ಭಾರತದ ಅನೇಕ ಭಾಗಗಳಲ್ಲಿ ಅನ್ನ ಪ್ರಮುಖ ಆಹಾರ. ಕೆಲವೊಂದು ಕಡೆಗಳಲ್ಲಿ ಗೊಧಿ, ರಾಗಿ, ಜೋಳವನ್ನು ಸೇವಿಸುತ್ತಾರೆಯಾದರೂ ಬಹುತೇಕ ಪ್ರದೇಶಗಳಲ್ಲಿ ಅನ್ನವೇ ಪ್ರಧಾನ ಆಹಾರ.ಹಾಗಾಗಿ ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ಮನೆಗಳಲ್ಲಿ ಇದನ್ನು ಪ್ರತಿದಿನ ಬೇಯಿಸಲಾಗುತ್ತದೆ. ಹೀಗೆ ಬೇಯಿಸಿದ ಅನ್ನ ಪೂರ್ತಿಯಾಗಿ ಖಾಲಿಯಾಗಿತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಎಷ್ಟೋ ಸಲ ಅನ್ನ ಮಿಕ್ಕುವುದುಂಟು. ಹೀಗೆ ಮಿಕ್ಕಿದ ಅನ್ನವನ್ನು ಚಿತ್ರಾನ್ನ, ಮೊಸರನ್ನ, ಪುಳಿಒಗರೆ, ಫ್ರೈಡ್ ರೈಸ್, ಟೊಮೆಟೋ ಬಾತ್‌ನಂಥಹ ತಿಂಡಿಗಳನ್ನು ತಯಾರಿಸಲು ಬಳಸುವುದೂ ಇದೆ. ಇನ್ನು ಕೆಲವರು ಮಿಕ್ಕಿದ ಅನ್ನವನ್ನು ತಿಂದರೆ ಹೊಟ್ಟೆ ಕೆಡಬಹುದು ಎನ್ನುವ ಕಾರಣ ನೀಡಿ ಕಸದ ಬುಟ್ಟಿಗೆ ಹಾಕುತ್ತಾರೆ. ಪ್ರಾಣಿಗಳಿಗೆ ಹಾಕುವವರೂ ಇದ್ದಾರೆ. ಆದರೆ ಸರಿಯಾದ ವಿಧಾನದಲ್ಲಿ ತೆಗೆದಿಟ್ಟರೆ ಮಿಕ್ಕಿದ ಅನ್ನವನ್ನು ಯಾವ ಭಯವೂ ಇಲ್ಲದೆ ತಿನ್ನಬಹುದು. ಅದರಿಂದ ನಮಗೆ ಬೇಕಾದ ರೀತಿಯಲ್ಲಿ ಬೇರೆ ಬೇರೆ ತಿಂಡಿಗಳನ್ನು ತಯಾರಿಸಬಹುದು.
ಆದರೆ, ಅನ್ನವನ್ನು ತಪ್ಪಾದ ತಾಪಮಾನದಲ್ಲಿ ದೀರ್ಘಕಾಲದವರೆಗೆ ಇಟ್ಟರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಇದು ಫುಡ್ ಪಾಯಿಸನ್ ಅಪಾಯವನ್ನು ಹೆಚ್ಚಿಸುತ್ತದೆ. ಅನ್ನವನ್ನು ಸರಿಯಾಗಿ ತಣ್ಣಗಾದ ಬಳಿಕ ರೆಫ್ರಿಜರೇಟರ್‌ನಲ್ ಇಟ್ಟು ಅಗತ್ಯವಿದ್ದಾಗ ಹೊರ ತೆಗೆದು ಮತ್ತೆ ಸರಿಯಾಗಿ ಬಿಸಿ ಮಾಡುವುದರಿಂದ ಅದು ತಿನ್ನಲು ಯೋಗ್ಯವಾಗಿರುತ್ತದೆ. ಇದು ಫುಡ್ ಪಾಯಿಸನ್ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ರುಚಿ ಮತ್ತು ವಿನ್ಯಾಸವನ್ನು ಸಹ ಸಂರಕ್ಷಿಸುತ್ತದೆ.
