ಯಾವ ದಿನ ಯಾವ ಬಣ್ಣದ ಉಡುಗೆ ಧರಿಸಬೇಕು? ಜ್ಯೋತಿಷ್ಯ ಶಾಸ್ತ್ರದಲ್ಲಿ ಅಡಗಿದೆ ಬಣ್ಣಗಳ ಅದೃಷ್ಟದ ರಹಸ್ಯ


ಜೀವನದಲ್ಲಿ ಬಟ್ಟೆ ನಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಬಟ್ಟೆ ಕೇವಲ ಫ್ಯಾಷನ್ ಅಲ್ಲ, ಅದು ನಮ್ಮ ಜೀವನ ವಿಧಾನವನ್ನು ಪ್ರತಿನಿಧಿಸುತ್ತದೆ. ಸರಿಯಾದ ಬಟ್ಟೆಗಳನ್ನು ಧರಿಸುವ ಮೂಲಕ, ನಾವು ಇತರರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು.

Advertisement

ಧರಿಸುವ ಬಟ್ಟೆಗಳು ಆರಾಮದಾಯಕವಾಗಿದ್ದಾಗ, ಆತ್ಮವಿಶ್ವಾಸ ತಾನಾಗಿಯೇ ಹೆಚ್ಚಾಗುತ್ತದೆ. ಇದು ದೈನಂದಿನ ಚಟುವಟಿಕೆಗಳಲ್ಲಿ ನಿಮ್ಮನ್ನು ಸಕ್ರಿಯರನ್ನಾಗಿ ಮಾಡುತ್ತದೆ. ಬಟ್ಟೆಗಳ ಆಯ್ಕೆಯು ಹವಾಮಾನವನ್ನು ಅವಲಂಬಿಸಿರುತ್ತದೆ. ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳನ್ನು ಧರಿಸುವುದರಿಂದ ದೇಹವು ತಂಪಾಗಿರುತ್ತದೆ. ಮಳೆಗಾಲ ಅಥವಾ ಚಳಿಗಾಲದಲ್ಲಿ ಸಿಂಥೆಟಿಕ್ ಅಥವಾ ಉಣ್ಣೆಯ ಬಟ್ಟೆಗಳು ಸೂಕ್ತವಾಗಿವೆ.

Advertisement

ಬಟ್ಟೆ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಬಂಧ:

ಬಟ್ಟೆ ಮತ್ತು ಆಧ್ಯಾತ್ಮಿಕತೆಯ ನಡುವೆ ಬಹಳ ಆಳವಾದ ಸಂಬಂಧವಿದೆ. ನಾವು ಧರಿಸುವ ಬಟ್ಟೆಗಳು ಮನಸ್ಸು, ಆಲೋಚನೆಗಳು ಮತ್ತು ದೇಹದಲ್ಲಿನ ಶಕ್ತಿಯ ಹರಿವಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಆಧ್ಯಾತ್ಮಿಕವಾಗಿ, ಪ್ರತಿಯೊಂದು ಬಣ್ಣವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ವಾರದ ದಿನವೂ ಒಂದೊಂದು ಗ್ರಹದ ಜೊತೆ ಸಂಬಂಧ ಹೊಂದಿದೆ. ಹೀಗಾಗಿ ದಿನಕ್ಕೆ ಅನುಗುಣವಾಗಿ ನಿರ್ದಿಷ್ಟ ಬಣ್ಣಗಳ ಬಟ್ಟೆಗಳನ್ನು ಧರಿಸುವುದರಿಂದ ಮಾನಸಿಕ ಶಾಂತಿ, ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ.

ಸೋಮವಾರ: ಸೋಮವಾರವು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಚಂದ್ರನು ಶಾಂತಿ, ಶುದ್ಧತೆ ಮತ್ತು ಭಾವನೆಗಳನ್ನು ಸಂಕೇತಿಸುತ್ತಾನೆ. ಈ ದಿನ ಬಿಳಿ, ಕೆನೆ ಅಥವಾ ಬೆಳ್ಳಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸು ಶಾಂತ ಮತ್ತು ಸ್ಥಿರವಾಗಿರುತ್ತದೆ. ಇದು ಹೊಸ ವಾರವನ್ನು ಶಾಂತಿಯುತವಾಗಿ ಪ್ರಾರಂಭಿಸಲು ನಿಮಗೆ ಸಹಾಯ ಮಾಡುತ್ತದೆ.

Advertisement
ಅತ್ತೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಈ ರಾಶಿಯ ಹೆಣ್ಣುಮಕ್ಕಳು

ಮಂಗಳವಾರ: ಹೆಸರೇ ಸೂಚಿಸುವಂತೆ ಇದು ಮಂಗಳ ಗ್ರಹದ ಅಧಿಪತ್ಯದ ದಿನ. ಮಂಗಳ ಗ್ರಹವು ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಸಂಕೇತಿಸುತ್ತದೆ. ಈ ದಿನ ಕೆಂಪು ಅಥವಾ ಮರೂನ್ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಶಕ್ತಿ ಮತ್ತು ಧೈರ್ಯ ಹೆಚ್ಚಾಗುತ್ತದೆ. ಇದು ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಹಾಯ ಮಾಡುತ್ತದೆ.

ಬುಧವಾರ: ಬುಧವಾರ ಬುಧ ಗ್ರಹದ ಅಧಿಪತ್ಯದ ದಿನ. ಬುಧವು ಸಂವಹನ, ಬುದ್ಧಿವಂತಿಕೆ, ಮಾತು ಮತ್ತು ವ್ಯವಹಾರವನ್ನು ಸಂಕೇತಿಸುತ್ತದೆ. ಈ ದಿನ ಹಸಿರು ಬಟ್ಟೆಗಳನ್ನು ಧರಿಸುವ ಮೂಲಕ ಮಾನಸಿಕ ಸ್ಪಷ್ಟತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಪ್ರಮುಖ ಮೀಟಿಂಗ್‌ ಅಥವಾ ಪರೀಕ್ಷೆಗಳಿಗೆ ಹೋಗುವವರು ಈ ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು.

Advertisement

ಗುರುವಾರ: ಗುರವಾರ ಗುರುಗ್ರಹಕ್ಕೆ ಸಂಬಂಧಿಸಿದ ದಿನವಾಗಿದೆ. ಗುರುವು ಜ್ಞಾನ, ಸಂಪತ್ತು ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ. ಈ ದಿನ ಹಳದಿ, ಚಿನ್ನದ ಬಣ್ಣ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಅದೃಷ್ಟ ಕೈ ಹಿಡಿಯುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಮಾನಸಿಕ ಶಾಂತಿ ಹೆಚ್ಚಾಗುತ್ತದೆ.

ಶಿವಯೋಗದಿಂದ ಮೂರು ರಾಶಿಯವರ ಮೇಲಿರಲಿದೆ ಈಶ್ವರನ ಸಂಪೂರ್ಣ ಕೃಪೆ: ಸರ್ವ ಆಸೆಗಳೂ ಈಡೇರುವ ಕಾಲ

ಶುಕ್ರವಾರ: ಇದು ಶುಕ್ರಾಚಾರ್ಯರ ದಿನ. ಶುಕ್ರನು ಪ್ರೀತಿ, ಸೌಂದರ್ಯ ಮತ್ತು ಕನಸುಗಳ ಸಂಕೇತ. ಈ ದಿನ ಬಿಳಿ, ಗುಲಾಬಿ ಅಥವಾ ತಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಇತರರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಇದು ಸಂಬಂಧಗಳನ್ನು ಮತ್ತಷ್ಟು ಸುಧಾರಿಸುತ್ತದೆ.

Advertisement

ಶನಿವಾರ: ಹೆಸರಲ್ಲೇ ಇರುವಂತೆ ಇದು ಶನಿ ದೇವರ ದಿನ. ಶನಿಯ ಶಿಸ್ತು ಕರ್ಮ ಸಂಕಷ್ಟಗಳನ್ನು ಸಂಕೇತಿಸುತ್ತದೆ. ಈ ದಿನ ಕಪ್ಪು, ಗಾಢ ನೀಲಿ ಅಥವಾ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಧೈರ್ಯ ಮತ್ತು ಸ್ಥಿರತೆ ಸಿಗುತ್ತದೆ.

ಈ ವಿಧಾನಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಬಣ್ಣಗಳು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಮನೋವಿಜ್ಞಾನ ಸೂಚಿಸುತ್ತದೆ. ಪ್ರಕಾಶಮಾನವಾದ ಬಣ್ಣಗಳು ಚೈತನ್ಯದಾಯಕ ಎಂದು ಹೇಳಲಾಗುತ್ತದೆ. ಆದರೆ ತಿಳಿ ಬಣ್ಣಗಳು ಶಾಂತಗೊಳಿಸುತ್ತವೆ ಎನ್ನಲಾಗುತ್ತದೆ. ಆದ್ದರಿಂದ, ಇದು ಸಂಪೂರ್ಣವಾಗಿ ವೈಯಕ್ತಿಕ ನಂಬಿಕೆಯನ್ನು ಆಧರಿಸಿದೆ.

(ಬರಹ: ರಂಜಿತಾ ಆರ್.ಕೆ.)

English Summary

lucky colour: which colour should be worn on each day as per astrology lucky colour guide.