ದೆಹಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಶೇಕಡಾ 75 ರಿಂದ 80 ರಷ್ಟು ಸಂಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಜಸ್ಥಾನದ ಕೋಟಾದ ಮಂಡಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕ ದೆಹಲಿಯಿಂದ ಮುಂಬೈನ ನಾರಿಮನ್ ಪಾಯಿಂಟ್ ಹಾಗೂ ಜವಾಹರಲಾಲ್ ನೆಹರು ಬಂದರಿನವರೆಗೆ ಕೇವಲ 12 ಗಂಟೆಗಳಲ್ಲಿ ಕಾರಿನಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ.
ಈ ಯೋಜನೆ ಒಟ್ಟು ವೆಚ್ಚ ಸುಮಾರು ₹1.10 ಲಕ್ಷ ಕೋಟಿ ಆಗಿದ್ದು, ಇದು ದೇಶದ ಪ್ರಮುಖ ಮೂಲಸೌಲಭ್ಯಗಳ ಯೋಜನೆಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೋಟಾ ಪ್ರದೇಶಕ್ಕೆ ಹೊಸ ರಸ್ತೆಯ ಯೋಜನೆಗಳನ್ನು ಘೋಷಿಸಿದರು. ಕೋಟಾ-ಝಾಲಾವಾರ್ ರಾಷ್ಟೀಯ ಹೆದ್ದಾರಿ 52 ಮಾರ್ಗದಲ್ಲಿ ಸುಮಾರು ₹551 ಕೋಟಿ ವೆಚ್ಚದಲ್ಲಿ 10 ಕಿಲೊಮೀಟರ್ ಉದ್ದದ ನಾಲ್ಕು ಪಥದ ಮುಕುಂದರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದರ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪ್ರಾರಂಬಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ಅಲಂತಪುರ ಮೂಲಕ ಕೋಟಾವನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ೨೧ ಕಿಲೊಮೀಟರ್ ಉದ್ದದ ನಾಲ್ಕು ಪಥದ ಗ್ರೀನ್್ಫೀಲ್ಡ್ ಸಂಪರ್ಕ ಕಲ್ಪಿಸುವ ರಸ್ತೆಗೆ ₹1,000 ಕೋಟಿ ಮಂಜೂರು ಮಾಡಲಾಗಿದ್ದು, ಇದರ ಕಾಮಗಾರಿ ಇನ್ನು ಮೂರು ತಿಂಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು. ಕೋಟಾದಿಂದ ಇಟಾವಾವರೆಗೆ ಚಂಬಲ್ ನದಿಯ ತೀರದಲ್ಲಿ ಸುಮಾರು ₹15,000 ಕೋಟಿ ವೆಚ್ಚದ ಅಟಲ್ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲಾಗುತ್ತಿದ್ದು, ವರದಿ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭ ಆಗಲಿದೆ ಎಂದು ಹೇಳಿದರು. ಈ ಯೋಜನೆಯ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಹಾಗೂ ಆರ್ಥಿಕತೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಭವಾನಿ ಮಂಡಿಯನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ರಸ್ತೆಯ ಡಿಪಿಆರ್ ಸಿದ್ದಗೊಳಿಸುವ ಕಾರ್ಯವೂ ಆರಂಭ ಮಾಡಲಾಗಿದೆ ಎಂದು ಕೇಂದ್ರ ಸಚಿವ ಮಾಹಿತಿಯನ್ನು ನೀಡಿದರು. ಉತ್ತಮವಾದ ರಸ್ತೆ ಮೂಲ ಸೌಕರ್ಯದಿಂದ ಕೈಗಾರಿಕೆಗಳು, ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳು ಅಭಿವೃದ್ದಿ ಆಗಲಿವೆ, ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕ ಬೆಳವಣಿಗೆಗೂ ತುಂಬಾ ಸಹಾಯವಾಗುತ್ತದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಲೋಕಸಭಾ ಅಧ್ಯಕ್ಷ ಹಾಗೂ ಕೋಟಾ-ಬುಂಡಿ ಸಂಸದ ಓಂ ಬಿರ್ಲಾ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಉಪಸ್ಥಿತರಿದ್ದರು.National Highway: ಉತ್ತರ ಕರ್ನಾಟಕದ ಮೂಲಕ ಹಾದುಹೋಗುವ ಹೊಸ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಬಗ್ಗೆ ಬಿಗ್ ಅಪ್ಡೇಟ್
ಮೋದಿ ಉದ್ಘಾಟಿಸಿದ್ದ ಗಂಗಾ ಎಕ್ಸ್‌ಪ್ರೆಸ್‌ವೇ: ಮೊದಲ ಮಳೆಯಲ್ಲೇ ಸಂಪರ್ಕ ರಸ್ತೆ ಕುಸಿತ