ಸಿನಿಮಾದಂತೆ ಅಂತ್ಯವಾಗಲಿದೆಯೇ ಅಮೃತಧಾರೆ ಧಾರಾವಾಹಿ; ಈ ಎಪಿಸೋಡ್‌ ನೋಡಿ ವೀಕ್ಷಕರಿಗೆ ಶಾಕ್


Amruthadhare Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು ಎದುರಾಗಿದೆ. ಆದರೆ ಈ ಹೊಸ ತಿರುವಿಗೆ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಂದದ ಧಾರಾವಾಹಿಯಲ್ಲಿ ಈ ರೀತಿಯ ಟ್ವಿಸ್ಟ್‌ವೊಂದು ಬೇಡವಾಗಿತ್ತು ಎನ್ನುವುದು ಪ್ರೇಕ್ಷಕರ ಮಾತು. ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದಾಗಿ ತೋರಿಸಲಾಗಿದೆ. ಇದು ಪ್ರೇಕ್ಷರಿಗೆ ಶಾಕ್ ಮೂಡಿಸಿದೆ. ಗೌತಮ್ ಹಾಗೂ ಭೂಮಿಕಾ ಜೀವನದಲ್ಲಿ ಎಲ್ಲವೂ ಸರಿ ಹೋಯಿತು, ಮಿಂಚು - ಆಕಾಶ್ ಎಲ್ಲರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಸುಖಿ ಕುಟುಂಬವನ್ನು ನೋಡಿ ವೀಕ್ಷಕರು ಸಹ ಖುಷಿಯಾಗಿದ್ದರು. ಆದರೆ ಭೂಮಿಕಾಗೆ ಕ್ಯಾನ್ಸರ್ ಬರುವಂತೆ ತೋರಿಸಿರುವುದು ಮತ್ತೊಂದು ತಿರುವು ಎದುರಾಗಿದೆ. ಮತ್ತೊಂದು ಕಡೆ ಗೌತಮ್ ಆಸ್ತಿ ಮತ್ತೆ ಕೈ ತಪ್ಪುವ ಸಾಧ್ಯತೆ ಎನ್ನುವಂತೆಯೂ ತೋರಿಸಲಾಗಿದೆ.

Advertisement

ಮಕ್ಕಳು, ಗೌತಮ್, ಮನೆಯವರು ಎಲ್ಲರ ಕಣ್ಣಲ್ಲೂ ಆ ನೋವನ್ನು ನೋಡುವ ಧೈರ್ಯ ನನ್ನಲ್ಲಿ ಇಲ್ಲ. ಈ ವಿಷಯವನ್ನು ನಾನೊಬ್ಬಳೇ ಹ್ಯಾಂಡಲ್ ಮಾಡಬೇಕು ಎಷ್ಟು ದಿನವಾಗುತ್ತೋ ಅಷ್ಟು ದಿನ ಅಂತ ಭೂಮಿಕಾ ಹೇಳಿಕೊಂಡಿದ್ದಾಳೆ. ಗೌತಮ್‌ ಯಾಕಿಷ್ಟು ಯೋಚನೆ ಮಾಡುತ್ತಿದ್ದೀರಾ ಅಂತ ಕೇಳಿದ್ದಕ್ಕೆ ಭೂಮಿಕಾ ಜೀವನ ತುಂಬಾನೇ ಅನಿರೀಕ್ಷಿತ ನಾವು ಇರುವಷ್ಟು ದಿನ ಸಂತೋಷವಾಗಿ ಇರಬೇಕಲ್ವಾ ಅಂತ ಭೂಮಿಕಾ ಹೇಳಿದ್ದಾಳೆ. ವೇದಾಂತ ಮಾತಾಡ್ತಿದ್ದೀರಾಲ್ಲ ಯಾಕೋ ನನಗೆ ನೀವು ಮಾತನಾಡುತ್ತಿರುವುದೇ ಇಷ್ಟವಾಗಿಲ್ಲ ಅಂತ ಹೇಳಿದ್ದಾನೆ.

Advertisement

Amruthadhare Serial: ಇಬ್ಬರಿಗೂ ಗೊತ್ತಾಯ್ತು ವಿಷಯ !

