ಉದ್ಯೋಗ ಕ್ಷೇತ್ರದಲ್ಲಿ ಪ್ರತಿಭೆಯೊಂದೇ ಇದ್ದರೆ ಸಾಕಾಗುವುದಿಲ್ಲ. ಕಚೇರಿಯಲ್ಲಿನ ಸ್ಫರ್ಧೆ, ಒತ್ತಡ, ಕಚೆರಿಯ ರಾಜಕೀಯ ಮತ್ತು ಸಹೋದ್ಯೋಗಿಗಳ ನಡುವಿನ ಸಂಬಂಧಗಳನ್ನು ಸಮತೋಲದಿಂದ ನಿಭಾಯಿಸುವುದು ಕೂಡ ಅಷ್ಟೇ ಮುಖ್ಯ. ಇಂತಹ ಅನೇಕ ಸಂದರ್ಭಗಳಲ್ಲಿ ಆಚಾರ್ಯ ಚಾಣಕ್ಯರ ನೀತಿಗಳು ಇಂದಿಗೂ ಮಾರ್ಗದರ್ಶನ ನೀಡುತ್ತದೆ. ಕಾರ್ಪೋರೇಟ್ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುವ ಈ ಚಾಣಕ್ಯರ ಮೂರು ಪ್ರಮುಖ ಪಾಠಗಳು ಇಲ್ಲಿವೆ.
ಬೆನ್ನ ಹಿಂದೆ ಮಾತನಾಡುವವರ ಬಗ್ಗೆ ಎಚ್ಚರ
ಚಾಣಕ್ಯರ ಪ್ರಕಾರ ಎದುರಿಗೆ ಸಿಹಿಯಾದ ಮಾತುಗಳನ್ನು ಆಡಿ, ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇರಬೇಕು. ಇಂತಹ ವ್ಯಕ್ತಿ ವಿಷ ತುಂಬಿದ ಪಾತ್ರೆಯ ಮೇಲಿರುವ ಹಾಲಿನಂತೆ ಇರುತ್ತಾರೆ ಎಂದು ಹೇಳಿದ್ದಾರೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬಗ್ಗೆ ಗಾಸಿಪ್ ಮಾಡುವುದು ಅಥವಾ ಬೆನ್ನ ಹಿಂದೆ ಮಾತನಾಡವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಇಂತಹ ಚರ್ಚೆಗಳಲ್ಲಿ ಭಾಗಿಯಾಗುವುದರಿಂದ ಅನಗತ್ಯ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಇಂತಹವರೊಂದಿಗೆ ಅಗತ್ಯ ಇದಷ್ಟು ವ್ಯವಹರಿಸಿ ಮತ್ತು ಗಾಸಿಪ್್ ನಿಂದ ದೂರ ಇರುವುದು ಒಳ್ಳೆಯದು.
ಚಾಣಕ್ಯ ನೀತಿಯ ಪ್ರಕಾರ, ಶತ್ರು ಯಾವಾಗಲೂ ಎದುರಾಳಿಯ ದುರ್ಬಲತೆಯನ್ನೇ ತನ್ನ ಬಂಡವಾಳ ಆಗಿ ಬಳಸಿಕೊಳ್ಳಬಹುದು. ಈ ತತ್ವ ಉದ್ಯೋಗ ಕ್ಷೇತ್ರಕ್ಕೆದಲ್ಲಿಯೊ ಅನ್ವಯ ಆಗುತ್ತದೆ. ಕಾರ್ಪೊರೇಟ್ ಜೀವನದಲ್ಲಿ ನಿಮ್ಮ ಆತ್ಮ ವಿಶ್ವಾಸ, ಕೌಶಲ್ಯ ಮತ್ತು ಮನೋಬಲವನ್ನು ಸದಾ ಬಲಪಡಿಸಿಕೊಳ್ಳಬೇಕು. ಇತರರ ಟೀಕೆ, ಅಭಿಪ್ರಾಯ ಅಥವಾ ನೆಗೆಟಿವ್ ಮಾತುಗಳಿಂದ ವಿಚಲಿತರಾಗದೆ, ನಿಮ್ಮ ಕೆಲಸದ ಮೇಲೆ ಗಮನ ಇಟ್ಟುಕೊಂಡರೆ ನೀವು ಈ ತರಹದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಚಾಣಕ್ಯರು, ವಿಷವಿಲ್ಲದ ಹಾವೂ ವಿಷಕಾರಕ ಎಂಬ ಭಾವನೆ ಮೂಡಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಇದರ ಅರ್ಥ ಏನೆಂದರೆ ಯಾರನ್ನೂ ಹೆದರಿಸುವುದಲ್ಲ, ನಿಮ್ಮ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ವೃತ್ತಿಪರತೆಯನ್ನು ಉಳಿದವರು ಗುರುತಿಸುವಂತೆ ಮಾಡಬೇಕು ಎಂದರ್ಥ. ಕಚೇರಿಯಲ್ಲಿ ಉತ್ತಮ ಕೆಲಸದ ನೈತಿಕತೆ ಬೆಳೆಸಿಕೊಳ್ಳಿ. ಜವಾಬ್ದಾರಿಯಿಂದ ಕೆಲಸ ನಿರ್ವವಹಿಸಿ, ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು ಅಗತ್ಯವಿದ್ದಾಗ ಹೆಚ್ಚಾಗಿ ಕೆಲಸ ಮಾಡಲು ಪ್ರಯತ್ನಿಸಿ ಮತ್ತು ಸಿದ್ದರಾಗಿ. ನಿಮ್ಮ ಕಾರ್ಯಕ್ಷಮೆಯೇ ನಿಮ್ಮನ್ನು ಇತರರಿಂದ ಬಿನ್ನವಾಗಿ ಕಾಣುವಂತೆ ಮಾಡುತ್ತದೆ. ಕಾರ್ಪೋರೇಟ್ ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪ್ರತಿಭೆ ಇದ್ದರೆ ಸಾಲದು, ನಮ್ಮಲ್ಲಿ ಎಚ್ಚರಿಕೆ, ಆತ್ಮವಿಶ್ವಾಸ, ವಿವೇಚನೆ ಮತ್ತು ಉತ್ತಮವಾದ ಕೆಲಸದ ನೈಪುಣ್ಯತೆ ಕೂಡ ಮುಖ್ಯ. ಚಾಣಕ್ಯರ ಈ ಸರಳ ನೀತಿಗಳು ಆದರೆ ಪರಿಣಾಮಕಾರಿ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉದ್ಯೋಗ ಕ್ಷೇತ್ರದಲ್ಲಿ ಬರುವ ಸವಾಲುಗಳನ್ನು ಆತ್ಮವಿಶ್ವಾಸದಿ೦ದ ಎದುರಿಸಿ ಯಶಸ್ಸಿನತ್ತ ಸಾಗಬಹುದು.ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬಾರದು
ಚಾಣಕ್ಯ ನೀತಿ: ಸಮಾಜದಲ್ಲಿ ಗೌರವ ಸಿಗಬೇಕೆ? ಹಾಗಾದರೆ ಜೀವನದಲ್ಲಿ ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳಿ
ಚಾಣಕ್ಯ ನೀತಿ: ಜೀವನದ ದಿಕ್ಕನ್ನೇ ಬದಲಿಸಬಲ್ಲ 4 ಪ್ರಮುಖ ಜೀವನ ಪಾಠಗಳು!
ಯಶಸ್ಸಿನ ಗುಟ್ಟು