ನಾವು ಬೆಳಗ್ಗೆ ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ನಮ್ಮ ಇಡೀ ದಿನದ ಆರೋಗ್ಯವನ್ನು ನಿರ್ಧರಿಸುತ್ತದೆ. ಬೆಳಗ್ಗೆ ತಿನ್ನುವ ಆಹಾರ ಪೋಷಕಾಂಶಗಳಿಂದ ಕೂಡಿರಬೇಕು. ಅಲ್ಲದೆ, ಜೀರ್ಣಿಸಿಕೊಳ್ಳುವುದಕ್ಕೂ ಸುಲಭವಾಗಿರಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ ಬೆಳಗಿನ ಉಪಹಾರಕ್ಕೆ ಇಡ್ಲಿ ಹೇಳಿ ಮಾಡಿಸಿದ ಆಹಾರ. ಅಷ್ಟಕ್ಕೂ ಮೃದುವಾದ ಇಡ್ಲಿ, ಗರಿಗರಿಯಾದ ದೋಸೆ ಇಷ್ಟಪಡದವರು ಬಹುಶಃ ಯಾರೂ ಇರಲಿಕ್ಕಿಲ್ಲ.
ಇಡ್ಲಿಯನ್ನು ಹಬೆಯಲ್ಲಿ ಬೇಯಿಸುವುದರಿಂದ ಇದರಲ್ಲಿ ಎಣ್ಣೆಯ ಬಳಕೆಯೂ ಅಷ್ಟಾಗಿ ಇರುವುದಿಲ್ಲ. ಆದ್ದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಇಡ್ಲಿ ತಯಾರಿಸುವ ಪ್ರಕ್ರಿಯೆ ಮಾತ್ರ ತುಸು ದೀರ್ಘವಾಗಿರುತ್ತದೆ.
ಹೌದು, ಇಡ್ಲಿ ಮೃದುವಾಗಬೇಕಾದರೆ ಹಿಟ್ಟನ್ನು ಸರಿಯಾಗಿ ಹುದುಗುವುದಕ್ಕೆ ಇಡಬೇಕು. ಇದಕ್ಕಾಗಿ ರಾತ್ರಿಯೇ ಅಕ್ಕಿ, ಉದ್ದಿನಬೇಳೆಯನ್ನು ರುಬ್ಬಿ ಹದ ಮಾಡಿ ಹುದುಗುವುದಕ್ಕೆ ಇಡಬೇಕಾಗುತ್ತದೆ. ಹೀಗೆ ಇಟ್ಟ ಹಿಟ್ಟು ಹುದುಗಲು ೮ ರಿಂದ ೯ ಗಂಟೆ ಬೇಕಾಗುತ್ತದೆ. ಕೆಲವೊಮ್ಮೆ ಹಿಟ್ಟು ರುಬ್ಬಿ ಹುದುಗಲು ಇಡುವುದೇ ಮರೆತು ಹೋಗುವುದುಂಟು. ಹೀಗಾದಾಗ ಹೆಚ್ಚಿನವರು ಬೇಕಿಂಗ್ ಸೋಡಾ, ಇನೋ ಬಳಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಬದಲು ಪ್ರೆಶರ್ ಕುಕ್ಕರ್ ಬಳಸಿ ಕೇವಲ ಒಂದು ಗಂಟೆಯಲ್ಲಿ ಹಿಟ್ಟು ಫರ್ಮೆಂಟ್ ಆಗುವಂತೆ ಮಾಡಬಹುದು. ರುಬ್ಬಿದ ಇಡ್ಲಿ, ದೋಸೆ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಪ್ರೆಶರ್ ಕುಕ್ಕರ್ ಅನ್ನು ಸ್ವಲ್ಪ ಬಿಸಿ ಮಾಡಿ. ಇಡ್ಲಿ ಹಿಟ್ಟು ಹಾಕಿಟ್ಟ ಪಾತ್ರೆಯನ್ನು ಕುಕ್ಕರ್ ಒಳಗೆ ಇರಿಸಿ. ಕುಕ್ಕರ್ ವಿಸಿಲ್ ಇಟ್ಟೇ ಮಂದ ಉರಿಯಲ್ಲಿ ಸುಮಾರು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. ಸುಮಾರು ಒಂದು ಗಂಟೆವರೆಗೆ ಈ ಬ್ಯಾಟರ್ ಕುಕ್ಕರ್ ಒಳಗೆಯೇ ಇರಲಿ. ಕುಕ್ಕರ್ ಒಳಗಿನ ತಾಪಮಾನವು ಹಿಟ್ಟು ಬೇಗನೆ ಹುದುಗಲು ಸಹಾಯ ಮಾಡುತ್ತದೆ. ಇಲ್ಲಿ ಕುಕ್ಕರ್ ಒಳಗೆ ಯಾವ ಪಾತ್ರೆ ಇಡುತ್ತೀರಿ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಜೇಡಿಮಣ್ಣಿನ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ಹಿಟ್ಟು ಬೇಗ ಫರ್ಮೆಂಟ್ ಆಗುತ್ತದೆ. ಈ ಪಾತ್ರೆಗಳು ಹುದುಗುವಿಕೆಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಇಡ್ಲಿ ಮತ್ತು ದೋಸೆ ಹಿಟ್ಟನ್ನು ಸ್ಟೋರ್ ಮಾಡಿಸಲು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆ ಬೆಸ್ಟ್ ಎನ್ನಲಾಗಿದೆ. ಬ್ಯಾಟರ್ ಇನ್ನೂ ಬೇಗ ರೆಡಿಯಾಗಬೇಕಾದರೆ ಸ್ವಲ್ಪ ಕಲ್ಲು ಉಪ್ಪು, ಅರ್ಧ ಟೀ ಚಮಚ ಮೊಸರು, ಕಾಲು ಟೀ ಚಮಚ ಸಕ್ಕರೆ ಮತ್ತು ಕಾಲು ಟೀ ಚಮಚ ನಿಂಬೆ ರಸವನ್ನು ಸೇರಿಸಬೇಕಾಗುತ್ತದೆ. ಈ ಎಲ್ಲಾ ವಸ್ತುಗಳನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ಪಾತ್ರೆಯನ್ನು ಮುಚ್ಚಿದರೆ ಹಿಟ್ಟು ಬಹಳ ಬೇಗ ಫರ್ಮೆಂಟ್ ಆಗುತ್ತದೆ. ಇನ್ನು ಹಿಟ್ಟು ಚೆನ್ನಾಗಿ ಹುದುಗಿ ಬರಬೇಕಾದರೆ ಸ್ವಲ್ಪ ಬೆಚ್ಚಗಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಗ್ಯಾಸ್ ಬಳಿ, ಮೈಕ್ರೋ ಅವನ್ ಒಳಗೆ ಹೀಗೆ ಬೆಚ್ಚಗಿರುವ ಸ್ಥಳದಲ್ಲಿ ಹಿಟ್ಟು ಬೇಗನೆ ರೆಡಿಯಾಗುತ್ತದೆ. ಆದರೆ ನೆನಪಿಡಿ, ಈ ತ್ವರಿತ ಹುದುಗುವಿಕೆ ವಿಧಾನಗಳು ಎಮರ್ಜೆನ್ಸಿ ಸಂದರ್ಭಗಳಲ್ಲಿ ಮಾತ್ರ ಮಾಡುವುದಕ್ಕೆ ಸೂಕ್ತ. ನೈಸರ್ಗಿಕವಾಗಿ ಅಂದರೆ ಸುಮಾರು 7 ಗಂಟೆಗಳ ಹುದುಗಲು ಇಟ್ಟರೆ ಇಡ್ಲಿ, ದೋಸೆಯು ಉತ್ತಮ ರುಚಿಯನ್ನು ಹೊಂದಿರುತ್ತದೆ. ಇದು ಬಹಳ ಬೇಗ ಜೀರ್ಣವೂ ಆಗುತ್ತದೆ. (ಬರಹ: ರಂಜಿತಾ ಆರ್.ಕೆ.)ಸರಿಯಾದ ವಿಧಾನ ಅನುಸರಿಸುವುದು ಮುಖ್ಯ:
ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಸೇವಿಸಿದರೆ ಮಧುಮೇಹಿಗಳಿಗೆ ಒಳ್ಳೇದಾ:
ಕುಕ್ಕರ್ ಮೂಲಕ ಹಿಟ್ಟು ಫರ್ಮೆಂಟ್ ಮಾಡುವ ವಿಧಾನ:
ಬಳಸುವ ಪಾತ್ರೆಯೂ ಮುಖ್ಯವಾಗಿರುತ್ತದೆ:
ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ಸೇವಿಸಿದರೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳಾಗುವುದು!
ಈ ವಿಧಾನವನ್ನೂ ಬಳಸಬಹುದು: