ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಹುಬ್ಬೇರಿಸುವಂಥ ಕುತೂಹಲಕಾರಿ 10 ಅಂಶ

By Mahesh

ಬೆಂಗಳೂರು, ಫೆ.5: 11ನೇ ವಿಶ್ವಕಪ್ ಕ್ರಿಕೆಟ್ ಸಮರ ಫೆ.14ರಿಂದ ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಆರಂಭವಾಗಲಿದ್ದು, ಅತಿಥೇಯ ನ್ಯೂಜಿಲೆಂಡ್ ತಂಡವನ್ನು ಶ್ರೀಲಂಕಾ ಎದುರಿಸಲಿದೆ. ವಿಶ್ವಕಪ್ ನಲ್ಲಿ ದಾಖಲೆಗಳ ಧೂಳಿಪಟದ ಜೊತೆಗೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಹೊಸ ಸ್ಟಾರ್ ಗಳು ಉದಯಿಸುವುದನ್ನು ಕಂಡಿದ್ದೇವೆ. ಹಲವು ಅಚ್ಚರಿಗಳ ಸರಮಾಲೆಯನ್ನೇ ಹೊತ್ತು ವಿಶ್ವಕಪ್ ಟೂರ್ನಿ ನಿಮ್ಮ ಮುಂದೆ ಬರುತ್ತದೆ.

ಫೆ.14ರಿಂದ ಮಾ.29ರ ತನಕ ಕ್ರಿಕೆಟ್ ಹಬ್ಬ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ರಸದೌತಣ ನೀಡಿದರೆ ಅಂಕಿ ಅಂಶ ಕಲೆ ಹಾಕುವವರಿಗೆ ಅತಿ ದೊಡ್ಡ ಕಣಜವಾಗಿ ಈ ಟೂರ್ನಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕುತೂಹಲ ಮೂಡಿಸುತ್ತದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಫೆ.14ರಿಂದ ಮಾ.29ರ ತನಕ ಕ್ರಿಕೆಟ್ ಹಬ್ಬ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ರಸದೌತಣ ನೀಡಿದರೆ ಅಂಕಿ ಅಂಶ ಕಲೆ ಹಾಕುವವರಿಗೆ ಅತಿ ದೊಡ್ಡ ಕಣಜವಾಗಿ ಈ ಟೂರ್ನಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕುತೂಹಲ ಮೂಡಿಸುತ್ತದೆ. ಇಲ್ಲಿ ತನಕ ನೀವು ವಿಶ್ವ ದಾಖಲೆಗಳ ಬಗ್ಗೆ ಓದಿರುತ್ತೀರಿ.

ಸತತ ಎರಡು ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಸಾಧಿಸಲಿಲ್ಲ. 1996 ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ ಗೆಲ್ಲಲಿಲ್ಲ, ಲಾರ್ಡ್ಸ್ ಬಿಟ್ಟರೆ ಕ್ರಿಕೆಟಿಗರ ನೆಚ್ಚಿನ ಮೈದಾನ ಯಾವುದು? ಹೀಗೆ ಈಗ ಕೆಲವು ಕುತೂಹಲಕಾರಿ ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ

ಏಷ್ಯದ ಕ್ರಿಕೆಟ್ ಹುಲಿ ಟೀಂ ಇಂಡಿಯಾ

ಏಷ್ಯದ ಕ್ರಿಕೆಟ್ ಹುಲಿ ಟೀಂ ಇಂಡಿಯಾ

ಏಷ್ಯಾ ಖಂಡದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಹುಲಿಯಾಗಿ ಮೆರೆದಿದೆ. 1983ರ ವಿಶ್ವಕಪ್ ನಲ್ಲಿ ಅಂಡರ್ ಡಾಗ್ ಆಗಿ ಕಣಕ್ಕಿಳಿದ ಕಪಿಲ್ ಡೆವಿಲ್ಸ್ ಕಪ್ ಎತ್ತಿದ್ದು ಈಗ ಇತಿಹಾಸ ನಂತರ 2011ರಲ್ಲಿ ಧೋನಿ ಬಾಯ್ಸ್ ಇದೇ ಸಾಧನೆ ಮಾಡಿದರು. 1992ರಲ್ಲಿ ಪಾಕಿಸ್ತಾನ ಹಾಗೂ 1996ರಲ್ಲಿ ಶ್ರೀಲಂಕಾ ಗೆದ್ದಾಗಲೂ ಅಭಿಮಾನಿಗಳಿಗೆ ಅಚ್ಚರಿ ಮೂಡಿತ್ತು.