ಬೇಯಿಸಿದ ಅನ್ನವನ್ನು ರೂಮ್ ಟೆಪರೇಚರ್‌ನಲ್ಲಿ ಹೆಚ್ಚು ಹೊತ್ತು ಇಡುವುದರಿಂದ ಬ್ಯಾಕ್ಟೀರಿಯಾದ ತ್ವರಿತ ಬೆಳವಣಿಗೆಗೆ ಕಾರಣವಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಬ್ಯಾಸಿಲಸ್ ಸೀರಿಯಸ್ ಎಂಬ ಬ್ಯಾಕ್ಟೀರಿಯಾವು ಅನ್ನದಲ್ಲಿ ಹುಟ್ಟಿಕೊಳ್ಳಬಹುದು. ಇದು ಆಹಾರವನ್ನು ವಿಷವಾಗಿ ಪರಿವರ್ತಿಸುವುದಕ್ಕೆ ಕಾರಣವಾಗಬಹುದು. ಇದನ್ನು ತಿಂದರೆ ಹೊಟ್ಟೆ ನೀವು, ವಾಂತಿ ಭೇದಿ ಮುಂತಾದ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೊರಗೆಯೇ ತೆಗೆದಿಟ್ಟ ಅನ್ನ ತನ್ನ ರುಚಿ ಮತ್ತು ವಿನ್ಯಾಸವನ್ನು ಕಳೆದುಕೊಳ್ಳುತ್ತದೆ. ಎಲ್ಲರೂ ತಿಂದ ನಂತರ ಕೂಡಾ ಅನ್ನ ಮಿಕ್ಕಿದರೆ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ, ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಇಡಿ. ರೂಮ್ ಟೆಪರೇಚರ್‌ನಲ್ಲಿ ಅನ್ನವನ್ನು ಎಂದಿಗೂ ದೀರ್ಘಕಾಲದವರೆಗೆ ಬಿಡಬೇಡಿ. ರೆಫ್ರಿಜರೇಟರ್‌ನಲ್ಲಿಟ್ಟ ಅನ್ನವನ್ನು 3 ರಿಂದ 4 ದಿನಗಳಲ್ಲಿ ಸೇವಿಸಬೇಕು. ಫ್ರೀಜ್‌ನಲ್ಲಿ ಇದೆ ಎನ್ನುವ ಕಾರಣಕ್ಕೆ ವಾರಗಟ್ಟಲೆ ಇಟ್ಟು ತಿನ್ನುವುದು ಕೂಡಾ ಅಪಾಯಕಾರಿ. ಆದರೆ ಫ್ರೀಜರ್‌ನಲ್ಲಿಟ್ಟ ಅನ್ನವನ್ನು ದೀರ್ಘಕಾಲದವರೆಗೆ ತಿನ್ನಬಹುದು. ಫ್ರೀಜರ್‌ನಲ್ಲಿಟ್ಟು ಸರಿಯಾಗಿ ಹೆಪ್ಪುಗಟ್ಟಿದ ಅನ್ನವು ಸುಮಾರು 6 ತಿಂಗಳವರೆಗೆ ತಿನ್ನಲು ಯೋಗ್ಯ ಎನ್ನಲಾಗಿದೆ. ಫ್ರಿಜ್‌ನಲ್ಲಿ ಇಟ್ಟ ಅನ್ನವನ್ನು ಮತ್ತೆ ಹೊರ ತೆಗೆದು ತಿನ್ನಬೇಕು ಎಂದಾದರೆ ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟು ಅನ್ನವನ್ನು ಮಾತ್ರ ಮತ್ತೆ ಬಿಸಿ ಮಾಡಿ. ಫ್ರಿಜ್‌ನಲ್ಲಿಟ್ಟ ಎಲ್ಲಾ ಅನ್ನವನ್ನು ಅಗತ್ಯವಿಲ್ಲದಿದ್ದರೂ ಬಿಸಿ ಮಾಡುವುದಕ್ಕೆ ಹೋಗಬೇಡಿ. ಅಗತ್ಯವಿರುವಷ್ಟು ಅನ್ನವನ್ನು ಮಾತ್ರ ಹೊರ ತೆಗೆದು ಮತ್ತೆ ಬಿಸಿ ಮಾಡಿ. ಬೇಯಿಸಿದ ಅನ್ನವನ್ನು ರೂಮ್ ಟೆಂಪರೇಚರ್‌ನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬೇಡಿ. ಅನ್ನವನ್ನು ದೀರ್ಘಕಾಲದವರೆಗೆ ಅಂದರೆ ರಾತ್ರಿಯ ಅನ್ನವನ್ನು ಬೆಳಗಿನವರೆಗೆ ಹೊರಗೆ ಬಿಟ್ಟಿದ್ದರೆ, ಅದನ್ನು ಸೇವಿಸುವ ಬದಲು ಎಸೆಯುವುದು ಉತ್ತಮ. ಫ್ರಿಜ್‌ನಲ್ಲಿ ಇಟ್ಟ ಅನ್ನವನ್ನ ಕೂಡಾ ಸೇವಿಸುವ ಮುನ್ನ ಬಿಸಿ ಮಾಡುವಾಗ ಸರಿಯಾಗಿ ಸಂಪೂರ್ಣವಾಗಿ ಬಿಸಿ ಮಾಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. (ಬರಹ: ರಂಜಿತಾ ಆರ್.ಕೆ.)ಮಿಕ್ಕಿದ ಅನ್ನ ಫುಡ್ ಪಾಯಿಸನ್ ಆಗದಂತೆ ತಡೆಯುವ ವಿಧಾನ:
ಅನ್ನವನ್ನು ಸರಿಯಾಗಿ ಸಂಗ್ರಹಿಸುವುದು ಮುಖ್ಯ:
ಕೇವಲ 15 ನಿಮಿಷದಲ್ಲಿ ರುಚಿಕರ ಎಗ್ ಫ್ರೈಡ್ ರೈಸ್ ತಯಾರಿಸುವ ವಿಧಾನ
ಅನ್ನವನ್ನು ಸಂಗ್ರಹಿಸಲು ಸುಲಭ ಮಾರ್ಗಗಳು:
Rice: ಒಂದು ತಿಂಗಳು ಅನ್ನ ಸೇವಿಸದೇ ಇದ್ದರೆ ಆರೋಗ್ಯದ ಮೇಲೆ ಆಗುವ ಏನು ಪರಿಣಾಮ?
ಫುಡ್ ಪಾಯಿಸನ್ ಆಗದಂತೆ ಏನು ಮಾಡಬೇಕು ?: