ಅಗತ್ಯವಿದ್ದರೆ ಪ್ರತಿ 3 ನಿಮಿಷಕ್ಕೊಮ್ಮೆ ನಮೋ ಭಾರತ್ ರೈಲು ಸಂಚಾರ: NCRTC


ದೆಹಲಿ-ಗಾಜಿಯಾಬಾದ್-ಮೀರತ್ ನಮೋ ಭಾರತ್ ಕಾರಿಡಾರ್್ನಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಅಗತ್ಯವಿದ್ದರೆ ರೈಲುಗಳು ಸಂಚಾರವನ್ನು ಪ್ರತಿ ಮೂರು ನಿಮಿಷಕೊಮ್ಮೆ ಈ ಮಾರ್ಗದಲ್ಲಿ ನಡೆಸುವ ಸಾಮರ್ಥ್ಯವಿದೆ ಎಂದು ರಾಷ್ಟೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ಶಾಲಭ್ ಗೋಯಲ್ ಹೇಳಿದ್ದಾರೆ.

Advertisement

ಪ್ರಸ್ತುತ ಕಾರಿಡಾರ್್ನಲ್ಲಿ ಪ್ರತಿದಿನ ಅಂದಾಜು 1 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ, ರೈಲುಗಳು ಸುಮಾರು 10 ನಿಮಿಷಗಳ ಅಂತರದಲ್ಲಿ ಓಡುತ್ತಿವೆ. ಪ್ರಯಾಣಿಕರ ಬೇಡಿಕೆಯನ್ನು ನಿರಂತರವಾಗಿ ಪರಿಶೀಲಿಸಿ ಅಗತ್ಯಕ್ಕೆ ಅನುಗುಣ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಇತ್ತಿಚಿನ ದಿನಗಳಲ್ಲಿ ಸರಾಯಿ ಕಾಳೆ ಖಾನ್-ಮೀರತ್ ಸೌತ್ ಮಾರ್ಗದ ನಡುವೆ ಗರಿಷ್ಟ ಸಂಚಾರದ ವೇಳೆಯಲ್ಲಿ ಹೆಚ್ಚುವರಿಯಾಗಿ 18 ಟ್ರಿಪ್‌ಗಳನ್ನು ಆರಂಭಿಸಲಾಗಿದೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೂ ಈ ಕಾರಿಡಾರ್್ನಲ್ಲಿ ಒಟ್ಟು 3.5 ಕೋಟಿಗೂ ಹೆಚ್ಚು ಪ್ರಯಾಣಿಕರ ಸಂಚಾರ ಮಾಡಿದ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

Indian Railways: ರೈಲ್ ಒನ್ ಆ್ಯಪ್ ಬಳಕೆದಾರರಿಗೆ ರೈಲ್ವೆ ಹೊಸ ನಿಯಮ ಜಾರಿ

ಎಲ್ಲ ರೈಲುಗಳು ಭಾರತದಲ್ಲೇ ನಿರ್ಮಾಣ

ನಮೋ ಭಾರತ್ ರೈಲುಗಳ ಶೇಕಡಾ 100ರಷ್ಟು ಕೋಚ್‌ಗಳನ್ನು ಗುಜರಾತಿನ ಸಾವ್ಲಿಯಲ್ಲಿ ತಯಾರಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ.

Advertisement

ವಿವಿಧ ಸಾರಿಗೆ ವ್ಯವಸ್ಥೆಗಳೊಂದಿಗೆ ಸಂಪರ್ಕ

ನಮೋ ಭಾರತ್ ನಿಲ್ದಾಣಗಳನ್ನು ಭಾರತೀಯ ರೈಲ್ವೆ, ಮೆಟ್ರೋ, ಐಎಸ್‌ಬಿಟಿ ಹಾಗೂ ನಗರದಲ್ಲಿನ ಬಸ್ ಸೇವೆಗಳೊಂದಿಗೆ ಸಂಪರ್ಕಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. 2026ರ ಮೇ ತಿಂಗಳಲ್ಲಿ ಸರಾಯಿ ಕಾಳೆ ಖಾನ್ ನಮೋ ಭಾರತ್ ನಿಲ್ದಾಣವನ್ನ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದೊಂದಿಗೆ ಟ್ರಾವೆಲೇಟರ್ ಹೊಂದಿದೆ ಪಾದಚಾರಿ ಮೇಲ್ಸೇತುವೆ ಮೂಲಕ ಸಂಪರ್ಕಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ಸುಮಾರು 30 ಶೇಕಡಾ ಹೆಚ್ಚಳ ಕಂಡಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ನ್ಯೂ ಅಶೋಕ್ ನಗರ ಮತ್ತು ಗಾಜಿಯಾಬಾದ್ ಮೆಟ್ರೊ ನಿಲ್ದಾಣಗಳೊಂದಿಗೆ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದ್ದು, ಆನಂದ್ ವಿಹಾರ್‌ಲ್ಲಿ ರೈಲು ನಿಲ್ದಾಣ, ಮೆಟ್ರೋ, ಐಎಸ್‌ಬಿಟಿ ಹಾಗೂ ನಗರ ಬಸ್ ಸೇವೆಗಳ ನಡುವೆ ಸುಲಭ ಸಂಚಾರ ವ್ಯವಸ್ಠೆ ಕಲ್ಪಿಸಲಾಗಿದೆ.

