ಹಿಂದೂ ದರ್ಮದ ಅತ್ಯಂತ ಪವಿತ್ರವಾದ ತೀರ್ಥಯಾತ್ರೆಗಳಲ್ಲಿ ಅಮರನಾಥ ಯಾತ್ರೆಯೂ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಎತ್ತರದ ಪರ್ವತ ಪ್ರದೇಶದಲ್ಲಿರುವ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ ಕಂಡುಬರುವ ಹಿಮದ ಶಿವಲಿಂಗದ ದರ್ಶನಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬೇಟಿ ನೀಡುತ್ತಾರೆ. ಈ ಹಿಮದ ಶಿವಲಿಂಗವನ್ನು ಶಿವನ ಅವತಾರವೆಂದು ಪೂಜಿಸಲಾಗುತ್ತದೆ. ನೀವು ಈ ಪವಿತ್ರ ತೀರ್ಥಯಾತ್ರೆಗೆ ತೆರಳು ಯೋಜಿಸುತ್ತಿದ್ದರೆ ಯಾತ್ರೆಯ ದಿನಾಂಕ, ನೋಂದಣಿ ವಿಧಾನ, ಮಾರ್ಗ, ಹೆಲಿಕಾಪ್ಟರ್ ಸೇವೆ ಸೇರಿದಂತೆ ಅಗತ್ಯವಾದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.
2026 ಅಮರನಾಥ ಯಾತ್ರೆ ಯಾವಾಗ ಮತ್ತು ಅದರ ಸಂಪೂರ್ಣ ವೇಳಾಪಟ್ಟಿ
ಅಮರನಾಥ ಯಾತ್ರೆಯು 2026 ಜುಲೈ 3 ಪ್ರಾರಂಭವಾಗಿ ಆಗಷ್ಟ್ 28ರಂದು ಮುಕ್ತಾಯಗೊಳ್ಳುತ್ತದೆ. ಈ ಯಾತ್ರೆಯು 57 ದಿನಗಳ ಕಾಲ ನಡೆಯುತ್ತದೆ. ಯಾತ್ರೆಯ ದಿನಾಂಕಗಳನ್ನು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್(ಆಡಳಿತ ಮಂಡಳಿ) ಈ ವೇಳಾಪಟ್ಟಿಯನ್ನು ನಿರ್ಧಾರ ಮಾಡಲಾಗುತ್ತದೆ. ಈ ಯಾತ್ರೆಯು ಸಾಮಾನ್ಯವಾಗಿ ರಕ್ಷಾ ಬಂದನದಂದು ಮುಕ್ತಾಯಗೊಳ್ಳುತ್ತದೆ. ಪವಿತ್ರ ಗದೆ ಮತ್ತು ಛರಿ ಮುಬಾರಕ್ ಗುಹೆಗೆ ತಲುಪಿದ ನಂತರ ಯಾತ್ರೆಯು ಸಮಾಪ್ತಿಯಾಗುತ್ತದೆ.
ಯಾತ್ರೆಯ ಆರಂಭದ ದಿನಾಂಕ: ಜುಲೈ 3, 2026 ಯಾತ್ರೆಯ ಮುಕ್ತಾಯದ ದಿನಾಂಕ: ಆಗಸ್ಟ್ 28, 2026 ಪ್ರತಿ ಯಾತ್ರಿಕರ ನೋಂದಣಿ ಶುಲ್ಕ: ₹150 ಗುಹೆಯ ದೇಗುಲದ ಎತ್ತರ: 3,888 ಮೀಟರ್ ಅಂದರೆ(12,756 ಅಡಿ) ಯಾತ್ರೆಯ ಮಾರ್ಗಗಳು: ಬಾಲ್ಟಾಲ್ 14 ಕಿಮೀ, ಮತ್ತು ಜಮ್ಮು ಮತ್ತು ಕಾಶ್ಮೀರ 46 - 48 ಕಿಮೀ, ಹತ್ತಿರದ ವಿಮಾನ ನಿಲ್ದಾಣ: ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಬಾಲ್ಟಾಲ್ 62 ಕಿಮೀ ಮತ್ತು ಪಹಲ್ಗಾಮ್್ಗೆ 90 ಕಿಮೀ. ಹತ್ತಿರದ ರೈಲು ನಿಲ್ದಾಣ: ಜಮ್ಮು ತಾವಿ, ಉದಂಪುರ ಮತ್ತು ಬನಿಹಾಲ್ ಹತ್ತಿರದಲ್ಲಿವೆ, ಯಾತ್ರೆಯ ಅವಧಿ: ಬಾಲ್ಟಾಲ್ ಮಾರ್ಗದಲ್ಲಿ 2 ರಿಂದ 3 ದಿನ, ಪಹಲ್ಗಾಮ್ ಮಾರ್ಗದಲ್ಲಿ 4 ರಿಂದ 5 ದಿನ. ವಯೋಮಿತಿ: 13 ರಿಂದ 70 ವರ್ಷ. ಆರು ವಾರಕ್ಕಿಂತ ಹೆಚ್ಚು