ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪ ಮೊಯ್ಲಿ ಅವರಿಗೆ ಸರಸ್ವತಿ ಸಮ್ಮಾನ್ ಪುರಸ್ಕಾರ

|
Google Oneindia Kannada News

ಬೆಂಗಳೂರು, ಮಾ.10 : ಹಿರಿಯ ಕಾಂಗ್ರೆಸ್ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಸರಸ್ವತಿ ಸಮ್ಮಾನ್ ಪಡೆದ ಎರಡನೇ ಕನ್ನಡಿಗ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.

ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ ಅವರಿಗೆ 'ರಾಮಾಯಣ ಮಹಾ­ನ್ವೇಷಣಂ' ಮಹಾಕಾವ್ಯಕ್ಕಾಗಿ 2014ನೇ ಸಾಲಿನ 'ಸರಸ್ವತಿ ಸಮ್ಮಾನ್‌' ಪುರಸ್ಕಾರ ಲಭಿಸಿದೆ. 1991ರಲ್ಲಿ ಕೆ.ಕೆ.ಬಿರ್ಲಾ ಪ್ರತಿಷ್ಠಾನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಪ್ರಶಸ್ತಿ 10 ಲಕ್ಷ ನಗದು, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿದೆ.

veerappa moily

'ರಾಮಾಯಣ ಮಹಾ­ನ್ವೇಷಣಂ' ಐದು ಸಂಪುಟಗಳ ಮಹಾಕಾವ್ಯವಾಗಿದ್ದು, 2001ರಲ್ಲಿ ಬಿಡುಗಡೆಗೊಂಡಿತ್ತು. ಈ ಕಾವ್ಯ ಇಂಗ್ಲಿಷ್‌, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿದೆ. ['ಹಿಂದೂ ಶಬ್ದ ವಿದೇಶಿಯರಿಂದ ಬಂದ ಬಳುವಳಿ' : ಮೊಯ್ಲಿ]

ಮೊಯ್ಲಿ ಎರಡನೇ ಕನ್ನಡಿಗ : ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆಯುತ್ತಿರುವ ಎರಡನೇ ಕನ್ನಡಿಗೆ ವೀರಪ್ಪ ಮೊಯ್ಲಿಯಾಗಿದ್ದಾರೆ. ಎಸ್‌.ಎಲ್‌.ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಿತ್ತು.

ಕಾವ್ಯದಲ್ಲಿ ಏನಿದೆ : 'ರಾಮಾಯಣ ಮಹಾನ್ವೇಷಣಂ' ಕಾವ್ಯದಲ್ಲಿ ರಾಮರಾಜ್ಯದ ಕುರಿತು ವರ್ಣನೆ ಇದೆ. ಕಲ್ಯಾಣ ರಾಜ್ಯದ ಆದರ್ಶ ಸಿದ್ಧಾಂತಗಳನ್ನು ಮತ್ತು ಆಧುನಿಕ ದೃಷ್ಟಿಕೋನಗಳನ್ನು ತೆರೆದಿಡಲಾಗಿದೆ ಎಂದು ಕೆ.ಕೆ.ಬಿರ್ಲಾ ಪ್ರತಿಷ್ಠಾನ ಹೇಳಿದೆ.

ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಆರ್‌.ಸಿ.ಲಹೋಟಿ ನೇತೃತ್ವದ 13 ಸದಸ್ಯರ ಸಮಿತಿ ವೀರಪ್ಪ ಮೊಯ್ಲಿ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ವೀರಪ್ಪ ಮೊಯ್ಲಿ ಅವರು ನಾಲ್ಕು ಕಾದಂಬರಿ, ಮೂರು ಕಾವ್ಯ ಸಂಗ್ರಹ, ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳಾದ 'ಕೊಟ್ಟ' ಮತ್ತು 'ತೆಂಬರೆ' ಹಿಂದಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ.

English summary
Former Karnataka Chief Minister and Senior Congress leader M.Veerappa Moily has been selected for the prestigious Saraswati Samman for 2014 for his 'Ramayana Mahanveshanam'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X