ಎರಡು ನಗರಗಳಿಗೆ ನೀರುಣಿಸಲು ನಿರ್ಮಾಣವಾಯಿತು ಕೃತಕ ಸರೋವರ: ತಲೆ ಎತ್ತಿದೆ ಪ್ಲಾಸ್ಟಿಕ್‌ ಶೀಟ್‌ ಡ್ಯಾಂ


ರಾಜಸ್ಥಾನದಲ್ಲಿ 28 ಕಿ.ಮೀ ಉದ್ದದ ಕೃತಕ ಸರೋವರವನ್ನು ಅಗೆಯಲಾಗಿದೆ. ರಾಜ್ಯದ ಜೈಸಲ್ಮೇರ್ ಮತ್ತು ಬಾರ್ಮರ್ ನಗರಗಳಲ್ಲಿ ವಾಸಿಸುವ 5 ಮಿಲಿಯನ್ ಜನರಿಗೆ ನೀರು ಪೂರೈಸುವ ಉದ್ದೇಶದಿಂದ ಈ ಕೃತಕ ಸರೋವರವನ್ನು ನಿರ್ಮಿಸಲಾಗಿದೆ. ಇಲ್ಲಿನ ಮರಳಿನಿಂದ ನೀರನ್ನು ಬೇರ್ಪಡಿಸುವ ಸಲುವಾಗಿ ಪ್ಲಾಸ್ಟಿಕ್‌ ಲೈನ್ ಅನ್ನು ಬಳಸಲಾಗಿದೆ.

Advertisement

ಮರುಭೂಮಿಯಲ್ಲೊಂದು ಜಲಾಶಯ:

ಥಾರ್ ಮರುಭೂಮಿಯು ವಾಯುವ್ಯ ಭಾರತದಿಂದ ಪಾಕಿಸ್ತಾನದ ಕೆಲವು ಭಾಗಗಳವರೆಗೆ ವ್ಯಾಪಿಸಿದೆ. ಇಲ್ಲಿನ ಜೈಸಲ್ಮೇರ್ ಮತ್ತು ಬಾರ್ಮರ್ ಶುಷ್ಕ ಭೂ ಪ್ರದೇಶಗಳು. ಇದು ತೀವ್ರವಾದ ಬಿಸಿಲು, ಶಾಖವನ್ನು ಹೊಂದಿರುವ ಪ್ರದೇಶ. ಇಲ್ಲಿನ ಜನರು ವರ್ಷಕ್ಕೆ ಒಮ್ಮೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದೀಗ ಸರ್ಕಾರ ಇಲ್ಲಿನ ಜನರಿಗೆ ನೀರಿನ ಪೂರೈಕೆಯಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಲು ಕೃತಕ ಜಲ ಸಾರಿಗೆ ವ್ಯವಸ್ಥೆಯನ್ನು ರೂಪಿಸಿದೆ.

Advertisement

ವಾರ್ಷಿಕ ನಹರ್‌ಬಂದಿ ವೇಳೆ ನೀರು ಪೂರೈಕೆಯಲ್ಲಿ ವ್ಯತ್ಯಾಸ:

ಇಂದಿರಾ ಗಾಂಧಿ ಕಾಲುವೆಯು ಈ ಪ್ರದೇಶದ ಪ್ರಮುಖ ನೀರಿನ ಮೂಲಗಳಲ್ಲಿ ಒಂದು. ವರ್ಷಕ್ಕೆ ಒಂದು ಬಾರಿ ಈ ಕಾಲುವೆಯ ನಿರ್ವಹಣೆ ಮಾಡಲಾಗುತ್ತದೆ. ಆ ಸಮಯದಲ್ಲಿ ಜೈಸಲ್ಮೇರ್ ಮತ್ತು ಬಾರ್ಮರ್ ಪ್ರದೇಶಗಳಲ್ಲಿನ ನೀರಿನ ಪೂರೈಕೆಯಲ್ಲಿ ಅಡಚಣೆಯಾಗುತ್ತದೆ. ಇದನ್ನು ವಾರ್ಷಿಕ ನಹರ್‌ಬಂದಿ ಎಂದು ಕರೆಯಲಾಗುತ್ತದೆ. ಇದೇ ನೀರನ್ನು ಅವಲಂಬಿಸಿರುವ ನಗರಗಳು ಮತ್ತು ಸಮುದಾಯಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಶಂಕರಾಚಾರ್ಯರು ರಾಕ್ಷಸರಂತೆ! ವೈರಲ್‌ ಆಗಿರೋ ವಿಡಿಯೋದ ನಿಜಾಂಶ ಏನು?
Advertisement

ನೀರಿನ ಸಮಸ್ಯೆಗೆ ಪರಿಹಾರ:

ಈ ಕಾರಣದಿಂದ ಇದೀಗ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಜಲಾಶಯದ ಸಹಾಯದಿಂದ ನೀರನ್ನು ಸಂಗ್ರಹಿಸಿ ಶೋಧನಾ ಕೇಂದ್ರದಲ್ಲಿ ಸಂಸ್ಕರಿಸಿ ನಂತರ ಎರಡು ನಗರಗಳಿಗೆ ಈ ನೀರನ್ನು ವಿತರಿಸುವ ಯೋಜನೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಕಾಲುವೆ ನಿರ್ವಹಣಾ ಅವಧಿಯಲ್ಲಿ ಬಳಕೆಗಾಗಿ ನೀರನ್ನು ಸಂಗ್ರಹಿಸಲು ಇಲ್ಲಿಯವರೆಗೂ ದೊಡ್ಡ ಪ್ರಮಾಣದ ಸಂಗ್ರಹಣಾ ಸೌಲಭ್ಯ ಇರಲಿಲ್ಲ. ಹಾಗಾಗಿ ನಿರಂತರ ನೀರಿನ ಸಮಸ್ಯೆ ಕಾಡುತ್ತಿತ್ತು. ಇದೀಗ ಈ ಯೋಜನೆಯು ಈ ಭಾಗದ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿರಲಿದೆ ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.

33 ಅಡಿ ಆಳವಿರುವ 28 ಕಿ.ಮೀ ಉದ್ದದ ಈ ಜಲಾಶಯ ಸುಮಾರು 1.41 ಶತಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ವನ್ನು ಹೊಂದಿದೆ. ಇದಕ್ಕಾಗಿ ರಾಜಸ್ಥಾನ ರಾಜ್ಯ ನೀರು ಸರಬರಾಜು ಇಲಾಖೆಯು ಅಂದಾಜು 242 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.

Advertisement
Viral: ಭಾರತದ ಸಲೂನ್‌ನಲ್ಲಿ ಫೇಸ್‌ ಮಸಾಜ್ ಬಿಲ್‌ ನೋಡಿ ಬೆರಗಾದ ರಷ್ಯಾ ಸುಂದರಿ!

300 ಮೈಕ್ರಾನ್ ಪ್ಲಾಸ್ಟಿಕ್ ಲೈನರ್:

ಇದು ಮರುಭೂಮಿ ಪ್ರದೇಶವಾಗಿರುವ ಕಾರಣ ಇಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭವಲ್ಲ. ಇಲ್ಲಿ ಸಂಗ್ರಹವಾದ ನೀರನ್ನು ಮರುಭೂಮಿಯ ಮರಳು ಸುಲಭವಾಗಿ ಹೀರಿಕೊಂಡು ಒಣಗಿಸಿ ಬಿಡುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು, ಎಂಜಿನಿಯರ್‌ಗಳು ಜಲಾಶಯದ ಕೆಳಭಾಗವನ್ನು ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ಪದರದಿಂದ ಮುಚ್ಚಿದ್ದಾರೆ. ಒಂದರ್ಥದಲ್ಲಿ ನೀರು ಮರಳಿನಲ್ಲಿ ಇಂಗಿ ಹೋಗದಂತೆ ತಡೆಯಲು ತಡೆಗೋಡೆಯಾಗಿ ಪ್ಲಾಸ್ಟಿಕ್‌ ಬಳಸಲಾಗಿದೆ. ಜಲಾಶಯದ ಕೆಳಭಾಗವನ್ನು 300 ಮೈಕ್ರಾನ್‌ಗಳ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಲಾಗಿದೆ. ಅದನ್ನು ರಕ್ಷಿಸಲು ಅದರ ಮೇಲೆ ಮಣ್ಣಿನ ಪದರವನ್ನು ಹಾಕಲಾಗಿದೆ.

Advertisement

ಈ ಮೂಲಕ ನೀರು ಮತ್ತು ಮರಳು ಮಣ್ಣಿನ ನಡುವೆ ತಡೆಗೋಡೆ ಸೃಷ್ಟಿಸುವುದು ಈ ಪ್ಲಾಸ್ಟಿಕ್‌ ಲೈನರ್‌ನ ಕಾರ್ಯವಾಗಿದೆ. ಒಂದು ವೇಳೆ ಈ ಪ್ಲಾಸ್ಟಿಕ್‌ ಲೇಪನವಿಲ್ಲದೆ, ಹೋದರೆ ಇಲ್ಲಿ ಸಂಗ್ರಹಿಸುವ ನೀರಿನ ಹೆಚ್ಚು ಭಾಗ ವಿತರಣಾ ವ್ಯವಸ್ಥೆಯನ್ನು ತಲುಪುವ ಮೊದಲೇ ಮರಳಿನಲ್ಲಿ ಇಂಗಿ ಹೋಗುವ ಅಪಾಯವಿದೆ.

ಇದೇ ತಿಂಗಳಲ್ಲಿ ಉದ್ಘಾಟನೆ:

ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಕಾರ್ಯಕ್ರಮವಾದ ಜಲ ಜೀವನ್ ಮಿಷನ್‌ನೊಂದಿಗೆ ಈ ಯೋಜನೆಯನ್ನು ಸಂಯೋಜಿಸುತ್ತವೆ. ಈ ಯೋಜನೆಯು ಜನವರಿ 2023 ರಲ್ಲಿ ಪ್ರಾರಂಭವಾಗಿತ್ತು.ಮೇ 2026 ರಲ್ಲಿ, ಯೋಜನೆಯು ಅಂತಿಮ ಹಂತದಲ್ಲಿದ್ದು, ನೀರು ಭರ್ತಿ ಮಾಡುವ ಕಾರ್ಯ ಪ್ರಾರಂಭಿಸಲಾಗಿತ್ತು. ಜುಲೈ 2026 ರಲ್ಲಿ ಉದ್ಘಾಟನೆಗೆ ದಿನ ನಿಗದಿಪಡಿಸಲಾಗಿದೆ ಎಂದು ವರದಿಗಳು ಸೂಚಿಸುತ್ತವೆ.

Advertisement

(ಬರಹ: ರಂಜಿತಾ ಆರ್.ಕೆ.)

English Summary

Artificial Lake: 28 km artificial lake in Thar desert plastic sheet dam to supply water to Jaisalmer and barmer of rajastan.