ಅತ್ತೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಈ ರಾಶಿಯ ಹೆಣ್ಣುಮಕ್ಕಳು


ಯಾರೇ ಆಗಲಿ ಅವರು ಹುಟ್ಟಿದ ದಿನಾಂಕ, ಸಮಯಕ್ಕೆ ಅನುಗುಣವಾಗಿ ಅವರ ಜನ್ಮ ನಕ್ಷತ್ರ, ರಾಶಿ ನಿರ್ಧಾರವಾಗುತ್ತದೆ. ನಕ್ಷತ್ರ, ರಾಶಿಗೆ ಅನುಸಾರವಾಗಿ ಅವವರ ಗುಣ, ನಡತೆಗಳು, ಜಾತಕ ಫಲಗಳು ಕೂಡಾ ಬದಲಾಗುತ್ತವೆ. ಪ್ರತಿಯೊಬ್ಬರೂ ತಮ್ಮ ರಾಶಿಗೆ ಅನುಸಾರವಾಗಿಯೇ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ.

Advertisement

ಮದುವೆ ಮಾಡಿಸುವಾಗ ಮೊದಲು ಗಂಡು ಮತ್ತು ಹೆಣ್ಣಿನ ಜಾತಕವನ್ನು ಕೂಡಿಸಿ ನೋಡಲಾಗುತ್ತದೆ. ಇಬ್ಬರ ಜಾತಕ ಹೊಂದಾಣಿಕೆಯಾದರೆ ಅವರ ಜೀವನ ಯಾವ ಅಡೆತಡೆಯೂ ಇಲ್ಲದೆ ಮುಂದುವರೆಯುತ್ತದೆ ಎನ್ನುವುದು ಜ್ಯೋತಿಷ್ಯ ನಂಬಿಕೆ. ಹಾಗೆಯೇ ಕೆಲವೊಂದು ರಾಶಿಯವರು ತಮ್ಮ ಅತ್ತೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆಯಂತೆ.

Advertisement

ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಮಾತು ಬಹಳ ಮುಖ್ಯವಾಗಿರುತ್ತದೆ. ಅದು ಜೀವನ ಸಂಗಾತಿಗಳ ನಡುವೆಯಾಗಿರಲಿ ಅಥವಾ ಅತ್ತೆ, ಮಾವ, ಗಂಡನ ಮನೆಯವರ ಜೊತೆಯಾಗಿರಲಿ. ಮಾತುಕತೆ ಸರಾಗವಾಗಿ ನಡೆಯುತ್ತಿದ್ದರೆ ಮನೆ ಮನಗಳಲ್ಲಿ ಮನಸ್ತಾಪ ಮೂಡುವುದು ಕಡಿಮೆಯಾಗುತ್ತದೆ.

ಮೊದಲೇ ಹೇಳಿದ ಹಾಗೆ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶಿಯಾಗಿ ಪರಿಗಣಿಸಲಾಗುವ ಜ್ಯೋತಿಷ್ಯವು ಈ ಸಂಬಂಧಗಳ ಚಲನಶೀಲತೆಯ ಬಗ್ಗೆ ವಿಶಿಷ್ಟ ಒಳನೋಟಗಳನ್ನು ನೀಡುತ್ತದೆ. ಇದರ ಪ್ರಕಾರ ಕೆಲವು ರಾಶಿಯ ಮಹಿಳೆಯರು ಮತ್ತು ಅವರ ಅತ್ತೆಯಂದಿರ ನಡುವೆ ಯಾವತ್ತೂ ಜಗಳ, ಮನಸ್ತಾಪಗಳು ನಡೆಯುವುದೇ ಇಲ್ಲವಂತೆ. ಇವರು ಅತ್ತೆಯ ಜೊತೆ ಅತಿಯಾಗಿ ಹೊಂದಿಕೊಳ್ಳುವ ಗುಣ ಈ ರಾಶಿಯವರದ್ದಾಗಿರುತ್ತದೆಯಂತೆ.

Advertisement
ಶಿವಯೋಗದಿಂದ ಮೂರು ರಾಶಿಯವರ ಮೇಲಿರಲಿದೆ ಈಶ್ವರನ ಸಂಪೂರ್ಣ ಕೃಪೆ: ಸರ್ವ ಆಸೆಗಳೂ ಈಡೇರುವ ಕಾಲ

ಮೇಷ ರಾಶಿ (Aries):

ಮೇಷ ರಾಶಿಯಲ್ಲಿ ಜನಿಸಿದ ಮಹಿಳೆಯರನ್ನು ಕಠಿಣ ಪರಿಶ್ರಮಿಗಳು ಮತ್ತು ವಿಶಾಲ ಮನಸ್ಸಿನವರು ಎಂದು ಹೇಳಲಾಗುತ್ತದೆ. ಈ ರಾಶಿಯವರು ಮಾತಿನ ಮಲ್ಲಿಯರೇ ಆಗಿರುತ್ತಾರೆ. ವಿವಿಧ ವಿಷಯಗಳ ಕುರಿತು ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಬಹಳ ನೈಸರ್ಗಿಕವಾಗಿ ಬಂದಿರುವ ಪ್ರತಿಭೆ. ಇವರು ಅತ್ತೆಯರೊಂದಿಗೆ ಬಲವಾದ, ಸ್ನೇಹಪರ ಬಂಧವನ್ನು ಹೊಂದಿರುತ್ತಾರೆ. ಮೇಷ ರಾಶಿಯ ಮಹಿಳೆಯರು ತನ್ನ ಅತ್ತೆಯನ್ನು ಅತ್ಯುತ್ತಮ ಸಲಹೆಗಾರ್ತಿ ಎಂದೇ ನೋಡುತ್ತಾರೆ. ಏನೇ ಕೆಲಸ ಮಾಡುವಾಗಲೂ ಅತ್ತೆಯ ಸಲಹೆ ಪಡೆಯುವುದನ್ನು ಮರೆಯುವುದಿಲ್ಲವಂತೆ. ಅತ್ತೆ ಹಾಕಿ ಕೊಟ್ಟ ಹಾದಿಯಲ್ಲಿಯೇ ನಡೆಯುತ್ತಾರೆಯಂತೆ.

Advertisement

ಮಿಥುನ ರಾಶಿ (Gemini):

ಮಿಥುನ ರಾಶಿಯ ಮಹಿಳೆಯರು ಕೂಡಾ ತಮ್ಮ ಅತ್ತೆಯಂದಿರೊಂದಿಗೆ ಬಲವಾದ ಸಂಬಂಧವನ್ನು ಹೊಂದಿರುತ್ತಾರೆ. ಈ ರಾಶಿಯ ಸೊಸೆ ಮತ್ತು ಅತ್ತೆ ನಡುವೆ ಪರಸ್ಪರ ಗೌರವ ಪ್ರೀತಿ ಇರುತ್ತದೆ. ಜಗಳಗಳಿಗೆ ಕಾರಣವಾಗುವ ಸಾಂದರ್ಭಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಒಟ್ಟಾರೆ ಬಂಧವು ಸಾಮರಸ್ಯದಿಂದ ಇರುತ್ತದೆ. ಅತ್ತೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಗುಣ ಇವರದ್ದಾಗಿರುತ್ತದೆ.

ಯಾವ ಜನ್ಮರಾಶಿಯವರು ಹೆಚ್ಚು ರಹಸ್ಯ ಕಾಪಾಡಿಕೊಳ್ಳುತ್ತಾರೆ? ಯಾರು ಮನಸ್ಸು ಬಿಚ್ಚಿ ಮಾತನಾಡುತ್ತಾರೆ?