ಇನ್ನು ಭೂಮಿಕಾಗೆ ಸ್ತನ ಕ್ಯಾನ್ಸರ್ ಇದೆ ಎನ್ನುವ ವಿಚಾರವು ಭೂಮಿಕಾ ಹಾಗೂ ಗೌತಮ್ ಇಬ್ಬರಿಗೂ ಗೊತ್ತಾಗಿದೆ. ಮೊದಲು ಭೂಮಿಕಾ ಬಳಿ ವೈದ್ಯರು ಹಿಂಜರಿಕೆಯಿಂದಲೇ ಮಾತನಾಡಿದ್ದರು. ಕೊನೆಗೂ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ಡಾಕ್ಟರ್ ಹೇಳಿದ್ದರು. ಇದೀಗ ಫೈಲ್ ತೆಗೆದುಕೊಂಡು ಆಸ್ಪತ್ರೆಗೆ ಬಂದಿರುವ ಗೌತಮ್ ಏನಿದು ಡಾಕ್ಟರ್ ಈ ವಿಷಯವನ್ನ ನನ್ನ ಬಳಿ ಯಾಕೆ ಹೇಳಿಲ್ಲ ಅಂತ ಪ್ರಶ್ನೆ ಮಾಡಿದ್ದಾನೆ. ಈ ವಿಷಯವನ್ನು ನಿಮ್ಮ ಪತ್ನಿ ನಿಮ್ಮ ಬಳಿ ಹೇಳಬಹುದು ಅಂತ ಅಂದುಕೊಂಡಿದ್ದಿವಿ ಅಂತ ವೈದ್ಯರು ಹೇಳಿದ್ದಾರೆ.

Advertisement

Amruthadhare Serial: ನೆಟ್ಟಿಗರು ಹೇಳಿದ್ದೇನು ?

ಈ ತರ ಕಥೆ ಬರಯಬೇಡಿ ಹ್ಯಾಪಿ ಎಂಡಿಂಗ್ ಕೊಡಿ ಎಂದು ನೆಟ್ಟಿಗರು ಹೇಳಿದ್ದಾರೆ. ಅಶ್ವಿನಿ ಪಿ ಎನ್ನುವವರು, ನಮ್ಮ ಮನೆಯ ಹತ್ತಿರ ಒಬ್ಬ ಅಜ್ಜಿಗೆ ಬ್ರೆಸ್ಟ್ ಕ್ಯಾನ್ಸರ್ ಆಗಿದೆ. 3 ತಿಂಗಳೊಳಗೆ ಅವರು ಸರಿಹೋದರು ಈಗ ಚೆನ್ನಾಗಿದ್ದಾರೆ ಅಂತ ಹೇಳಿದ್ರೆ. ದೀಪಾ ಸತೀಶ್ ಎನ್ನುವವರು, ಸ್ತನ ಕ್ಯಾನ್ಸರ್ ಬಂದಿರೋ ಎಷ್ಟೋ ಜನ ಸರ್ಜರಿ, ಟ್ರೀಟ್ಮೆಂಟ್ ತಗೊಂಡು ಆರಾಮ ಆಗಿರೋ ಜನ ಕಣ್ಮುಂದೆ ಇದ್ದಾರೆ. ಸುಮ್ನೆ ಜನರ ಮನಸಲ್ಲಿ ಏನೊ ತುಂಬಬೇಡಿ. ಅದರ ಬದಲು ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸಿ ಎಂದು ಹೇಳಿದ್ದಾರೆ.

Advertisement
Amruthadhare Serial: ಅಮೃತಧಾರೆಯಲ್ಲಿ ಡಬಲ್ ಟ್ವಿಸ್ಟ್‌:‌ ಜೈದೇವ್‌ಗೆ ಚಳ್ಳೆ ಹಣ್ಣು ತಿನ್ನಿಸ್ತಾಳಾ ಶಕುಂತಲಾದೇವಿ!

ಉಮೇಶ ಜೋಶಿ ಎನ್ನುವವರು ಅಮೃತಧಾರೆ ಚಿತ್ರದಲ್ಲಿ ಕೊನೆಗೆ ನಾಯಕಿ ತನ್ನನ್ನು ಪ್ರೀತಿಸುವವರಿಂದ ದೂರವಾಗುತ್ತಾಳೆ ಈ ಧಾರಾವಾಹಿಯಲ್ಲಿಯೂ ಸಹ ಆ ರೀತಿಯಲ್ಲಿಯೇ ಮುಕ್ತಾಯ ಆಗುವ ಸಾಧ್ಯತೆ ಇದೆ. ಗೊತ್ತಿಲ್ಲ ಕಥೆಯ ಸೂತ್ರದಾರ ನಿರ್ದೇಶಕರು ಕೊನೆಗೆ ಏನು ಮಾಡುತ್ತಾರೆ ಎಂದು ಆ ಚಿತ್ರದ ಹೆಸರು ಮತ್ತು ಧಾರಾವಾಹಿಯ ಹೆಸರು ಎರಡು ಬಾರಿ ಸೂಚಕ ಮತ್ತು ಸದ್ಯದ ಕಥೆಯನ್ನ ನೋಡಿದಾಗ ಎರಡು ಒಂದೇ ರೀತಿಯಲ್ಲಿ ಆಗುತ್ತೆ ಏನು ಎಂದು ಭಾಸವಾಯಿತು ಅಂತ ಅಭಿಪ್ರಾಯಪಟ್ಟಿದ್ದಾರೆ.

English Summary

Amruthadhare Serial: Movie-Style Twist Leaves Viewers Stunned; Is This the Beginning of the End