ಮಳೆಗಾಲದಲ್ಲಿ ಸುಲಭವಾಗಿ ಮತ್ತು ವೇಗವಾಗಿ ಬಟ್ಟೆ ಒಣಗಿಸಲು ಈ ಟ್ರಿಕ್‌ ಬಳಸಿ


ಮಳೆಗಾಲದಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಇರುವುದಿಲ್ಲ. ಹಾಗಾಗಿ ಈ ಋತುವಿನಲ್ಲಿ ಬಟ್ಟೆ ಒಣಗಿಸುವುದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಮನೆಯ ಒಳಗೆ ಬಟ್ಟೆಗಳನ್ನು ಒಣಗಲು ಹಾಕಬಹುದು. ಆದರೆ ಇದು ಒಂದೆರಡು ದಿನಗಳನ್ನು ತೆಗೆದುಕೊಳ್ಳುವುದು ಗ್ಯಾರಂಟಿ. ಅಲ್ಲದೆ ನೆರಳಲ್ಲಿ ಬಟ್ಟೆಗಳನ್ನು ಒಣಗಿಸಿದರೆ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುವ ಭಯವೂ ಇರುತ್ತದೆ. ಹೀಗಿರುವಾಗ ಮಳೆಗಾಲದಲ್ಲಿಯೂ ವೇಗವಾಗಿ ಬಟ್ಟೆ ಒಣಗುವಂತೆ ಮಾಡಲು ಸ್ಮಾರ್ಟ್ ಲಾಂಡ್ರಿ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು.

Advertisement

ಕಿಟಕಿ ಬಾಗಿಲು ತೆರೆದಿಟ್ಟು ಒಣಗಿಸಿ:

ನಿರಂತರವಾಗಿ ಮಳೆ ಸುರಿಯುತ್ತಿದ್ದರೆ ಚೆನ್ನಾಗಿ ಗಾಳಿ ಇರುವ ಕೊಠಡಿ ಅಥವಾ ಬಾಲ್ಕನಿಯಲ್ಲಿ ಬಟ್ಟೆಗಳನ್ನು ಒಣಗಲು ಹಾಕಬಹುದು. ಕೋಣೆಯಲ್ಲಿ ಬಟ್ಟೆಗಳನ್ನು ಒಣಗಲು ಹಾಕುವಾಗ ಕಿಟಕಿ ಬಾಗಿಲುಗಳನ್ನು ತೆರೆದಿಡುವುದನ್ನು ಮರೆಯಬೇಡಿ. ಆಗ ಹೊರಗಿನಿಂದ ಬೀಸುವ ಗಾಳಿ ಬಟ್ಟೆಯನ್ನು ಒಣಗಿಸಲು ಸಹಾಯ ಮಾಡುತ್ತದೆ.ಇಲ್ಲವಾದರೆ ಮೊದಲೇ ಹೇಳಿದ ಹಾಗೆ ಬ್ಯಾಕ್ಟೀರಿಯಾದ ಭಯ ಕಾಡಬಹುದು.

Advertisement

ಎರಡು ಬಾರಿ ಸ್ಪಿನ್‌ ಮಾಡಿ:

ಬಟ್ಟೆಗಳನ್ನು ಒಣಗಿಸುವ ಮೊದಲು ಅವುಗಳಲ್ಲಿರುವ ಸಂಪೂರ್ಣ ನೀರಿನ ಅಂಶವನ್ನು ತೆಗೆದು ಹಾಕಲು ವಾಷಿಂಗ್‌ ಮೆಷಿನ್‌ನಲ್ಲಿ ಎರಡು ಬಾರಿ ಸ್ಪಿನ್‌ ಮಾಡುವುದನ್ನು ಮರೆಯಬೇಡಿ. ಹೀಗಾದಾಗ ಬಟ್ಟೆಯಲ್ಲಿರುವ ನೀರನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು. ನಂತರ ಬಾಲ್ಕನಿ ಅಥವಾ ಗಾಳಿಯ ಪ್ರಸರಣ ಇರುವ ಕೋಣೆಯಲ್ಲಿ ಬಟ್ಟೆಗಳನ್ನು ಹಾಕಿದರೂ ಒಣಗುತ್ತದೆ.

