ಮಳೆಗೆ ಹೆಲ್ಮೆಟ್ ವೈಸರ್ ಮಸುಕಾಗುತ್ತದೆಯೇ? ಈ ಸರಳ ಟ್ರಿಕ್‌ ಟ್ರೈ ಮಾಡಿ, ಫಾಗ್‌ ಬರುವುದೇ ಇಲ್ಲ


ಭಾರೀ ಮಳೆಗೆ ಬೈಕ್ ಅಥವಾ ಸ್ಕೂಟರ್ ಓಡಿಸುವುದು ಒಂದು ರೀತಿಯ ಸವಾಲೇ ಸರಿ. ಈ ಋತುವಿನಲ್ಲಿ ದ್ವಿಚಕ್ರ ವಾಹನ ಸವಾರರು ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಹೆಲ್ಮೆಟ್‌ನ ವೈಸರ್‌ನಲ್ಲಿ ಏಳುವ ಫಾಗ್.‌ ಹೊರಗೆ ಸುರಿಯುವ ಮಳೆ ನೀರು ಮತ್ತು ಉಸಿರಾಟದಿಂದ ಉತ್ಪತ್ತಿಯಾಗುವ ಆವಿ ಸೇರಿ ವೈಸರ್ ಅನ್ನು ಸಂಪೂರ್ಣವಾಗಿ ಮಸುಕಾಗುವಂತೆ ಮಾಡುತ್ತದೆ. ಇದರಿಂದ ಮುಂದಿನ ರಸ್ತೆಯನ್ನು ಸ್ಪಷ್ಟವಾಗಿ ನೋಡುವುದು ಕೂಡಾ ಸಾಧ್ಯವಾಗುವುದಿಲ್ಲ. ಇದು ಅಪಘಾತಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹಾಗಾಗಿ ದ್ವಿಚಕ್ರ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ತಮ್ಮ ವೈಸರ್‌ಗಳನ್ನು ಪದೇ ಪದೇ ಎತ್ತುತ್ತಾರೆ. ಇದರಿಂದಾಗಿ ಮಳೆನೀರು ಅವರ ಕಣ್ಣಿಗೆ ಬೀಳುತ್ತದೆ. ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮಲ್ಲಿ ಅನೇಕರು ಈ ಸಮಸ್ಯೆಯನ್ನು ಎದುರಿಸಿರಬಹುದು.

Advertisement

ಆದರೆ, ಇದಕ್ಕೊಂದು ಸುಲಭ ಪರಿಹಾರವಿದೆ. ಈ ಆಂಟಿ ಫಾಗ್‌ ಹ್ಯಾಕ್‌ ಅನ್ನು ಬಳಸುವ ಮೂಲಕ್ ಅದೆಂಥಾ ಮಳೆಗೂ ನಿಮ್ಮ ಹೆಲ್ಮೆಟ್‌ ವೈಸರ್‌ ಮಸುಕಾಗದಂತೆ ಮಾಡಬಹುದು.

Advertisement

1. ಆಲೂಗಡ್ಡೆ ಹ್ಯಾಕ್:

ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಆಲೂಗಡ್ಡೆ ಅತ್ಯುತ್ತಮವಾದ ನೈಸರ್ಗಿಕ ಮಂಜು ವಿರೋಧಿ ಏಜೆಂಟ್ ಆಗಿದೆ. ಆಲೂಗಡ್ಡೆಯಲ್ಲಿರುವ ಸ್ಟಾರ್ಚ್‌ ನೀರು ಮತ್ತು ಹಬೆಯನ್ನು ವೈಜರ್‌ಗೆ ಅಂಟಿಕೊಳ್ಳದಂತೆ ತಡೆಯುತ್ತದೆ.

