ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಗೂ ಆರ್ ಸಿಬಿಗೆ ಪಂದ್ಯ ಗೆಲ್ಲಿಸಿಕೊಟ್ಟ ಬೌಲರ್ಸ್!

By Mahesh

ಮೊಹಾಲಿ, ಮೇ 09: ಪಂಜಾಬ್ ನಾಯಕ ಮುರಳಿ ವಿಜಯ್ ಏಕಾಂಗಿ ಹೋರಾಟ ಅಂತ್ಯವಾದರೂ ಕೊನೆ ಓವರ್ ತನಕ ಎಳೆದ ಪಂದ್ಯ ಐಪಿಎಲ್ 9 ನ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಕೊನೆಗೂ ಆರ್ ಸಿಬಿ ಬೌಲರ್ಸ್ ಗಳು ಮೊದಲ ಬಾರಿಗೆ ಪಂದ್ಯ ಗೆಲ್ಲಿಸಿಕೊಟ್ಟರು. ಪಿಸಿಎ ಸ್ಟೇಡಿಯಂನಲ್ಲಿ ಪಂಜಾಬ್ ವಿರುದ್ಧ 1 ರನ್ ಗಳ ಜಯ ಆರ್ ಸಿಬಿ ಪಾಲಾಯಿತು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆರ್​ಸಿಬಿ ದುರ್ಬಲ ಬೌಲಿಂಗ್ vs ಪಂಜಾಬ್ ದುರ್ಬಲ ಬ್ಯಾಟಿಂಗ್ ಎಂದೇ ಕಾಮೆಂಟೆಟರ್ಸ್ ಅನಿಸಿಕೆಯಾಗಿತ್ತು. ಆದರೆ, ಪಂಜಾಬಿನ ಹೊಸ ನಾಯಕ ಮುರಳಿ ವಿಜಯ್ ಅವರು ಉತ್ತಮ ಆರಂಭ ಪಡೆದುಕೊಂಡರು. [ಅಂಕಪಟ್ಟಿ]

IPL 2016: AB de Villiers, Shane Watson shine as RCB edge KXIP by 1 run


ಹಶೀಂ ಆಮ್ಲ 21 ರನ್ ಗಳಿಸಿ ಸಾಥ್ ನೀಡಿದರು. ನಂತರ ವಿಜಯ್ ಗೆ ಯಾರು ಜೊತೆಗಾರರು ಸಿಗಲಿಲ್ಲ. ಕಳೆದ ಮ್ಯಾಚ್ ಹೀರೋ ಆಲ್ ರೌಂಡರ್ ಸ್ಟೋಯಿನಿಸ್ ಅಜೇಯ 34ರನ್(22ಎಸೆತ, 3 X4, 1X6) ಹೋರಾಟ ಮುಂದುವರೆಸಿದರು. []

ಕೊನೆ ಓವರ್ ನಲ್ಲಿ ಶೇನ್ ವ್ಯಾಟ್ಸನ್ (22ಕ್ಕೆ 2) ಪಂಜಾಬ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿ ಗೆಲುವಿನ ಆಸೆ ಚಿಗುರಿಸಿದ್ದನ್ನು ಮರೆಯುವಂತಿಲ್ಲ.ಜಾಬ್ ಗೆಲುವಿಗೆ 17ರನ್ ಬೇಕಿತ್ತು ಇಂಗ್ಲೆಂಡಿನ ಜೋರ್ಡಾನ್ ಅವರ ಮೊದಲ ಎಸೆತದಲ್ಲಿ ಬೆಹಾರ್ಡಿಯನ್ ಸಿಂಗಲ್ ರನ್ , 2 ಎಸೆತಗಳಲ್ಲಿ ಸ್ಟೋಯಿನಿಸ್ ಬೌಂಡರಿ, ನಂತರ ಸಿಕ್ಸರ್ ಸಿಡಿಸಿ ಪಂಜಾಬ್ ಗೆ ಗೆಲುವಿನ ಆಸೆ ಚಿಗುರಿಸಿದರು.


ಆದರೆ, ಕೊನೆ 3 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ, 4ನೇ ಎಸೆತದಲ್ಲಿ ಡಾಟ್ ಬಾಲ್ ಆಗಿದ್ದು, ಪಂದ್ಯಕ್ಕೆ ತಿರುವು ನೀಡಿರು. ಕೊನೇ 2 ಎಸೆತಗಳಲ್ಲಿ ಸ್ಟೋಯಿನಿಸ್ 2 ರನ್ ಮಾತ್ರ ಗಳಿಸಿದರು. ಆರ್ ಸಿಬಿ 1 ರನ್ ಗಳಿಂದ ಪಂದ್ಯ ಗೆದ್ದು ವಿಜಯೋತ್ಸವ ಆಚರಿಸಿತು.

ಕೆಎಲ್ ರಾಹುಲ್ 25 ಎಸೆತಗಳಲ್ಲಿ 42 ಹಾಗೂ ವಿರಾಟ್ ಕೊಹ್ಲಿ 20 ರನ್ ಉತ್ತಮ ಆರಂಭ ಪಡೆದರೂ, ಪಂಜಾಬ್ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಕೆಸಿ ಕಾರ್ಯಪ್ಪ (16ಕ್ಕೆ 2) ಪಡೆದು ಆರ್ ಸಿಬಿಗೆ ಹೊಡೆತ ನೀಡಿದರು. ಇದಕ್ಕೂ ಮುನ್ನ ಆರ್ ಸಿಬಿ ಪರ ಎಬಿ ಡಿ ವಿಲಿಯರ್ಸ್ 64 ರನ್(35 ಎಸೆತ, 5X4, 2X6) ಬ್ಯಾಟಿಂಗ್ ನೆರವಿನಿಂದ 5 ವಿಕೆಟ್​ಗೆ 175 ರನ್ ಪೇರಿಸಿತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X