ಗರ್ಭಿಣಿಯರಿಗೆ ಯಾತ್ರೆಗೆ ಅವಕಾಶ ಇರುವುದಿಲ್ಲ. ಯಾತ್ರೆಗೆ ಹೋಹುವ ಪ್ರತಿಯೊಬ್ಬರು ಮುಂಚಿತವಾಗಿ ನೋಂದಣಿ ಮಾಡಿಸಬೇಕು. * jksasb.nic.in ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಬೇಟಿ ನೀಡಿ ಅಲ್ಲಿ ನೀವು ನೋಂದಣಿಯನ್ನು ಮಾಡಬಹುದು. * ಆ ವೆಬ್‌ಸೈಟ್್ನಲ್ಲಿ ಖಾತೆಯನ್ನು ರಚಸಿ ಮತ್ತು ನೋಂದಣಿ ಫಾರ್ಮನಲ್ಲಿ ಹೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. * ಮಾನ್ಯವಾದ ಪೋಟೊ ಇರುವ ಐಡಿ ಕಾರ್ಡ (ಆಧಾರ್), ಪಾಸ್‌ಪೋರ್ಟ್ ಗಾತ್ರದ ಛಾಯಚಿತ್ರವಿರುವ ಮತ್ತು ನಿಮ್ಮ ಆರೋಗ್ಯದ ಪ್ರಮಾಣ ಪತ್ರ ಅನ್ನು ಸಬ ಇಲ್ಲಿ ಅಪ್‌ಲೋಡ್ ಮಾಡಬೇಕು. * ನಿಮ್ಮ ಪ್ರಯಾಣದ ದಿನಾಂಕ ಮತ್ತು ನಿಮ್ಮ ಮಾರ್ಗಗಳನ್ನು ಆಯ್ಕೆ ಮಾಡಬೇಕಾಗುತ್ತದೆ(ಬಾಲ್ಟ್್ಲ್ ಅಥವಾ ಪಹಲ್ಗಾಮ್) ಆಯ್ಕೆ ಮಾಡಬೇಕು. * ಪಾರ್ಮನಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಪೂರ್ಣಗೂಳಿಸಿದ ನಂತರ, ನೀವು ಆನ್್ಲೃನ್ 150 ಶಲ್ಕವನ್ನು ಪಾವತಿಸಿ ನಂತರ ನಿಮ್ಮ ಯಾತ್ರಾ ಕಾರ್ಡ ಡೌನಲೋಡ್ ಮಾಡಿಕ್ಕೂಳ್ಳಬೇಕು. * ಯಾತ್ರೆಗೆ ತೆರಳುವವರು ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯ ಪ್ರಮಾಣಪತ್ರ ಸಲ್ಲಿಸಬೇಕು. 2026ರ ಯಾತ್ರೆಗೆ ಹೋಗುವ ಪ್ರತಿಯೊಬ್ಬರೂ ನೀಡಬೇಕು. * ಅಮರನಾಥ್ ಯಾತ್ರೆ ಹೆಲಿಕಾಪ್ಟರುಗಳು ಬುಕ್ಕಿಂಗ್ ವಿವರ ದೀರ್ಘ ಕಾಲ ಕಾಲ್ನಡಿಗೆಯಲ್ಲಿ ಸಾಗಲು ಸಾಧ್ಯವಾಗದ ಭಕ್ತರಿಗಾಗಿ ಹೆಲಿಕಾಪ್ಟರುಗಳ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಸೇವೆ ಬಾಲ್ಟಾಲ್ ಹಾಗೂ ಪಹಲ್ಗಾಮ್್ನಿಂದ ಪಂಚತರಣಿವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲಿಂದ ಅಮರನಾಥ್ ಗುಹೆಯವರೆಗೂ ಸುಮಾರು 6 ಕಿಮೀ, ದೂರವನ್ನು ಕಾಲ್ನಡಿಗೆಯಲ್ಲಿ, ಕುದುರೆ ಅಥವಾ ಪಲ್ಲಕ್ಕಿಯ ಮೂಲಕವೇ ಸಾಗಬೇಕು.ಅಮರನಾಥ ಯಾತ್ರೆಯ ಪ್ರಮುಖ ದಿನಾಂಕಗಳ ಮಾಹಿತಿ
ಕೈಲಾಸ ಯಾತ್ರೆ 2026: ಭಕ್ತರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಪ್ರಮುಖ ಪ್ರಯಾಣ ಮಾರ್ಗಸೂಚಿ
16 ಪಾಸ್‌ಪೋರ್ಟ್, 245 ದೇಶ: ಕೇವಲ 6 ವರ್ಷಗಳಲ್ಲಿ ಇಡೀ ಜಗತ್ತನ್ನೇ ಸುತ್ತಿದ ಬೆಂಗಳೂರಿನ ಬೆನ್ನಿ ಪ್ರಸಾದ್
ಅಮರನಾಥ್ ಯಾತ್ರೆಯ ನೋಂದಾಯಿಸುವುದು ಹೇಗೆ?