ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶಿ ನೆಲದಲ್ಲಿ ಸರಣಿ ಜಯ: ಧೋನಿಗೆ ಸರಿಸಾಟಿ ಯಾರಿಲ್ಲ!

By Mahesh

ಹರಾರೆ, ಜೂನ್ 16: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ಯುವ ತಂಡವನ್ನು ಸಮರ್ಥವಾಗಿ ಮುನ್ನಡೆಸಿ, ಜಿಂಬಾಬ್ವೆ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧಿಸಿದ್ದು ಗೊತ್ತಿರಬಹುದು. ಮೊಟ್ಟ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಸರಣಿ 'ವೈಟ್ ವಾಶ್ 'ಸಾಧಿಸಿದ್ದಾರೆ.

ಕ್ಯಾಪ್ಟನ್ ಕೂಲ್ ಧೋನಿ ಅವರು ನಾಯಕನಾಗಿ 107ನೇ ಏಕದಿನ ಪಂದ್ಯ ಗೆಲುವು ಸಾಧಿಸಿ (ಜೂನ್ 15) ಬಾರ್ಡರ್ ಅವರ ದಾಖಲೆ ಸಮಗೊಳಿಸಿದ್ದಲ್ಲದೆ, ಸರ್ವಕಾಲಿಕ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. [ಬಾರ್ಡರ್ 'ರೆಕಾರ್ಡ್ ಗೆರೆ' ಸಮಕ್ಕೆ ನಿಂತ ಧೋನಿ]

Complete list of ODI tournaments India won on foreign soil under Captain Cool MS Dhoni

ಧೋನಿ ಅವರು ನಾಯಕರಾಗಿ 194 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 107 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 72 ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ. [ಒಡಿಐನಲ್ಲಿ ವಿಕೆಟ್ ಕೀಪರ್ ಆಗಿ ಧೋನಿ ಹೊಸ ದಾಖಲೆ]

ವಿದೇಶಿ ನೆಲದಲ್ಲಿ ಸಾಧನೆ : 50 ಓವರ್ ಗಳ ಮಾದರಿಯಲ್ಲಿ ಧೋನಿ ಅವರು ಒಟ್ಟಾರೆ 13 ಸರಣಿ ಜಯ ದಾಖಲಿಸಿದ್ದಾರೆ. ಟಿ 20 ಪಂದ್ಯಗಳ ಪೈಕಿ 47 ಪಂದ್ಯಗಳಲ್ಲಿ 29 ಜಯ ಗಳಿಸಿಕೊಟ್ಟಿದ್ದಾರೆ.

ಧೋನಿ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಟಿ 20 ಸರಣಿ ಹಾಗೂ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ಟಿ 20 ಕಪ್ ಗೆದ್ದರೆ, ಐಸಿಸಿ ವಿಶ್ವಟಿ20, 2016 ರ ಸೆಮಿಫೈನಲ್ ತಲುಪಿತ್ತು. [ಧೋನಿ ದಾಖಲೆ ಪುಡಿ ಮಾಡಿದ ಸೆಹ್ವಾಗ್]

ಐಸಿಸಿ ವಿಶ್ವಕಪ್ 2015 ನಲ್ಲಿ ಸತತ ಆರು ಪಂದ್ಯ ಗೆದ್ದ ಭಾರತ, ಸೆಮಿಫೈನಲ್ ನಲ್ಲಿ ಮುಗ್ಗರಿಸಿತ್ತು. ಒಟ್ಟಾರೆ ವಿದೇಶಿ ನೆಲದಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದ ಟೂರ್ನಮೆಂಟ್ ಗಳ ಪಟ್ಟಿ ಹೀಗಿದೆ:

Series Teams Year Margin
1. Commonwealth Bank Series Australia, India, Sri Lanka 2007/08 --
2. India in Sri Lanka Series Sri Lanka 2008 3-2 (5)
3. India in Sri Lanka Series Sri Lanka 2008/09 4-1 (5)
4. India in New Zealand Series New Zealand 2008/09 3-1 (5)
5. India in West Indies ODI Series West Indies 2009 2-1 (4)
6. Compaq Cup in Sri Lanka India, New Zealand, SL 2009 --
7. Asia Cup in Sri Lanka Bangladesh, India, Pakistan, SL 2010 --
8. India in West Indies Series West Indies 2011 3-2 (5)
9. India in Sri Lanka Series Sri Lanka 2012 4-1 (5)
10. ICC Champions Trophy in England All ODI Teams 2013 --
11. West Indies Tri-Nation Series India, Sri Lanka, West Indies 2013 --
12. India in England ODI Series England 2014 3-1 (5)
13. India in Zimbabwe ODI Series Zimbabwe 2016 3-0

(ಒನ್ಇಂಡಿಯಾ ಸುದ್ದಿ)

Story first published: Monday, December 28, 2020, 12:08 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X