Sa Re Ga Ma Pa: ಬೆಂಗಳೂರಿನಲ್ಲಿ 'ಸರಿಗಮಪ' ಆಡಿಷನ್; ಸಂಗೀತ ಪ್ರತಿಭೆಗಳಿಗೆ ಸುವರ್ಣಾವಕಾಶ, ಇಲ್ಲಿದೆ ವಿವರ


Sa Re Ga Ma Pa: Audition: ಜೀ ಟಿವಿಯ ಜನಪ್ರಿಯ ಸಂಗೀತ ಕಾರ್ಯಕ್ರಮ 'ಸರಿಗಮಪ' ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಸಂಗೀತಕ್ಕೆ ಯಾವುದೇ ಭಾಷೆಯ ಗಡಿಗಳಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಪ್ರೋಮೋದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಸೀಸನ್‌ನಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸೇರಿ ಸಂಗೀತದ ಹಬ್ಬವನ್ನೇ ಸೃಷ್ಟಿಸಲಿದ್ದಾರೆ. ಜೊತೆಗೆ ಈ ಬಾರಿ ಬೆಂಗಳೂರಿನಲ್ಲಿ ಕೂಡ ಆಡಿಷನ್ ನಡೆಯಲಿದ್ದು, ಸಂಗೀತ ಪ್ರಿಯರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ.

Advertisement

ಈಗಾಗಲೇ ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಜೈಪುರ ಮತ್ತು ಮುಂಬೈನಲ್ಲಿ ನಡೆದ ಆಡಿಷನ್‌ಗಳಿಗೆ ಸಾವಿರಾರು ಸಿಂಗರ್ಸ್ ಭಾಗವಹಿಸಿದ್ದಾರೆ. ಈಗ ಈ ಹುಡುಕಾಟ ಮುಂದಿನ ಹಂತಕ್ಕೆ ತಲುಪಿದ್ದು, ಬೆಂಗಳೂರು, ನಾಗ್ಪುರ ಮತ್ತು ಇಂದೋರ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ. ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.

Advertisement

ಆಡಿಷನ್ ನಡೆಯುವ ಸ್ಥಳ, ದಿನಾಂಕಗಳ ವಿವರ

* ಬೆಂಗಳೂರು (ಜುಲೈ 19): ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜು, ಪಿ. ಕಳಿಂಗ ರಾವ್ ರಸ್ತೆ, ಸಂಪಂಗಿರಾಮನಗರ (ಟೌನ್ ಹಾಲ್ ಬಳಿ), ಬೆಂಗಳೂರು - 560027.

* ನಾಗ್ಪುರ (ಜುಲೈ 18): ವಿಬ್ಗೈರ್ ವರ್ಲ್ಡ್ ಸ್ಕೂಲ್, 103, ಎನ್ ಅಂಬಾಜರಿ ರಸ್ತೆ, ನ್ಯೂ ರಾಮ್‌ದಸ್‌ಪೇಠ್, ನಾಗ್ಪುರ, ಮಹಾರಾಷ್ಟ್ರ - 440010.

* ಇಂದೋರ್ (ಜುಲೈ 19): ಆದರ್ಶ ಶಿಶು ವಿಹಾರ್ ಹೈಯರ್ ಸೆಕೆಂಡರಿ ಸ್ಕೂಲ್, 1398/1, ಬಿಚೋಲಿ ರಸ್ತೆ, ಬಂಗಾಳಿ ಸ್ಕ್ವೇರ್ ಹತ್ತಿರ, ಇಂದೋರ್ - 452016.

Advertisement

ಆಸಕ್ತರು 9152915218 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಬಹುದು. ಬಳಿಕ ನಿಮಗೆ SMS ಮೂಲಕ ಆಡಿಷನ್ ಲಿಂಕ್ ಸಿಗುತ್ತದೆ. ಅಥವಾ 8655780787 ಈ ಸಂಖ್ಯೆಗೆ ವಾಟ್ಸಾಪ್ (WhatsApp) ಮೂಲಕ ನಿಮ್ಮ ವಿವರಗಳು ಹಾಗೂ ಎರಡು ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳನ್ನು ಕಳುಹಿಸಿ ಆಡಿಷನ್ ನೀಡಬಹುದು. ಇದರ ಜೊತೆಗೆ ನೀವು ನೇರವಾಗಿ saregamapaauditions.zee5.com ವೆಬ್‌ಸೈಟ್‌ಗೂ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

English Summary

Zee TV's Sa Re Ga Ma Pa returns with a new season. Check Bengaluru audition date, venue, registration process, missed call number, WhatsApp details and online application link.