ಮೂರು ಬಾರಿ ಫೈನಲ್ ಪ್ರವೇಶಿಸಿದ ವಿಂಡೀಸ್ ದೈತ್ಯರು

ಮೂರು ಬಾರಿ ಫೈನಲ್ ಪ್ರವೇಶಿಸಿದ ವಿಂಡೀಸ್ ದೈತ್ಯರು

ಮೂರು ಬಾರಿ ಫೈನಲ್ ಪ್ರವೇಶಿಸಿದ ವಿಂಡೀಸ್ ದೈತ್ಯರು ಹ್ಯಾಟ್ರಿಕ್ ಸಾಧಿಸಲು ಆಗಲಿಲ್ಲ. 1975, 1979ರಲ್ಲಿ ಕ್ಲೈವ್ ಲಾಯ್ಡ್ ತಂಡ ಪಡೆದುಕೊಂಡಿದ್ದ ನಾಗಲೋಟಕ್ಕೆ 1983ರಲ್ಲಿ ಕಪಿಲ್ ಡೆವಿಲ್ಸ್ ಬ್ರೇಕ್ ಹಾಕಿದರು.

ನಂತರ ಫೈನಲ್ ಪ್ರವೇಶಿಸುವ ಕೆರಬಿಯನ್ನರ ಕನಸು ಈಡೇರಲೇ ಇಲ್ಲ. 1996ರಲ್ಲಿ ಹತ್ತಿರಕ್ಕೆ ಬಂದರೂ ಆಸ್ಟ್ರೇಲಿಯಾ ಅಡ್ಡಗಾಲು ಹಾಕಿತು.

ಮೂರು ದಶಕಗಳಲ್ಲಿ ಸೋತ ಏಕೈಕ ತಂಡ ಇಂಗ್ಲೆಂಡ್

ಮೂರು ದಶಕಗಳಲ್ಲಿ ಸೋತ ಏಕೈಕ ತಂಡ ಇಂಗ್ಲೆಂಡ್

ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ಏನೆಲ್ಲ ಸಾಹಸ ಪಟ್ಟರೂ ವಿಶ್ವಕಪ್ ಗೆಲ್ಲಲು ಆಗುತ್ತಿಲ್ಲ. ಮೂರು ದಶಕಗಳಲ್ಲಿ ಫೈನಲ್ ತಲುಪಿ ಸೋತ ಏಕೈಕ ತಂಡವಾಗಿ ಇಂಗ್ಲೆಂಡ್ ಹೊರಹೊಮ್ಮಿದೆ. 1975,1987 ಹಾಗೂ 1992ರಲ್ಲಿ ಇಂಗ್ಲೆಂಡ್ ಅಂತಿಮ ಹಣಾಹಣಿಯಲ್ಲಿ ನೆಲಕಚ್ಚಿತ್ತು. ಗ್ರಹಾಂ ಗೂಚ್ ಮೂರು ಫೈನಲ್ ಆಡಿದ ದಾಖಲೆ ಹೊಂದಿದ್ದಾರೆ.

ವಿಶ್ವಕಪ್ ಫೈನಲ್ ಗೆ ಹೇಳಿ ಮಾಡಿಸಿದ ಮೈದಾನ

ವಿಶ್ವಕಪ್ ಫೈನಲ್ ಗೆ ಹೇಳಿ ಮಾಡಿಸಿದ ಮೈದಾನ

ವಿಶ್ವ ಕ್ರಿಕೆಟ್ ನಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಮೈದಾನ ಬಿಟ್ಟರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಕ್ರಿಕೆಟಿಗರ ಮೆಚ್ಚಿನ ತಾಣವಾಗಿದೆ. ಲಾರ್ಡ್ಸ್ ನಲ್ಲಿ ನಾಲ್ಕು ಬಾರಿ ಫೈನಲ್ ನಡೆದಿದ್ದರೆ ಮೆಲ್ಬೋರ್ನ್ ನಲ್ಲಿ ಎರಡನೇ ಬಾರಿಗೆ ಅಂತಿಮ ಹಣಾಹಣಿ ಕಾಣಬಹುದಾಗಿದೆ.

ಸಚಿನ್ ತೆಂಡೂಲ್ಕರ್ ವಿಶ್ವಕಪ್ ಸರದಾರ

ಸಚಿನ್ ತೆಂಡೂಲ್ಕರ್ ವಿಶ್ವಕಪ್ ಸರದಾರ

ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ (2,278 ಸ್ಕೋರ್) ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರು ಅತಿ ಹೆಚ್ಚು ಸಿಕ್ಸರ್ ಕೂಡಾ ಬಾರಿಸಿದ್ದಾರೆ. 1996 ಹಾಗೂ 2003ರಲ್ಲಿ ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು. ಸಚಿನ್ ದಾಖಲೆಗಳು ಸದ್ಯಕ್ಕಂತೂ ಯಾರೂ ಮುರಿಯುವ ಹಾಗೆ ಕಾಣಿಸುವುದಿಲ್ಲ.

