ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟರ ಸಂಘದ ಶತಮಾನೋತ್ಸವ ಕಟ್ಟಡಕ್ಕೆ ಮೇ 12ರಂದು ಶಿಲಾನ್ಯಾಸ

|
Google Oneindia Kannada News

ಮಂಗಳೂರು, ಮೇ 10 : ಬಂಟರ ಯಾನೆ ನಾಡವರ ಮಾತೃಸಂಘ ಇದರ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣ ನಿರ್ಮಾಣದ ಶಿಲಾನ್ಯಾಸ ಸಮಾರಂಭ ಮೇ 12ರ ಗುರುವಾರ ನಡೆಯಲಿದೆ. 4 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚ ಸುಮಾರು 230 ಕೋಟಿ ರೂ..

ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಸಮಾರಂಭ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವಠಾರದಲ್ಲಿ ಮೇ 12ರ ಗುರುವಾರ ಸಂಜೆ 4 ಗಂಟೆಗೆ ನಡೆಯಲಿದೆ. ಮಾತೃಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣವನ್ನು ಸಮಾಜ ಬಾಂಧವರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು. [ಮಂಗಳೂರು : ಬಂಟ್ಸ್ ಹಾಸ್ಟೆಲ್ ವೃತ್ತ ಲೋಕಾರ್ಪಣೆ]

bunts sangha

ಈ ಸಮಾರಂಭಕ್ಕೆ ಉದ್ಯಮಿ ಡಾ.ಆರ್.ಎನ್.ಶೆಟ್ಟಿ, ನಿಟ್ಟೆ ವಿವಿ ಕುಲಪತಿ ಡಾ.ಎನ್.ವಿನಯ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಎಮ್. ಮೋಹನ್ ಆಳ್ವ ಮುಂತಾದವರು ಪಾಲ್ಗೊಳ್ಳಲಿದ್ದಾರೆ. [ಜಾತಿ ಆಧಾರಿತ ಜನಗಣತಿ: ಬಂಟರು ಏನ್ನಂತಾರೆ?]

ಸಂಘವು ಶತಮಾನೋತ್ಸವ ಪೂರೈಸಿದ ಸವಿನೆನಪಿಗಾಗಿ ನಿರ್ಮಿಸುವ ಶತಮಾನೋತ್ಸವ ಕಟ್ಟಡಗಳಲ್ಲಿ 2000 ಆಸನ ವ್ಯವಸ್ಥೆ ಇರುವ ಸುಸಜ್ಜಿತ ಸಭಾಭವನ, ಸಭೆ, ಸಮಾರಂಭಗಳನ್ನು ಏರ್ಪಡಿಸಲು ಎರಡು ಸಭಾಭವನಗಳು ಇರುತ್ತವೆ.

1,250 ರಷ್ಟು ವಾಹನ ನಿಲುಗಡೆಗೆ ವಿಸ್ತಾರವಾದ ಅವಕಾಶ, 4ನೇ ಮಹಡಿಯಲ್ಲಿ 50,000 ಚದರ ಅಡಿಯಷ್ಟು ಓಪನ್ ಟೆರೆಸ್, ಸುಮಾರು 6 ಲಕ್ಷ ಚದರ ಅಡಿ ವಾಣಿಜ್ಯ ಸಂಕೀರ್ಣ ಹಾಗೂ ವಿಶ್ವ ದರ್ಜೆಯ ಜಿಮ್ ಮತ್ತು ಕ್ಲಬ್ ಮೊದಲಾದವುಗಳನ್ನು ಭವನ ಒಳಗೊಂಡಿರುತ್ತದೆ.

ವಾಹನ ಪಾರ್ಕಿಂಗ್ ವ್ಯವಸ್ಥೆ : ಸಮಾರಂಭಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಬಂಟ್ಸ್ ಹಾಸ್ಟೆಲ್ ಬಳಿಯಿರುವ ಸಿ.ವಿ. ನಾಯಕ್ ಸಭಾಭವನ, ಪಿಂಟೋಸ್ ಲೇನ್ ಬಳಿ ಇರುವ ಹೆಗ್ಡೆ ಕಾಂಪೌಂಡ್, ಶ್ರೀ ರಾಮಕೃಷ್ಣ ವಿದ್ಯಸಂಸ್ಥೆಗಳ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

English summary
The foundation laying ceremony for the centenary complex of Bantara Yane Nadavara Mathru Sangha will be held on Bunts hostel premises Mangaluru on Thursday, May 12, 2016. Complex will be constructed at an estimated cost of Rs 230 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X