Advertisement
ವಿಮಾನ ಮೀರಿಸುವ ಭಾರತದ 5 ಸ್ಟಾರ್ ಹೋಟೆಲ್‌ಗಳ ಅನುಭವ ನೀಡುವ 4 ಅದ್ಬುತವಾದ ಲಕ್ಸುರಿ ರೈಲು

ಖಾಸಗಿ ವಾಹನ ಬಳಕೆ ಕಡಿಮೆ ಮಾಡುವ ಉದ್ದೇಶ

ಇನ್ನುಳಿದ ಸಾರಿಗೆಯ ವ್ಯವಸ್ಥೆಗಳ ಸಮರ್ಪಕವಾದ ಸಂಪರ್ಕದಿಂದ ಸಾರ್ವಜನಿಕರಿಗೆ ಸಾರಿಗೆ ಸುಲಭ ಮತ್ತು ಆಕರ್ಷಕ ಆಗುತ್ತವೆ. ಇದರಿಂದ ಖಾಸಗಿ ವಾಹನಗಳ ಬಳಕೆಯು ತುಂಬಾ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಈ ತರಹದ ಬಹುಮಾಧ್ಯಮ ಸಂಪರ್ಕ ಹೊಂದಿರುವ ನಿಲ್ದಾಣಗಳು ಕಾರಿಡಾರ್‌ನ ಒಟ್ಟು ಪ್ರಯಾಣಿಕರಲ್ಲಿ ಸುಮಾರು 40 ಶೇಕಡಾ ಪಾಲು ಹೊಂದಿದ್ದು, ಅತಿ ಹೆಚ್ಚು ಪ್ರಯಾಣಕರನ್ನು ಸೆಳೆಯುತ್ತವೆ ಎಂದರು.

ಭವಿಷ್ಯದ ಬೇಡಿಕೆಗೆ ಸಿದ್ದತೆ

ಮುಂದಿನ ಹಲವು ದಶಕಗಳ ಸಾರಿಗೆ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಮೋ ಭಾರತ್ ಕಾರಿಡಾರ್್ನ್ನು ಅಭಿವೃದ್ದಿಪಡಿಸಲಾಗಿದೆ. ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೂ ಅದಕ್ಕೆ ತಕ್ಕಂತೆ ಸೇವೆ ವಿಸ್ತರಿಸುವ ಅವಕಾಶವನ್ನು ಯೋಜನೆಯಲ್ಲೇ ಕಲ್ಪಿಸಲಾಗಿದೆ ಎಂದು ಗೋಯಲ್ ಹೇಳಿದರು.

Advertisement

ದೆಹಲಿ-ಗಾಜಿಯಾಬಾದ್-ಮೀರತ್ ನಮೋ ಭಾರತ್ ಕಾರಿಡಾರ್ ನಿರ್ಮಾಣದ ಮೂಲಕ ಯೋಜನೆ ರೂಪಿಸುವುದು, ವಿನ್ಯಾಸ, ಹಣಕಾಸು, ನಿರ್ಮಾಣ ಕಾರ್ಯಾಚರಣೆ ಹಾಗೂ ನಿರ್ವಹಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ NCRTC ಪರಿಣತಿ ಹೊಂದಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ETCS ಲೆವೆಲ್-2 ಹೈಬ್ರಿಡ್ ಲೆವೆಲ್-3 ಓವರ್ LTE ರೇಡಿಯೋ ಸಿಗ್ನಲಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದ್ದು, ಭವಿಷ್ಯದಲ್ಲಿ ದೇಶದ ಇತರೆ ಪ್ರಾದೇಶಿಕ ವೇಗದ ಸಾರಿಗೆ ಯೋಜನೆಗಳಲ್ಲಿಯೂ NCRTC ತನ್ನ ಅನುಭವವನ್ನು ಬಳಸಿಕೊಳ್ಳಲು ಸಿದ್ದವಾಗಿದೆ ಎಂದು ಅವರು ಹೇಳಿದರು.

English Summary

Namo Bharat trains: Namo Bharat Corridor currently running around 1 lakh passengers daily tarins are operating at intervals of about 10 minutes.