ಕುಂಭ ರಾಶಿ (Aquarius):

ಕುಂಭ ರಾಶಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ಅತ್ತೆಯಂದಿರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ಯಾವ ಮನೆಗೆ ಸೊಸೆಯಾಗಿ ಕಾಲಿಡುತ್ತಾರೆಯೋ ಆ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಈ ರಾಶಿಯವರಿಗೆ ಗಂಡನ ಮನೆಯಲ್ಲಿ ವಿಶೇಷ ಸ್ಥಾನಮಾನ ಇರುತ್ತದೆ. ಇವರು ಸಂಬಂಧವನ್ನು ಕಾಪಾಡಿಕೊಂಡು ನಡೆಯುತ್ತಾರೆ.

Advertisement

ಧನು ರಾಶಿ (Sagitarius):

ಧನು ರಾಶಿಯ ಮಹಿಳೆಯರು ಕಾಲಿಟ್ಟ ತಕ್ಷಣ ಕುಟುಂಬದ ಸಂತೋಷ ಹೆಚ್ಚಾಗುತ್ತದೆ. ಇವರು ಅತ್ತೆ ಮನೆಗೆ ಅದೃಷ್ಟ ಲಕ್ಷ್ಮೀಯಂತಿರುತ್ತಾರೆ. ಅತ್ತೆ ಮನೆಯಲ್ಲಿನ ಸಂಬಂಧಗಳನ್ನು ಬಹಳ ಜತನದಿಂದ ಕಾಪಾಡಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಇವರ ಅತ್ತೆ ಮನೆಯಲ್ಲಿ ಎಲ್ಲವೂ ಇವರು ಹೇಳಿದ ರೀತಿಯೇ ನಡೆಯುತ್ತದೆ.

ಕರ್ಕಾಟಕ ರಾಶಿ (Cancer):

ಕರ್ಕಾಟಕ ರಾಶಿಯ ಮಹಿಳೆಯರು ತಮ್ಮ ಸಂಗಾತಿಯ ಕುಟುಂಬ ಸದಸ್ಯರೊಂದಿಗೆ ಭಾವನಾತ್ಮಕ ಸಂಬಂಧವನ್ನು ಸ್ಥಾಪಿಸುತ್ತಾರೆ. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ಗೌರವದಿಂದ ಜೀವನ ನಡೆಸುವಂತೆ ನೋಡಿಕೊಳ್ಳುತ್ತಾರೆ. ಅತ್ತೆ ಮನೆಯ ಪ್ರತಿಯೊಂದು ಜವಾಬ್ದಾರಿಯನ್ನು ಕೂಡಾ ಇವರು ಅತ್ಯಂತ ಪ್ರೀತಿಯಿಂದ ಹೊರುತ್ತಾರೆ. ಮನೆ ಮತ್ತು ಮನೆ ಮಂದಿಯ ಯೋಗಕ್ಷೇಮವೇ ಇವರ ಪ್ರಮುಖ ಆದ್ಯತೆಯಾಗಿರುತ್ತದೆ.

Advertisement

ಮೀನ ರಾಶಿ (Pisces):

ಮೀನ ರಾಶಿಯ ಮಹಿಳೆಯರು ತಮ್ಮ ಸೂಕ್ಷ್ಮತೆಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಸಂಗಾತಿಯ ಕುಟುಂಬದೊಂದಿಗೆ ಭಾವನಾತ್ಮಕ ಬಂಧಗಳನ್ನು ರೂಪಿಸಿಕೊಳ್ಳುತ್ತಾರೆ. ಅವರು ವಿಚಾರಗಳು ಮತ್ತು ಭಾವನೆಗಳನ್ನು ಚರ್ಚಿಸಲು ಸುರಕ್ಷಿತ ಸ್ಥಳವನ್ನು ಸೃಷ್ಟಿಸುತ್ತಾರೆ. ಅತ್ತೆ ಮನೆಯ ಎಲ್ಲರಿಗೂ ಇವರು ಪ್ರೀತಿಪಾತ್ರರಾಗಿರುತ್ತಾರೆ.

(ಬರಹ: ರಂಜಿತಾ ಆರ್.ಕೆ.)

English Summary

Zodiac Signs: These Zodiac Signs Form Strong Bond Between Women And Mothers in law. According to astrology thesy share very good connection with their mother-in-law.