ಬಳಸುವುದು ಹೇಗೆ ?: ಹಸಿ ಆಲೂಗಡ್ಡೆಯನ್ನು ಅರ್ಧದಷ್ಟು ಕತ್ತರಿಸಿ. ಆಲೂಗಡ್ಡೆಯ ಒಳಭಾಗವನ್ನು ಹೆಲ್ಮೆಟ್ ವೈಸರ್ ಮೇಲೆ ಒಳಗೆ ಮತ್ತು ಹೊರಗೆ ನಿಧಾನವಾಗಿ ಉಜ್ಜಿಕೊಳ್ಳಿ. ನಂತರ, ವೈಸರ್ ಅನ್ನು ಸ್ವಚ್ಛವಾದ, ಒಣ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಒರೆಸಿ. ಇಲ್ಲಿ ನೀರು ಬಳಸಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ತಂತ್ರವು ವೈಸರ್ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ. ಇದು ನೀರಿನ ಹನಿಗಳು ಮತ್ತು ಆವಿಯನ್ನು ತ್ವರಿತವಾಗಿ ಹೋಗಲಾಡಿಸಲು ಅನುವು ಮಾಡಿಕೊಡುತ್ತದೆ.

Advertisement
ಗಂಟೆಗಟ್ಟಲೆ ಉಜ್ಜುವ ಅಗತ್ಯವೇ ಇಲ್ಲ: ಅಡುಗೆಮನೆ ಸಿಂಕ್ ಪಳಪಳ ಹೊಳೆಯುವಂತೆ ಮಾಡಲು ಇಲ್ಲಿದೆ 7 ಟಿಪ್ಸ್

2. ಶೇವಿಂಗ್ ಕ್ರೀಮ್ ಅಥವಾ ಫೋಮ್:

ಶೇವಿಂಗ್ ಕ್ರೀಮ್ ಶೇವಿಂಗ್‌ ಮಾಡುವುದಕಷ್ಟೇ ಅಲ್ಲ, ಇದು ವೈಸರ್‌ನಲ್ಲಿ ಸೇರಿಕೊಳ್ಳುವ ಫಾಗ್‌ ಅನ್ನು ಹೋಗಲಾಡಿಸಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿರುವ ಪದಾರ್ಥಗಳು ವೈಸರ್ ಮೇಲೆ ನೀರು ರೂಪುಗೊಳ್ಳುವುದನ್ನು ತಡೆಯುತ್ತದೆ.

ಬಳಸುವ ವಿಧಾನ ಯಾವುದು ?: ಸ್ವಲ್ಪ ಶೇವಿಂಗ್ ಕ್ರೀಮ್ ಅಥವಾ ಫೋಮ್ ತೆಗೆದುಕೊಂಡು ಅದನ್ನು ವೈಸರ್‌ನ ಒಳಗೆ ಮತ್ತು ಹೊರಗೆ ಹಚ್ಚಿ. 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಮೈಕ್ರೋಫೈಬರ್ ಬಟ್ಟೆಯಿಂದ ವೈಸರ್ ಅನ್ನು ಚೆನ್ನಾಗಿ ಒರೆಸಿ. ವೈಸರ್ ಫಳ ಫಳನೆ ಹೊಳೆಯುತ್ತದೆ ಮಾತ್ರವಲ್ಲ ಎಷ್ಟೇ ಮಳೆ ಬಂದರೂ ಫಾಗ್‌ ರೂಪುಗೊಳ್ಳುವುದಿಲ್ಲ.

Advertisement
ಇದೊಂದು ವಸ್ತು ಬಳಸಿ ಬಾತ್‌ರೂಂ ಗೋಡೆಗಳಲ್ಲಿ ಅಂಟಿಕೊಂಡಿರುವ ಕಪ್ಪು ಕಲೆಗಳನ್ನು ನಿಮಿಷದಲ್ಲಿ ತೆಗದು ಬಿಡಬಹುದು

3. ಲಿಕ್ವಿಡ್ ಡಿಶ್ ಸೋಪ್ ಅಥವಾ ಶಾಂಪೂ:

ಇಲ್ಲಿ ಲಿಕ್ವಿಡ್ ಡಿಶ್ ಸೋಪ್ ಅಥವಾ ಯಾವುದೇ ಸೌಮ್ಯವಾದ ಶಾಂಪೂ ಅದ್ಭುತ ಕೆಲಸವನ್ನು ಮಾಡುತ್ತದೆ. ಇದು ವೈಸರ್‌ನ ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುತ್ತದೆ.