ಗಂಟೆಗಟ್ಟಲೆ ಉಜ್ಜುವ ಅಗತ್ಯವೇ ಇಲ್ಲ: ಅಡುಗೆಮನೆ ಸಿಂಕ್ ಪಳಪಳ ಹೊಳೆಯುವಂತೆ ಮಾಡಲು ಇಲ್ಲಿದೆ 7 ಟಿಪ್ಸ್

ದಪ್ಪ ಟವಲ್‌ನಲ್ಲಿ ಸುತ್ತಿ:

ಒದ್ದೆಯಾದ ಬಟ್ಟೆಗಳನ್ನು ಸ್ವಚ್ಛವಾದ, ಒಣಗಿದ ಟವಲ್‌ನಲ್ಲಿ ಸುತ್ತಿ ನಿಧಾನವಾಗಿ ಒತ್ತಿರಿ. ಹೀಗೆ ಮಾಡುವಾಗ ಟವಲ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಬಟ್ಟೆ ಒಣಗಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ.

Advertisement

ಫ್ಯಾನ್‌ ಗಾಳಿ:

ಒದ್ದೆಯಾದ ಬಟ್ಟೆಗಳ ಸುತ್ತ ಗಾಳಿಯ ಹರಿವನ್ನು ಹೆಚ್ಚಿಸಲು ಹೈಸ್ಪೀಡ್‌ನಲ್ಲಿ ಫ್ಯಾನ್ ಆನ್‌ ಮಾಡಿ ಇಡಿ. ಈ ಮೂಲಕ ಬಟ್ಟೆಯ ನೀರು ಆವಿಯಾಗುವ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ, ಬಟ್ಟೆ ಬಹಳ ಬೇಗ ಒಣಗುತ್ತದೆ.

ಬಟ್ಟೆಗಳ ನಡುವೆ ಇರಲಿ ಅಂತರ:

ಹೆಚ್ಚು ಬಟ್ಟೆಗಳನ್ನು ಒಟ್ಟಿಗೆ ನೇತುಹಾಕಬೇಡಿ. ಬಟ್ಟೆಗಳ ನಡುವೆ ಅಂತರವನ್ನು ಕಾಯ್ದುಕೊಳ್ಳಿ. ಹೀಗೆ ಮಾಡುವುದರಿಂದ ಗಾಳಿಯು ಹಾದುಹೋಗಲು ಅನುವು ಮಾಡಿಕೊಡುತ್ತದೆ ಮತ್ತು ಬಟ್ಟೆ ವೇಗವಾಗಿ ಒಣಗಲು ಸಹಾಯ ಮಾಡುತ್ತದೆ.

ಇದೊಂದು ವಸ್ತು ಬಳಸಿ ಬಾತ್‌ರೂಂ ಗೋಡೆಗಳಲ್ಲಿ ಅಂಟಿಕೊಂಡಿರುವ ಕಪ್ಪು ಕಲೆಗಳನ್ನು ನಿಮಿಷದಲ್ಲಿ ತೆಗದು ಬಿಡಬಹುದು

ಹ್ಯಾಂಗರ್‌ಗಳ ಬಳಕೆ:

ಶರ್ಟ್‌ಗಳು, ಉಡುಪುಗಳು ಮತ್ತು ಟಾಪ್‌ಗಳಿಗೆ ಹ್ಯಾಂಗರ್‌ಗಳನ್ನು ಬಳಸಿ. ಹೀಗೆ ಮಾಡಿದಾಗ ಬಟ್ಟೆಯ ಸುತ್ತಲೂ ಉತ್ತಮ ಗಾಳಿಯ ಹರಿಯುತ್ತದೆ. ಇದು ಬಟ್ಟೆ ಬೇಗನೇ ಒಣಗಲು ಸಹಾಯ ಮಾಡುತ್ತದೆ.

Advertisement

AC ಹೊರಾಂಗಣ ಘಟಕದ ಬಳಿ:

ಕಂಡೆನ್ಸರ್ ಅಥವಾ ಕಂಪ್ರೆಸರ್ ಘಟಕ ಎಂದೂ ಕರೆಯಲ್ಪಡುವ AC ಹೊರಾಂಗಣ ಘಟಕದಿಂದ ಬಿಡುಗಡೆಯಾಗುವ ಬೆಚ್ಚಗಿನ ಗಾಳಿಯು ಬಟ್ಟೆ ಒಣಗುವ ಪ್ರಕ್ರಿಯೆಯನ್ನು ವೇಗವಾಗಿಸುತ್ತದೆ. ಎಸಿ ಕಂಪ್ರೆಸರ್ ಘಟಕದ ಬೆಚ್ಚಗಿನ ಗಾಳಿಯು ಬಟ್ಟೆಗಳನ್ನು ತಲುಪುವ ಸುರಕ್ಷಿತ ದೂರದಲ್ಲಿ ಒಣಗಿಸುವ ರ್ಯಾಕ್ ಅನ್ನು ಇರಿಸಿ.

