Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ವಿಲನ್‌ಗಳ ನಡುವೆಯೇ ಫೈಟ್ ಶುರುವಾಗಿದೆ. ಭೂಮಿಕಾಗೆ ಸ್ತನ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಆ ನೋವಿನಲ್ಲಿ ಭೂಮಿಕಾ ಹಾಗೂ ಗೌತಮ್ ಇದ್ದಾರೆ. ಆದರೆ ಶಕುಂತಲಾ ದೇವಿ ಹಾಗೂ ಜೈದೇವ್ ಇಬ್ಬರೂ ಸೇರಿ ಹೆಣೆಯುತ್ತಿರುವ ತಂತ್ರವನ್ನು ಶಕುನಿ ಮಾವ ಬಯಲಿಗೆಳೆಯುವ ಸಾಧ್ಯತೆ ಇದೆ. ಭೂಮಿಕಾ ಡೈರಿಯಲ್ಲಿ ಬರೆದಿದ್ದ ವಿಷಯಗಳನ್ನು ಈಚೆಗೆ ಬುಕ್ ಮಾದರಿಯಲ್ಲಿ ಪ್ರಕಟಿಸಲಾಗಿತ್ತು. ಈ ಬುಕ್ ಶಕುಂತಲಾದೇವಿ ಕೈಗೆ ಸಿಕ್ಕಿದ್ದು, ಪುಸ್ತಕದಲ್ಲಿ ತನ್ನ ಹಾಗೂ ಮಗನ ಬಗ್ಗೆ ಕೆಟ್ಟದಾಗಿ ಬರೆಯಲಾಗಿದೆ ಎಂದು ಎಸೆದಿದ್ದಾಳೆ. ಈ ಪುಸ್ತಕವನ್ನು ಎಸೆದಿರುವುದು ಶಕುನಿ ಮಾವನ ಕಣ್ಣಿಗೆ ಬಿದ್ದಿದೆ. ಶಕುನಿ ಮಾವ ಎಂಟ್ರಿ ಕೊಟ್ಟಿದ್ದು, ಈಗ ಇರುವ ಯಾರ ಪರ ಎನ್ನುವ ಸತ್ಯ ಬಯಲಾಗಲಿದೆ.
ಅಮೃತಧಾರೆ ಎನ್ನುವ ಡೈರಿ ಮಾದರಿಯ ಪುಸ್ತಕದಲ್ಲಿ ತನ್ನ ಹಾಗೂ ತನ್ನ ಮಗನ ಬಗ್ಗೆ ಕೆಟ್ಟದಾಗಿ ಬರೆಯಲಾಗಿದೆ. ಇಷ್ಟೊಂದು ಕೆಟ್ಟದಾಗಿ ಬರೆದಿದ್ದಾಳ ನಮ್ಮ ಬಗ್ಗೆ ಅಂತ ಪುಸ್ತಕವನ್ನು ಶಕುಂತಲಾ ಎಸೆದಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ಎಂಟ್ರಿ ಕೊಟ್ಟಿರುವ ಶಕುನಿ ಮಾವ, ಸಿಸ್ಟರ್ ಏನಾಯ್ತು.. ಪುಸ್ತಕ ಯಾಕೆ ಹಿಂಗೆ ಬಿಸಾಕ್ದೆ ಅಂತ ಕೇಳಿದ್ದಾನೆ. ಬಿಸಾಕಿಲ್ಲ ಅಣ್ಣ ಕೈ ಜಾರಿ ಬಿತ್ತು ಅಂತ ಸಮಜಾಯಿಷಿ ಕೊಟ್ಟಿದ್ದಾಳೆ. ಈ ಪುಸ್ತಕ ಕೈ ಜಾರಿ ಬಿದ್ದಿದ್ದಾ, ಒಳಗಿನ ಕೋಪ ಹೊರಗೆ ಬಂದು ಬಿಸಾಕಿದ್ದಾ. ಸಿಸ್ಟರ್ ನೀನು ಕೋಪ ಮಾಡಿಕೊಳ್ಳುವಂತಹದ್ದು ಏನಿದೆ ಈ ಪುಸ್ತಕದಲ್ಲಿ ? ನೀನು ನಿಜವಾಗಿಯೂ ಬದಲಾಗಿದ್ದೀಯಾ ಹೇಳು ಅಂತ ಶಕುನಿ ಮಾವ ಕೇಳಿದ್ದಾನೆ.
