ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಜನ್ಮರಾಶಿಯವರೂ ಜೀವನದಲ್ಲಿ ಬರುವ ಸಂಕಷ್ಟಗಳನ್ನು ತಮ್ಮದೇ ಆದ ಸ್ವಭಾವದಲ್ಲಿ ಎದುರಿಸುತ್ತಾರೆ. ಉದಾಹರಣೆಗೆ ಮೇಷ, ಸಿಂಹ, ವೃಶ್ಚಿಕ ರಾಶಿಯವರು ಧೈರ್ಯದಿಂದ ಹೋರಾಡಿದರೆ, ವೃಷಭ, ಕನ್ಯಾ, ಮಕರದವರು ತಾಳ್ಮೆಯಿಂದ ಸಮಸ್ಯೆ ಬಗೆಹರಿಸುವವರು. ಇದರ ಜೊತೆಗೆ ಕುಟುಂಬದ ವಾತಾವರಣ, ಶಿಕ್ಷಣ, ಜೀವನಾನುಭವ, ವ್ಯಕ್ತಿತ್ವ ಮತ್ತು ಪರಿಸ್ಥಿತಿಗಳೂ ದೊಡ್ಡ ಪಾತ್ರ ವಹಿಸುತ್ತವೆ. ಹಾಗಾದರೆ ನಿಮ್ಮ ಪ್ರವೃತ್ತಿ ಹೇಗೆ? ಇಲ್ಲಿದೆ ಗಮನಿಸಿ.
ಮೇಷ (Aries)
ಸಂಕಷ್ಟ ಎದುರಾದರೆ, "ಸೋಲು ನನ್ನದಲ್ಲ" ಎಂಬ ಹೋರಾಟದ ಮನಸ್ಥಿತಿ ತಾಳುತ್ತಾರೆ. ಸಮಸ್ಯೆಯನ್ನು ನೇರವಾಗಿ ಎದುರಿಸುತ್ತಾರೆ. ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸ್ನೇಹಿತರು, ಹಿರಿಯರು, ಮಾರ್ಗದರ್ಶಕರ ನೆರವು ಪಡೆಯುತ್ತಾರೆ. ಹನುಮಂತ, ಸುಬ್ರಹ್ಮಣ್ಯಸ್ವಾಮಿ, ದುರ್ಗಾದೇವಿಯರ ಮೊರೆ ಹೋಗುತ್ತಾರೆ.
ಇವರು ತಾಳ್ಮೆಯಿಂದ ಯೋಚಿಸಿ ಮುಂದುವರಿಯುವವರು. ಸವಾಲು ಎದುರಿಸುವ ರೀತಿ ಆತುರಪಡದೆ, ಆರ್ಥಿಕ ಹಾಗೂ ಕುಟುಂಬದ ಭದ್ರತೆಯನ್ನು ಮೊದಲು ನೋಡುತ್ತಾರೆ. ಕುಟುಂಬದವರು, ಜೀವನ ಸಂಗಾತಿಯ ನೆರವು ಪಡೆಯುತ್ತಾರೆ. ಇವರು ಮೊರೆ ಹೋಗುವ ದೇವರು ಲಕ್ಷ್ಮೀದೇವಿ, ಶ್ರೀಕೃಷ್ಣ, ಶಿವ. ಇವರ ಮನೋಭಾವ ಸಂಕಷ್ಟಕ್ಕೆ ತಕ್ಕ ಪರಿಹಾರ ಹುಡುಕುವ ಚಿಂತನೆ. ಸವಾಲು ಎದುರಿಸುವ ರೀತಿಯೆಂದರೆ ಮಾಹಿತಿ ಸಂಗ್ರಹಿಸಿ, ಹಲವರ ಸಲಹೆ ಕೇಳುತ್ತಾರೆ. ಸ್ನೇಹಿತರು, ಶಿಕ್ಷಕರು, ಪರಿಣಿತರ ನೆರವು ಪಡೆಯುತ್ತಾರೆ. ವಿಷ್ಣು, ಗಣೇಶ, ಸರಸ್ವತಿ ಇವರು ಮೊರೆ ಹೋಗುವ ದೇವರು. ಸವಾಲುಗಳಲ್ಲಿ ಭಾವನಾತ್ಮಕವಾಗಿ ಕುಗ್ಗಿದರೂ ಮತ್ತೆ ಚೇತರಿಸಿಕೊಳ್ಳುತ್ತಾರೆ. ಕುಟುಂಬದ ಬೆಂಬಲದಿಂದ ಸಂಕಷ್ಟ ಎದುರಿಸುತ್ತ ಮುಂದೆ ಸಾಗುತ್ತಾರೆ. ತಾಯಿ, ಕುಟುಂಬದವರ ನೆರವು ಪಡೆಯುತ್ತಾರೆ. ಇವರು ನಂಬುವ ದೇವರು ಪಾರ್ವತಿ, ದುರ್ಗೆ, ಕೃಷ್ಣ. ಸವಾಲಿನ ಎದುರು "ನಾನು ಗೆಲ್ಲಲೇಬೇಕು" ಎಂಬುದು ಇವರ ಮನೋಭಾವ. ಸವಾಲು ಎದುರಿಸುವ ರೀತಿ, ಆತ್ಮವಿಶ್ವಾಸದಿಂದ ನಾಯಕತ್ವ ವಹಿಸುತ್ತಾರೆ. ಗೌರವಿಸುವ ಹಿರಿಯರು, ಪ್ರಭಾವಿ ವ್ಯಕ್ತಿಗಳಿಂದ ನೆರವು. ನಂಬುವ ದೇವರು ಸೂರ್ಯದೇವ, ನರಸಿಂಹ, ಶಿವ. ಇವರ ಮನೋಭಾವ ಎಂದರೆ ಸಮಸ್ಯೆಯನ್ನು ವಿಶ್ಲೇಷಿಸುವ ಪ್ರವೃತ್ತಿ. ಯೋಜನೆ ರೂಪಿಸಿ ಹಂತ ಹಂತವಾಗಿ ಕಷ್ಟಗಳನ್ನು ಪರಿಹರಿಸುತ್ತಾರೆ. ವೈದ್ಯರು, ತಜ್ಞರು, ಸಲಹೆಗಾರರ ಬೆಂಬಲ ಪಡೆಯುತ್ತಾರೆ. ಇವರು ನಂಬುವ ದೇವರು ಗಣೇಶ, ಹಯಗ್ರೀವ, ಸರಸ್ವತಿ. ಕಷ್ಟಗ ಎದುರು ಸಮತೋಲನ ಕಳೆದುಕೊಳ್ಳದಿರಲು ಪ್ರಯತ್ನ ಮಾಡುತ್ತಾರೆ. ಸವಾಲು ಎದುರಿಸುವ ರೀತಿಯಲ್ಲಿ ಎಲ್ಲರ ಅಭಿಪ್ರಾಯ ಕೇಳಿ ನಿರ್ಧಾರ ಮಾಡುತ್ತಾರೆ. ಸಂಗಾತಿ, ಸ್ನೇಹಿತರ ಬೆಂಬಲ ಇವರಿಗೆ ಮುಖ್ಯ. ಮಹಾಲಕ್ಷ್ಮಿ, ವೆಂಕಟೇಶ್ವರ ದೇವರನ್ನು ನಂಬಿ ಮುಂದುವರಿಯುತ್ತಾರೆ. ಇವರ ಮನೋಭಾವ ಎಂದರೆ ಹೊರಗೆ ಗಟ್ಟಿತನ, ಒಳಗೆ ತೀವ್ರ ಹೋರಾಟ. ಮೌನವಾಗಿ ಸಮಸ್ಯೆಯನ್ನು ಎದುರಿಸುತ್ತಾರೆ. ಬಹಳ ವಿಶ್ವಾಸದ ಕೆಲವೇ ಜನಗಳು ಹೇಳಿಕೊಂಡು ನೆರವು ಗಳಿಸುತ್ತಾರೆ. ಇವರ ಬೆಂಬಲದ ದೇವರು ಕಾಲಭೈರವ, ಶಿವ, ಸುಬ್ರಹ್ಮಣ್ಯ. ಸವಾಲಿನೆದುರು "ಇದೂ ಕಳೆಯುತ್ತದೆ" ಎಂಬ ಆಶಾವಾದ ಇವರದು. ಅನುಭವದಿಂದ ಪಾಠ ಕಲಿತು ಮುಂದೆ ಸಾಗುತ್ತಾರೆ. ಗುರುಗಳು, ಆಧ್ಯಾತ್ಮಿಕ ಮಾರ್ಗದರ್ಶಕರ ನೆರವು ಹೊಂದುತ್ತಾರೆ. ಇವರ ಬಳಸಿನ ದೇವರು ದತ್ತಾತ್ರೇಯ, ವಿಷ್ಣು, ದಕ್ಷಿಣಾಮೂರ್ತಿ. ತಾಳ್ಮೆ ಮತ್ತು ಕಠಿಣ ಪರಿಶ್ರಮ ಕಷ್ಟ ಎದುರಿಸುವ ಇವರ ಅಸ್ತಿಗಳು. ನಿಧಾನವಾಗಿ ಆದರೆ ದೃಢವಾಗಿ ಸಮಸ್ಯೆ ಬಗೆಹರಿಸುತ್ತಾರೆ. ಇವರಿಗೆ ಯಾರ ನೆರವು ಬೇಕೆಂದರೆ ಹಿರಿಯರು, ಉದ್ಯೋಗ ಕ್ಷೇತ್ರದ ಮಾರ್ಗದರ್ಶಕರು. ನಂಬುವ ದೇವರು ಶನಿ, ಶಿವ, ಹನುಮಂತ. ಕಷ್ಟ ಬಂದಾಗ ಹೊಸ ದೃಷ್ಟಿಕೋನದಿಂದ ಯೋಚನೆ ಮಾಡುತ್ತಾರೆ. ಸವಾಲು ಎದುರಿಸಲು ವಿಭಿನ್ನ ಪರಿಹಾರಗಳನ್ನು ಹುಡುಕುತ್ತಾರೆ. ಇವರಿಗೆ ಯಾರ ನೆರವು? ಸ್ನೇಹಿತರ ವಲಯ, ಸಮಾಜಮುಖಿ ವ್ಯಕ್ತಿಗಳು. ಇನ್ನು ದೇವರುಗಳೆಂದರೆ ಶಿವ, ಶನಿ, ದತ್ತಾತ್ರೇಯ. ಸವಾಲಿನೆದುರು ಇವರ ಮನೋಭಾವ ಭಾವನೆ ಮತ್ತು ಭಕ್ತಿಯ ಸಮತೋಲನ ಹುಡುಕುವವರು. ಪ್ರಾರ್ಥನೆ, ಧ್ಯಾನ, ಆತ್ಮಚಿಂತನೆಯ ಮೂಲಕ ಮನಸ್ಸನ್ನು ಗಟ್ಟಿಗೊಳಿಸುತ್ತಾರೆ. ಕುಟುಂಬ, ಗುರುಗಳು, ಆಧ್ಯಾತ್ಮಿಕ ವ್ಯಕ್ತಿಗಳ ಬೆಂಬಲ ಇವರಿಗೆ ಇದೆ. ಶ್ರೀಕೃಷ್ಣ, ವಿಷ್ಣು, ದತ್ತಾತ್ರೇಯರನ್ನು ನಂಬಿ ನಡೆಯುತ್ತಾರೆ. (ಬರಹ: ಭವಾನಿ ಭಟ್)ವೃಷಭ (Taurus)
ಮಿಥುನ (Gemini)
ಗುರು ಸೂರ್ಯನ ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ :ಒಲಿದು ಬರುವಳು ಲಕ್ಷ್ಮೀ, ಹಣ ಸಿಗುವುದು, ಇಷ್ಟಾರ್ಥ ನೆರವೇರುವುದು
ಕಟಕ (Cancer)
ಸಿಂಹ (Leo)
ಕನ್ಯಾ (Virgo)
ನಿಮ್ಮ ಜನ್ಮರಾಶಿ ಹೇಳುತ್ತೆ ನಿಮ್ಮ ಕ್ರಿಯೇಟಿವಿಟಿಯ ರಹಸ್ಯ! ಯಾವ ರಾಶಿಯವರು ಯಾವ ಕ್ಷೇತ್ರದಲ್ಲಿ ಮಿಂಚುತ್ತಾರೆ?
ತುಲಾ (Libra)
ವೃಶ್ಚಿಕ (Scorpio)
ಧನು (Sagittarius)
ಮಕರ (Capricorn)
ಕುಂಭ (Aquarius)
ಮೀನ (Pisces)