳಲ್ಲಿ ಅತಿ ಹೆಚ್ಚು ಕಳ್ಳತನವಾದ ಪ್ರದೇಶಗಳಾಗಿವೆ ಎಂದು ಇಲಾಖೆ ತಿಳಿಸಿದೆ. ಕಳ್ಳತನವಾದ ವಸ್ತುಗಳ ಪೈಕಿ ಮೊದಲಿಗೆ ಮುಖ ಒರೆಸುವ ಟವೆಲ್್ಗಳು 46.54 ಲಕ್ಷ ಟವೆಲ್‌ಗಳು ಕಾಣೆಯಾಗಿವೆ. 41.13 ಲಕ್ಷ ಬೆಡ್‌ಶೀಟ್‌ಗಳು, 23.59 ಲಕ್ಷ ಪಿಲ್ಲೋ ಕವರ್‌ಗಳು, 12.95 ಲಕ್ಷ ಕಂಬಳಿಗಳು, ಮತ್ತು 2.76 ಲಕ್ಷ ದಿಂಬುಗಳು ಕಳ್ಳತನವಾಗಿವೆ. ವಲಯಗಳ ಪ್ರಕಾರ ನೋಡುವುದಾದರೆ ಬಿಕಾನೇರ್ ವಿಭಗದಲ್ಲೆ ಅತಿ ಹೆಚ್ಚು ಅಂದರೆ ಒಟ್ಟು 25.76 ಲಕ್ಷ ವಸ್ತುಗಳು ಕಳುವಾಗಿವೆ. ಎರಡನೆ ಸ್ಥಾನದಲ್ಲಿ ರಾಂಚಿ 9.31 ಲಕ್ಷ, ದೆಹಲಿ 8.21 ಲಕ್ಷ, ಅಹಮದಾಬಾದ್ 6.94 ಲಕ್ಷ ಮತ್ತು ದಾನಾಪುರ್ 5.72 ಲಕ್ಷ ಸ್ಥಾನದಲ್ಲಿದೆ. ಬಿಕಾನೇರ್ ವಿಭಾಗದಲ್ಲಿ ಮಾತ್ರ 12.42 ಲಕ್ಷ ಬೆಡ್‌ಶೀಟ್‌ಗಳು ಕಳ್ಳತನ ಆಗಿವೆ. ಆ ವಿಭಾಗದ ಒಟ್ಟು ಕಳ್ಳತನದಲ್ಲಿ ಸುಮಾರು ಅರ್ಧದಷ್ಟು ಪಾಲು ಬೆಡ್‌ಶೀಟ್ ಆಗಿವೆ. ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ವಲಯಗಳಲ್ಲಿ ಟವೆಲ್ ಕಳ್ಳತನ ಹೆಚ್ಚಾಗಿದೆ. ಸೋನ್ಂಪುರ್ ಮತ್ತು ಬಿಲಾಸ್‌ಪುರ್ ವಿಭಾಗಗಳಲ್ಲಿ ಪಿಲ್ಲೋ ಕವರ್ ಹೆಚ್ಚಾಗಿದ್ದರೆ, ಜೋಧ್‌ಪುರ್‌ನಲ್ಲಿ 3.4 ಲಕ್ಷಕ್ಕೂ ಹೆಚ್ಚು ಕಂಬಳಿಗಳು ಕಳ್ಳತನ ಆಗಿವೆ ಎಂದು ವರದಿಯಲ್ಲಿ ಕಂಡುಬಂದಿದೆ. ಇನ್ನೊಂದೆಡೆ, ಕೆಲವು ವಿಭಾಗಗಳಲ್ಲಿ ಕಳ್ಳತನ ಕಡಿಮೆಯಾಗಿದೆ. *ದೆಹಲಿ ವಿಭಾಗದಲ್ಲಿ ಕಳ್ಳತನ ಶೇ.79ರಷ್ಟು ಇಳಿಕೆ* ಕಂಡಿದ್ದು, ಅಹಮದಾಬಾದ್‌ನಲ್ಲಿ ಶೇ.83 ಹಾಗೂ ಸಮಸ್ತಿಪುರದಲ್ಲಿ ಶೇ.86ರಷ್ಟು ಇಳಿಕೆಯಾಗಿದೆ. ಇನ್ನೊಂದಡೆ, ಕೆಲವು ವಿಭಾಗಗಳಲ್ಲಿ ಕಳ್ಳತನ ಆಗಿರುವುದು ಕಡಿಮೆ. ದೆಹಲಿ ವಿಭಾಗದಲ್ಲಿ ಕಳ್ಳತನ ಶೇಕಡಾ 79ರಷ್ಟು ಇಳಿಕೆ ಆಗಿದೆ, ಅಹಮದಾಬಾದ್ ಶೇಕಡಾ 83ರಷ್ಟು ಮತ್ತು ಸಮಸ್ತಿಪುರದಲ್ಲಿ ಶೇಕಡಾ 86ರಷ್ಟು ಇಳಿಕೆ ಆಗಿದೆ. ಆದರೆ, ಲಭ್ಯವಿರುವ ಮಾಹಿತಿಯು ಸಂಪೂರ್ಣವಾಗಿಲ್ಲ, ಆರ್್ಟಿಐ ನೀಡಿದ ಉತ್ತರದಲ್ಲಿ 54 ವಲಯಗಳ ಪೈಕಿ 14 ಇನ್ನು ವಿಭಾಗಗಳ ಪೈಕಿ ಕಳ್ಳತನ ವಿವರ ನೀಡಿಲ್ಲ. ಒಟ್ಟಿ ಕಳ್ಳತನದದಿಂದ ಉಂಟಾದ ನಿಜವಾದ ಆರ್ಥಿಕ ನಷ್ಟ ₹104.51 ಕೋಟಿಗಿಂತಲೂ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ.ಅಧಿಕಾರಿಗಳು ತಿಳಿಸಿರುವ ಅಂಕಿ ಅಂಶಗಳ ಪ್ರಕಾರ
ಅಗತ್ಯವಿದ್ದರೆ ಪ್ರತಿ 3 ನಿಮಿಷಕ್ಕೊಮ್ಮೆ ನಮೋ ಭಾರತ್ ರೈಲು ಸಂಚಾರ: NCRTC
ಒಟ್ಟು ಕಳ್ಳತನ ಆಗಿರುವ ವಸ್ತುಗಳು ಎಷ್ಟು?
Indian Railways: ರೈಲ್ ಒನ್ ಆ್ಯಪ್ ಬಳಕೆದಾರರಿಗೆ ರೈಲ್ವೆ ಹೊಸ ನಿಯಮ ಜಾರಿ