ಭೂಮಿಕಾ ಬರೆದಿರುವ ಗೌತಮ್ ಪ್ರಕಟಿಸಿರುವ ಪುಸ್ತಕವನ್ನು ಜೈದೇವ್ ಬಳಿಯೂ ಶಕುಂತಲಾ ತೋರಿಸಿದ್ದಾಳೆ. ಪುಸ್ತಕವನ್ನು ನೋಡುತ್ತಿದ್ದಂತೆಯೇ ಜೈದೇವ್ ಕೆಂಡಾಮಂಡಲನಾಗಿದ್ದಾನೆ. ಅದರಲ್ಲಿ ತನ್ನ ಬಗ್ಗೆ ಹಾಗೂ ಶಕುಂತಲಾ ದೇವಿಯ ಬಗ್ಗೆ ಬರೆದಿರುವುದನ್ನು ನೋಡಿ, "What the Bloody Hell" ಅಂತ ಕಿರುಚಾಡಿದ್ದಾನೆ. ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ವಿಲನ್ ಯಾರು, ಯಾರು ಯಾರ ಪರವಾಗಿದ್ದಾರೆ ಎನ್ನುವುದೇ ಅನುಮಾನವಾಗಿದೆ. ಬದಲಾಗದೆ ಉಳಿದಿರುವ ಏಕೈಕ ವಿಲನ್ ಕೇಡಿ ಜೈದೇವ್ ಮಾತ್ರ. ಮನೆ - ಆಸ್ತಿ ಎಲ್ಲವನ್ನೂ ಕಳೆದುಕೊಂಡ ಮೇಲಾದರೂ ಕೇಡಿ ಜೈದೇವ್ ಬದಲಾಗುತ್ತೇನೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಬೇಬಿಯನ್ನು ಮುಗಿಸುವಷ್ಟು ಕ್ರೂರ ನಿರ್ಧಾರವನ್ನು ಜೈದೇವ್ ಮಾಡಿದ್ದ. ಇದೀಗ ಶಕುಂತಲಾ ದೇವಿ ಮೊದಲು ಬದಲಾಗಿರುವಂತೆ ತೋರಿಸಿದರೂ ಸಹ ಈಗ ಮತ್ತೆ ಕೈಡಿ ಜೈದೇವ್ ಜೊತೆ ಕೈಜೋಡಿಸಿದ್ದಾಳೆ. ಇದು ಜೈದೇವ್‌ಗೆ ಬುದ್ಧಿ ಕಲಿಸಲು ಮಾಡುತ್ತಿರುವ ತಂತ್ರವಾ ಎನ್ನುವ ಅನುಮಾನವೂ ಸಹ ವೀಕ್ಷಕರಲ್ಲಿ ಇತ್ತು. ಆದರೆ ಇದೀಗ ಪುಸ್ತಕವನ್ನು ಎಸೆದಿರುವುದು ಆ ಪುಸ್ತಕವನ್ನು ಜೈದೇವ್‌ಗೂ ತೋರಿಸಿರುವುದು ನೋಡಿದರೆ ಆಸ್ತಿಯನ್ನು ಇಬ್ಬರೂ ಸೇರಿ ಲಪಟಾಯಿಸುವ ಸಾಧ್ಯತೆಯೇ ಹೆಚ್ಚು ಎನ್ನುವಂತಿದೆ.
ಇದಕ್ಕೆ ಶಕುಂತಲಾ ನೋಡು ತಾಳ್ಮೆ ಇದ್ದರೆ ನಮ್ಮ ಗುರಿ ನಾವು ತಲುಪುವುದಕ್ಕೆ ಆಗುತ್ತೆ ಅಂತ ಹೇಳಿದ್ದಾಳೆ. ಇದಕ್ಕೆ ಕೇಡಿ ಜೈದೇವ್ ಸರಿ ಆಯ್ತು... ದಾಳ ಹಾಗೂ ಗಾಳ ಎರಡೂ ನಮ್ಮ ಕೈಯಲ್ಲೇ ಇದೆ ಅಂತ ಹೇಳಿದ್ದಾನೆ. ಇವರಿಬ್ಬರು ಯಾವ ಹೊಸ ರಣತಂತ್ರ ಹೆಣೆದಿದ್ದಾರೆ ಎನ್ನುವ ಕುತೂಹಲ ಇದೀಗ ವೀಕ್ಷಕರಲ್ಲಿ ಎದುರಾಗಿದೆ.Amruthadhaare Serial: ವಿಲನ್ ಯಾರು ಎನ್ನುವುದೇ ಅನುಮಾನ!