ಬಟ್ಟೆಗಳನ್ನು ಪ್ರತ್ಯೇಕಿಸಿ ಒಣಗಿಸಿ:

ಜೀನ್ಸ್, ಟವೆಲ್, ಕಂಬಳಿ ಮತ್ತು ಸ್ವೆಟ್‌ಶರ್ಟ್‌ಗಳು ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಉತ್ತಮ ಗಾಳಿಯ ಹರಿವಿಗಾಗಿ ಅವುಗಳನ್ನು ಹಗುರವಾದ ಬಟ್ಟೆಗಳಿಂದ ಪ್ರತ್ಯೇಕವಾಗಿ ಇರಿಸಿ.

ಇಸ್ತ್ರಿ ಬಳಸಿ:

ಇನ್ನೇನು ಬಟ್ಟೆ ಸ್ವಲ್ಪ ಒದ್ದೆಯಿದೆ ಎಂದಾದರೆ ಅಂಥಹ ಬಟ್ಟೆಗಳಿಗೆ ಇಸ್ತ್ರಿ ಮಾಡಬಹುದು. ಹೀಗೆ ಮಾಡುವುದರಿಂದ ಬಟ್ಟೆಯಲ್ಲಿ ಉಳಿದಿರುವ ಅಲ್ಪಸ್ವಲ್ಪ ತೇವಾಂಶವನ್ನು ಸುಲಭವಾಗಿ ತೆಗೆದುಹಾಕಬಹುದು.

Advertisement

ಸಂಪೂರ್ಣ ಒಣಗಿರುವುದನ್ನು ಖಚಿತಪಡಿಸಿಕೊಳ್ಳಿ:

ಒದ್ದೆ ಬಟ್ಟೆಗಳನ್ನು ವಾಷಿಂಗ್‌ ಮೆಷಿನ್‌ನಲ್ಲಿ ತುಂಬಾ ಹೊತ್ತು ಇಡಬೇಡಿ. ಬಟ್ಟೆಗಳನ್ನು ಮಡಚಿಡುವ ಮೊದಲು ಸಂಪೂರ್ಣವಾಗಿ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜೀನ್ಸ್ ಮತ್ತು ಹೂಡಿಗಳಂತಹ ದಪ್ಪ ಉಡುಪುಗಳನ್ನು ಹೆಚ್ಚುವರಿಯಾಗಿ ಸ್ಪಿನ್‌ ಮಾಡುವ ಮೂಲಕ ಒಣಗುವ ಪ್ರಕ್ರಿಯೆಯನ್ನು ಸುಲಭವಾಗಿಸಬಹುದು.

ಎಲ್ಲಾ ಬಟ್ಟೆಗಳನ್ನು ಒಟ್ಟಿಗೆ ಒಣ ಹಾಕಬೇಡಿ:

ಸ್ವಲ್ಪ ಸ್ವಲ್ಪವೇ ಬಟ್ಟೆಗಳನ್ನು ಒಗೆದು ಒಣಗಲು ಹಾಕಿ. ಹೀಗೆ ಮಾಡುವಾಗ ಬಟ್ಟೆಗಳನ್ನು ಒಣಗಿಸುವ ರ್ಯಾಕ್‌ನಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ. ಇದರಿಂದ ಗಾಳಿಯ ಹರಿವು ಸುಧಾರಿಸುತ್ತದೆ.

ಬಟ್ಟೆಗಳ ಆಯ್ಕೆ ಸರಿಯಾಗಿರಲಿ:

ಮಳೆಗಾಲದಲ್ಲಿ, ಪಾಲಿಯೆಸ್ಟರ್ ಮಿಶ್ರಣಗಳು ಮತ್ತು ಬೇಗ ಒಣಗುವ ವಸ್ತುಗಳಂತಹ ಹಗುರವಾದ ಬಟ್ಟೆಗಳನ್ನು ಆರಿಸಿ. ಕಾಟನ್‌ ಅಥವಾ ಡೆನಿಮ್‌ಗೆ ಹೋಲಿಸಿದರೆ ಈ ಬಟ್ಟೆಗಳು ಸುಲಭವಾಗಿ ಒಣಗುತ್ತದೆ.

Advertisement

ಹವಾನಿಯಂತ್ರಣ ಅಥವಾ ಡಿಹ್ಯೂಮಿಡಿಫೈಯರ್ ಅನ್ನು ಚಲಾಯಿಸುವುದರಿಂದ ಒಳಾಂಗಣದಲ್ಲಿ ತೇವಾಂಶದ ಮಟ್ಟವನ್ನು ಕಡಿಮೆ ಮಾಡಬಹುದು.

(ಬರಹ: ರಂಜಿತಾ ಆರ್.ಕೆ.)

English Summary

Laundry Hacks: easy laundry hacks best way to dry clothes faster in mansoon.