ಗ್ಲೆನ್ ಮೆಗ್ರಾಥ್ ಅಮೋಘ ದಾಖಲೆ

ಗ್ಲೆನ್ ಮೆಗ್ರಾಥ್ ಅಮೋಘ ದಾಖಲೆ

ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಗ್ರಾಥ್ ವಿಶ್ವಕಪ್ ಕ್ರಿಕೆಟ್ ನಲ್ಲಿ 39 ಪಂದ್ಯಗಳಲ್ಲಿ 71 ವಿಕೆಟ್ ಕಿತ್ತಿದ್ದಾರೆ. ಈ ದಾಖಲೆ ಇನ್ನೂ ಅಚ್ಚಳಿಯದೆ ಉಳಿದಿದೆ. ಮೆಗ್ರಾಥ್ ವಿಶ್ವಕಪ್ ನಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ (7/15, 2003 ನಮೀಬಿಯಾ ವಿರುದ್ಧ) ನೀಡಿದ್ದಾರೆ.

ಗ್ಯಾರಿ ಕರ್ಸ್ಟನ್ ಅತಿ ಹೆಚ್ಚು ವೈಯಕ್ತಿಕ ಮೊತ್ತ

ಗ್ಯಾರಿ ಕರ್ಸ್ಟನ್ ಅತಿ ಹೆಚ್ಚು ವೈಯಕ್ತಿಕ ಮೊತ್ತ

1996ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧೆಗಿಳಿದ ಯುಎಐ ತಂಡ ಬೆಚ್ಚುವಂತೆ ದಕ್ಷಿಣ ಆಫ್ರಿಕಾ ತಂಡದ ಗ್ಯಾರಿ ಕರ್ಸ್ಟನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 188ರನ್ ಚೆಚ್ಚಿದರು. ಈ ಮೊತ್ತ ಇನ್ನೂ ಯಾರೂ ದಾಟಿಲ್ಲ.

ಆಸ್ಟ್ರೇಲಿಯಾ ವಿಶ್ವಕಪ್ ನಲ್ಲಿ ಅಜೇಯ ತಂಡ

ಆಸ್ಟ್ರೇಲಿಯಾ ವಿಶ್ವಕಪ್ ನಲ್ಲಿ ಅಜೇಯ ತಂಡ

12ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡ ಅಜೇಯವಾಗಿ ಉಳಿದಿದ್ದು ದೊಡ್ಡ ಸಾಧನೆ. 1999ರಲ್ಲಿ ಪಾಕಿಸ್ತಾನ ವಿರುದ್ಧ ಗ್ರೂಪ್ ಮ್ಯಾಚ್ ನಲ್ಲಿ 10 ರನ್ ಗಳ ಸೋಲು ಕಂಡಿತು. ಆನಂತರ 2011ರಲ್ಲಿ ಪುನಃ ಪಾಕಿಸ್ತಾನ ಎದುರು 4 ವಿಕೆಟ್ ಗಳ ಸೋಲು ಕಂಡಿತ್ತು.

ವಾಕ್ ಓವರ್ ಪಡೆದ ಶ್ರೀಲಂಕಾ

ವಾಕ್ ಓವರ್ ಪಡೆದ ಶ್ರೀಲಂಕಾ

1996ರಲ್ಲಿ ಎಲ್ಲರಿಗೂ ಅಚ್ಚರಿ ಮೂಡುವಂಥ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ ಕೊನೆಗೆ ಚಾಂಪಿಯನ್ ಆಗಿದ್ದು ಇತಿಹಾಸ. ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಗ್ರೂಪ್ ಹಂತದಲ್ಲಿ ವಾಕ್ ಓವರ್ ಪಡೆದುಕೊಂಡಿದ್ದು ವಿಶೇಷ ಒಂದೇ ಒಂದು ಪಂದ್ಯವಾಡಿ 6 ಅಂಕ ಕಲೆ ಹಾಕಿತ್ತು.

ಆಸ್ಟ್ರೇಲಿಯಾಕ್ಕೆ ಶಾಕ್ ನೀಡಿದ ಜಿಂಬಾಬ್ವೆ

ಆಸ್ಟ್ರೇಲಿಯಾಕ್ಕೆ ಶಾಕ್ ನೀಡಿದ ಜಿಂಬಾಬ್ವೆ

1983ರ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 13ರನ್ ಗಳಿಂದ ಜಿಂಬಾಬ್ವೆ ಸೋಲಿಸಿದ್ದು ಇನ್ನೂ ಅಭಿಮಾನಿಗಳ ನೆನಪಿನಿಂದ ಮಾಸಿಲ್ಲ. ಆದರೆ, ಜಿಂಬಾಬ್ವೆ ತಂಡದ ಅಚ್ಚರಿಯ ಆಟ ಮತ್ತೆ ಮರುಕಳಿಸಲೇ ಇಲ್ಲ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X