ಹೇಗೆ ಬಳಸುವುದು: ಒಂದು ಅಥವಾ ಎರಡು ಹನಿ ಲಿಕ್ವಿಡ್ ಸೋಪ್ ಅಥವಾ ಶಾಂಪೂವನ್ನು ವೈಸರ್‌ಗೆ ಹಚ್ಚಿ. ಅದನ್ನು ಮೃದುವಾದ ಬಟ್ಟೆಯಿಂದ ಪೂರ್ತಿ ವೈಸರರ್‌ಗೆ ಹರಡಿ. ಗಾಜು ಸಂಪೂರ್ಣವಾಗಿ ಪಾರದರ್ಶಕವಾಗುವವರೆಗೆ ಒರೆಸಿ. ಈ ಹ್ಯಾಕ್ ಪ್ರಯಾಣ ಮಾಡುವಾಗ ಗಂಟೆಗಳ ಕಾಲ ವೈಸರ್‌ನಲ್ಲಿ ಫಾಗ್‌ ರೂಪುಗೊಳ್ಳುವುದನ್ನು ತತಡೆಯುತ್ತದೆ.

Advertisement

4. ಆಂಟಿ-ಫಾಗ್ ಫಿಲ್ಮ್:

ಈ ಮನೆಮದ್ದುಗಳನ್ನು ಪದೇ ಪದೇ ಬಳಸುವುದು ಇಷ್ಟವಿಲ್ಲದೆ ಹೋದರೆ ನೀವು ಮಾರುಕಟ್ಟೆಯಿಂದ ಅಥವಾ ಆನ್‌ಲೈನ್ ಮೂಲಕ "ಆಂಟಿ-ಫಾಗ್ ಫಿಲ್ಮ್ ಇನ್ಸರ್ಟ್" ಅನ್ನು ಖರೀದಿಸಬಹುದು. ಇದು ಪಾರದರ್ಶಕ ಸ್ಟಿಕ್ಕರ್ ತರಹದ ಫಿಲ್ಮ್ ಆಗಿದ್ದು, ಇದನ್ನು ಹೆಲ್ಮೆಟ್‌ನ ವೈಸರ್‌ನ ಒಳಭಾಗಕ್ಕೆ ಅಂಟಿಸಲಾಗುತ್ತದೆ. ಇದು ಸಂಪೂರ್ಣವಾಗಿ ಜಲನಿರೋಧಕ ಮತ್ತು ಮಂಜು ನಿರೋಧಕವಾಗಿದ್ದು, ಮಳೆ ಮತ್ತು ಶೀತ ವಾತಾವರಣದಲ್ಲಿ ದೃಷ್ಟಿಯನ್ನು ಸ್ಪಷ್ಟವಾಗಿರಿಸುತ್ತದೆ.

ಇಲ್ಲಿ ನೆನಪಿಡಬೇಕಾದ ಅಂಶಗಳು:

-ಹೆಲ್ಮೆಟ್ ವೈಸರ್ ಅನ್ನು ಸ್ವಚ್ಛಗೊಳಿಸಲು ಎಂದಿಗೂ ಒರಟಾದ ಅಥವಾ ಕೊಳಕು ಬಟ್ಟೆಯನ್ನು ಬಳಸಬೇಡಿ. ಯಾವಾಗಲೂ ಮೈಕ್ರೋಫೈಬರ್ ಬಟ್ಟೆಯನ್ನೇ ಬಳಸಿ, ಇಲ್ಲದಿದ್ದರೆ ವೈಸರ್ ಮೇಲೆ ಸ್ಕ್ರಾಚ್ ಮಾರ್ಕ್‌ ಬೀಳಬಹುದು. ನಿಮ್ಮ ಹೆಲ್ಮೆಟ್‌ ತುಂಬಾ ಹಳೆಯದಾಗಿದ್ದು ಅದರ ಮೇಲೆ ಗೆರೆಗಳು ಬಿದ್ದಿದ್ದರೆ ಮನೆಮದ್ದುಗಳು ಸಹ ಕೆಲಸ ಮಾಡುವುದಿಲ್ಲ. ಹಾಗಾಗಿ ಅಂಥಹ ಸಂದರ್ಭದಲ್ಲಿ ಹೊಸ ಹೆಲ್ಮೆಟ್‌ ಖರೀದಿಸುವುದೇ ಸೂಕ್ತ.

Advertisement

(ಬರಹ: ರಂಜಿತಾ ಆರ್.ಕೆ.)

English Summary

Helmet Visor Clean: anti fog hacks to keep helmet visor clean easy tips and tricks for monsoon.