ಇಂದು, ಅಂದರೆ ಜುಲೈ 14, 2026 ವಿಶೇಷ ದಿನ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇದು ಆಷಾಢ ಕೃಷ್ಣ ಪಕ್ಷದ ಅಮಾವಾಸ್ಯೆ. ಮಂಗಳವಾರ ಅಮಾವಾಸ್ಯೆ ಬೀಳುವುದರಿಂದ, ಇದನ್ನು ಭೌಮಾವತಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನವು ಜ್ಯೋತಿಷ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಹೆಚ್ಚಿನ ಮಹತ್ವದ್ದಾಗಿದೆ. ಇಂದಿನ ಗ್ರಹಗಳ ಸಂಯೋಜನೆಯು ನಮ್ಮ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ.
ಮೇಷ ರಾಶಿ (Aries): ಮೇಷ ರಾಶಿಯವರು ಇಂದು ಮನೆ ಮತ್ತು ಕುಟುಂಬ ವ್ಯವಹಾರಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಕರ್ಕಾಟಕ ರಾಶಿಯಲ್ಲಿ ಗ್ರಹಗಳ ಸಂಯೋಗದಿಂದಾಗಿ, ಹಳೆಯ ವಿಷಯಗಳ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚೆಗಳು ನಡೆಯಬಹುದು. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನೀವು ಶಾಂತವಾಗಿರುವುದು ಬಹಳ ಮುಖ್ಯ.
ವೃಷಭ ರಾಶಿ (Taurus): ಬುಧನ ಸಂಚಾರದಿಂದಾಗಿ, ನಿಮ್ಮ ಪ್ರಯಾಣ ಅಥವಾ ಸಂವಹನದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಕಚೇರಿಯಲ್ಲಿ ಅಥವಾ ಹೊರಗೆ ಯಾರೊಂದಿಗೂ ಮಾತನಾಡುವ ಮೊದಲು ಎರಡು ಬಾರಿ ಯೋಚಿಸಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆಯಿದೆ. ಮಿಥುನ ರಾಶಿ (Gemini): ಮಿಥುನ ರಾಶಿಯವರು ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ. ಅಮಾವಾಸ್ಯೆಯ ಪ್ರಭಾವದಿಂದಾಗಿ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆಯಿದೆ. ಹೊಸ ಹೂಡಿಕೆಗಳು ಅಥವಾ ದೊಡ್ಡ ಆರ್ಥಿಕ ನಿರ್ಧಾರಗಳನ್ನು ಕನಿಷ್ಠ ಒಂದು ವಾರ ಮುಂದೂಡುವುದು ಉತ್ತಮ. ಕರ್ಕಾಟಕ ರಾಶಿ (Cancer): ಈ ಅಮಾವಾಸ್ಯೆ ಸಂಪೂರ್ಣವಾಗಿ ನಿಮ್ಮ ರಾಶಿಯಲ್ಲಿ ನಡೆಯುತ್ತಿದೆ. ಆದ್ದರಿಂದ ನಿಮ್ಮ ಮೇಲೆ ಪರಿಣಾಮ ಹೆಚ್ಚಾಗಿರಲಿದೆ. ಇದು ಹೊಸ ಆರಂಭದ ಸಂಕೇತವಾಗಿದ್ದರೂ, ಬುಧ ಹಿಮ್ಮುಖವಾಗಿರುವುದರಿಂದ ನಿಮ್ಮ ಆಲೋಚನೆಗಳಲ್ಲಿ ಗೊಂದಲ ಉಂಟಾಗುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ.ತಾಳ್ಮೆಯಿಂದ ಇರಿ, ಶಾಂತವಾಗಿರಿ. ಸಿಂಹ ರಾಶಿ (Leo): ಸಿಂಹ ರಾಶಿಯವರು ಇಂದು ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಬೆಳಿಗ್ಗೆ ತಮ್ಮ ಪೂರ್ವಜರಿಗೆ ನೈವೇದ್ಯ ಮತ್ತು ತರ್ಪಣ ಮಾಡುವುದರಿಂದ ಅವರಿಗೆ ಅತ್ಯುತ್ತಮ ಮಾನಸಿಕ ಶಾಂತಿ ದೊರೆಯುತ್ತದೆ. ಇಂದು ಏಕಾಂಗಿಯಾಗಿ ಸಮಯ ಕಳೆಯಲು ಬಯಸುತ್ತಾರೆ. ಕನ್ಯಾ ರಾಶಿ (Vigro): ಹಳೆಯ ಪರಿಚಯಸ್ಥರು ಬಹಳ ದಿನಗಳಿಂದ ಕಳೆದುಹೋದ ಸ್ನೇಹಿತರು ಇಂದು ತಮ್ಮ ಜೀವನದಲ್ಲಿ ಮತ್ತೆ ಬರುವ ಅವಕಾಶವಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆದರೆ, ಹೊಸ ಒಪ್ಪಂದಗಳ ಬಗ್ಗೆ ಜಾಗರೂಕರಾಗಿರಬೇಕು. ಕಠಿಣ ಪರಿಶ್ರಮ ವ್ಯರ್ಥವಾಗಬಹುದು. ತುಲಾ ರಾಶಿ (Libra): ತುಲಾ ರಾಶಿಯವರ ವೃತ್ತಿಪರ ಜೀವನದಲ್ಲಿ ಕೆಲವು ಹಳೆಯ ಸಮಸ್ಯೆಗಳು ಮತ್ತೆ ಉದ್ಭವಿಸಬಹುದು. ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾದಗಳಲ್ಲಿ ತೊಡಗಬೇಡಿ. ಕಚೇರಿ ಕೆಲಸದಲ್ಲಿ ಸ್ವಲ್ಪ ವಿಳಂಬವಾದರೂ ತಾಳ್ಮೆಯಿಂದಿರುವುದು ಬಹಳ ಮುಖ್ಯ. ವೃಶ್ಚಿಕ ರಾಶಿ (Scorpio): ದೂರದ ಪ್ರಯಾಣಗಳು ಮುಂದೂಡಲ್ಪಡುವ ಸ್ಪಷ್ಟ ಸೂಚನೆಗಳಿವೆ. ಉನ್ನತ ಅಧ್ಯಯನ ಅಥವಾ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನೀವು ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು ಸಹ ನಿಮ್ಮ ಭವಿಷ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಧನು ರಾಶಿ (Sagitarius): ಧನು ರಾಶಿಯವರು ಯಾವುದೇ ಸಂದರ್ಭದಲ್ಲೂ ಆರೋಗ್ಯದ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸಬಾರದು. ಪಿತ್ರಾರ್ಜಿತ ಆಸ್ತಿಗಳು ಅಥವಾ ಹಳೆಯ ಸಾಲಗಳ ಬಗ್ಗೆ ಮನೆಯಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆಯೂ ಇದೆ. ಶನಿಯ ಪ್ರಭಾವದಿಂದಾಗಿ, ಭಾವನಾತ್ಮಕವಾಗಿರದೆ ಪ್ರಾಯೋಗಿಕವಾಗಿ ಯೋಚಿಸುವುದು ಮುಖ್ಯ. ಮಕರ ರಾಶಿ (Capricorn): ಸಂಗಾತಿಯ ಜೊತೆ ಮನಸ್ತಾಪ ಉಂಟಾಗಬಹುದು. ಹಳೆಯ ಘರ್ಷಣೆಗಳು ಮತ್ತೆ ಉದ್ಭವಿಸದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗೆ ತಾಳ್ಮೆಯಿಂದ ಮತ್ತು ಶಾಂತವಾಗಿ ಮಾತನಾಡಿದರೆ, ಸಮಸ್ಯೆ ತಾನಾಗಿಯೇ ಇತ್ಯರ್ಥವಾಗುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕುಂಭ ರಾಶಿ (Aquarius): ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಅಗತ್ಯ. ಹಳೆಯ ಕಾಯಿಲೆಗಳು ಮತ್ತೆ ಕಾಡುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ದೈನಂದಿನ ಕೆಲಸದಲ್ಲಿ ಜಾಗರೂಕರಾಗಿರಿ. ಮೀನ ರಾಶಿ (Pisces): ನಿಂತು ಹೋಗಿರುವ ಯೋಜನೆಗಳನ್ನು ಪುನರಾರಂಭಿಸಲು ಅವಕಾಶ ಸಿಗುತ್ತದೆ. ಪ್ರೇಮ ವ್ಯವಹಾರಗಳು ಮತ್ತು ವೈವಾಹಿಕ ಸಂಬಂಧಗಳಲ್ಲಿ ಕೆಲವು ಗೊಂದಲಗಳು ಉಂಟಾಗುತ್ತವೆ. ಮಕ್ಕಳ ಭವಿಷ್ಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. (ಬರಹ: ರಂಜಿತಾ ಆರ್.ಕೆ.)ಅತ್ತೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಈ ರಾಶಿಯ ಹೆಣ್ಣುಮಕ್ಕಳು
ಶಿವಯೋಗದಿಂದ ಮೂರು ರಾಶಿಯವರ ಮೇಲಿರಲಿದೆ ಈಶ್ವರನ ಸಂಪೂರ್ಣ ಕೃಪೆ: ಸರ್ವ ಆಸೆಗಳೂ ಈಡೇರುವ ಕಾಲ