ಪ್ರಸ್ತ, ಪೂಜೆ ಆಯಿತು, ಇದೀಗ ರೈಲಲ್ಲೇ ಎಣ್ಣೆ ಪಾರ್ಟಿ ವಿಡಿಯೋ ವೈರಲ್, ಪಾವಿತ್ರ್ಯತೆ ಕಳೆದು ಕೊಳ್ತಾ ಭಾರತೀಯ ರೈಲು


ನವದೆಹಲಿ: ಭಾರತೀಯ ರೈಲ್ವೆಯ ಎಸಿ ಕೋಚ್‌ನಲ್ಲಿ ಕೆಲವರು ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಸುರಕ್ಷತೆ ಹಾಗೂ ನಿಯಮ ಪಾಲನೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.

Advertisement

ವೈರಲ್ ಆಗಿರುವ ವಿಡಿಯೋದಲ್ಲಿ, ರೈಲಿನಲ್ಲಿ ಎಸಿ ಕೋಚ್‌ನ ಸೈಡ್ ಲೋಯರ್ ಬರ್ಥ್‌ನಲ್ಲಿ ಕುಳಿತಿದ ಪ್ರಯಾಣಿಕರೊಬ್ಬರು ಪರದೆಯ ಹಿಂದೆ ಕುಳಿತುಕೊಂಡು ಮದ್ಯವನ್ನು ಗ್ಲಾಸ್್ನಲ್ಲಿ ಹಾಕಿಕೊಳ್ಳುತ್ತಿರುವುದು ಕಂಡಿದೆ. ಜೊತೆಗೆ ಮದ್ಯದೊಂದಿಗೆ ಸೇವಿಸಲು ಸ್ಯ್ನಾಕ್ಸ್ ಪ್ಯಾಕೇಟುಗಳು ಕಾಣುತ್ತವೆ. ಉಳಿದ ಪ್ರಯಾಣಿಕರು ತಮ್ಮ ತಮ್ಮ ಬರ್ಥಗಳಲ್ಲಿ ಕುಳಿತಿರು ದೃಶ್ಯವೂ ಇದೆ.

Advertisement

ಈ ವಿಡಿಯೋವನ್ನು ಪಿಂಟು ಕುಮಾರ್ ಎಂಬ ಹೆಸರಿನ ಇನಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಬಳಿಕ ಅದೇ ವಿಡಿಯೋ ಎಕ್ಸ್ (ಹಿಂದಿನ ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral: ರೈಲಿನ ಫಸ್ಟ್‌ ಕ್ಲಾಸ್ ಎಸಿ ಬೋಗಿ ಈಗ ಹನಿಮೂನ್ ರೂಮ್; ಬೆಡ್ ಅಲಂಕಾರ ನೋಡಿ ನೆಟ್ಟಿಗರು ಶಾಕ್

ಈ ಘಟನೆಯು ರೈಲ್ವೆ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆ ಅಧಿಕೃತ ಎಕ್ಸ್ ಖಾತೆಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದೆ. "ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸೂಕ್ತ ತನಿಖೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಪಿಎನ್‌ಆರ್ ಅಥವಾ ಯುಟಿಎಸ್ ಸಂಖ್ಯೆ, ಘಟನೆ ನಡೆದ ದಿನಾಂಕ ಮತ್ತು ಸಮಯ, ಸಮೀಪದ ರೈಲು ನಿಲ್ದಾಣದ ಹೆಸರು ಹಾಗೂ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡಿ" ಎಂದು ಮನವಿಯನ್ನು ಮಾಡಿಕೊಂಡಿದೆ.

Advertisement

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಕುರಿತು ಹಲವರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲುಗಳಲ್ಲಿ ಇಂತಹ ಘಟನೆಗಳು ಅದರಲ್ಲೂ ಕುಟುಂಬ ಸಮೇತರಾಗಿ ಪ್ರಯಾಣಿಸುವವರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Good News: ರೈಲು ತಡವಾದರೂ ಟೆನ್ಷನ್ ಬೇಡ! ನಿಲ್ದಾಣದಲ್ಲೇ ಹೈಫೈ ಮಲಗುವ ವ್ಯವಸ್ಥೆ ಪರಿಚಯ

ಭಾರತೀಯ ರೈಲ್ವೆಯಲ್ಲಿ ರೈಲಿನ ಒಳಗೆ ಮದ್ಯಪಾನ ಮಾಡುವುದು ನಿಯಮಗಳಿಗೆ ವಿರುದ್ದವಾಗಿದೆ. ಈ ವೈರಲ್ ವಿಡಿಯೋ ಕುರಿತು ರೈಲು ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ತನಿಖೆ ಮಾಡುವ ಸಾಧ್ಯತೆ ಇದೆ.

Advertisement

ಈ ಹಿಂದೆ ವೈರಲ್ ಆಗಿರುವ ವಿಡಿಯೋದಲ್ಲಿ ಭಾರತೀಯ ರೈಲ್ವೆ ಫಸ್ಟ್ ಎಸಿ ಕೋಚ್್ನ್ನು ಹೊಸದಾಗಿ ಮದುವೆ ದಂಪತಿಗಾಗಿ ಹನಿಮೂನ್ ಸೂಟ್್ನಂತೆ ಅಲಂಕರಿಸಿರುವುದು ಕಂಡುಬಂದಿದೆ. ಬಲೂನ್‌ಗಳು, ಗುಲಾಬಿ ಹೂಗಳು, ರೋಸ್ ಪೆಟಲ್ಸ್, ಮೇಣದ ಬತ್ತಿಗಳು ಹಾಗೂ "I Love You" ಎಂಬ ಅಲಂಕಾರಿಕ ವಸ್ತುಗಳಿಂದ ಕೋಚ್್ನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಾರ್ವಜನಿಕ ಆಸ್ತಿಯನ್ನು ಈ ರೀತಿ ಬಳಸುವುದು ಸರಿಯೇ ಎಂಬ ಪ್ರಶ್ನೆ ಉದ್ಬವಿಸಿತು. ಘಟನೆಗೆ ಸಂಬಂದಿಸಿದಂತೆ ದಕ್ಷಿಣ ಮಧ್ಯ ರೈಲ್ವೆ ತನಿಖೆಗೆ ಆದೇಶಸಿಲಾಗಿದೆ.

English Summary

Indian Railways: A Viral video showing passengers consuming cocktails inside an Indian Railways AC coach. The Incident sparked.