ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು, ಕನ್ನಡ ಪತ್ರಿಕೆಗಳು ಕಂಡಂತೆ
ಬೆಂಗಳೂರು, ಆಗಸ್ಟ್. 25 : ಖಾಸಗಿತದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ಸುಪ್ರೀಂಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ನೀಡಿದೆ.
ಗುರುವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಖೇಹರ್ ನೇತೃತ್ವದ ಸಂವಿಧಾನಿಕ ಪೀಠ, ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅಡಿಯಲ್ಲಿನ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್ ನೋಂದಣಿಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿ ಪೀರ್ಪು ನೀಡಿದೆ.
ಸಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ಎಸ್.ಎ. ಬೊಬ್ಡೆ, ಆರ್.ಕೆ. ಅಗರ್‌ವಾಲ್, ಆರ್.ಎಫ್. ನಾರಿಮನ್, ಎ.ಎಂ. ಸಪ್ರೆ, ಡಿ.ವೈ. ಚಂದ್ರಚೂಡ್, ಎಸ್. ಕೆ. ಕೌಲ್, ಎಸ್. ಅಬ್ದುಲ್ ನಜೀರ್ ಇದ್ದರು.
ಕನ್ನಡ ದಿನ ಪತ್ರಿಕೆಗಳು ಐತಿಹಾಸಿಕ ತೀರ್ಪಿನ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿವೆ. ಖಾಸಗಿ ತನಕ್ಕೆ ಇನ್ನು ಮುಂದೆ ಧಕ್ಕೆ ಇಲ್ಲ ಎಂದು ಹೇಳಿವೆ. ಯಾವ ಪತ್ರಿಕೆ ಶೀರ್ಪಿಕೆ ಏನಿದೆ? ನೋಡಿ...

ಖಾಸಗಿತನಕ್ಕೆ ಇನ್ನಿಲ್ಲ ವಿಘ್ನ
ವಿಜಯವಾಣಿ 'ಖಾಸಗಿತನಕ್ಕೆ ಇನ್ನಿಲ್ಲ ವಿಘ್ನ' ಎಂಬ ಶೀರ್ಷಿಕೆಯಡಿ ಸಂವಿಧಾನಿಕ ಪೀಠದ ಆದೇಶವನ್ನು ಪ್ರಕಟಿಸಿದೆ.

ಖಾಸಗಿತನ ಮೂಲಭೂತ ಹಕ್ಕು
ವಿಜಯ ಕರ್ನಾಟಕ ದಿನಪತ್ರಿಕೆ 'ಖಾಸಗಿತನ ಮೂಲ ಹಕ್ಕು' ಎಂಬ ಶೀರ್ಷಿಕೆಯಡಿ ಸುಪ್ರೀಂಕೋರ್ಟ್ ತೀರ್ಪಿನ ವರದಿಯನ್ನು ವಿವರವಾಗಿ ಪ್ರಕಟಿಸಿದೆ.

ಆಧಾರ್ ಕಡ್ಡಾಯ ನಿರ್ಧಾರಕ್ಕೆ ಹಿನ್ನಡೆ
ವಿಶ್ವವಾಣಿ ಪತ್ರಿಕೆ 'ಆಧಾರ್ ಕಡ್ಡಾಯ ನಿರ್ಧಾರಕ್ಕೆ ಹಿನ್ನಡೆ' ಎಂಬ ಶೀರ್ಷಿಕೆಯಡಿ ನ್ಯಾಯಾಲಯದ ತೀರ್ಪಿನ ಸುದ್ದಿಯನ್ನು ಪ್ರಕಟಿಸಿದೆ.

ಖಾಸಗಿತನ ಮೂಲಭೂತ ಹಕ್ಕು
'ಖಾಸಗಿತನ ಮೂಲಭೂತ ಹಕ್ಕು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು' ಎಂಬ ಶೀರ್ಷಿಕೆಯಡಿ ವಾರ್ತಾಭಾರತಿ ಕೋರ್ಟ್ ತೀರ್ಪಿನ ವರದಿಯನ್ನು ಪ್ರಕಟಿಸಿದೆ.

ಪ್ರಜಾವಾಣಿ ಶೀರ್ಷಿಕೆ ಹೇಗಿದೆ?
'ಖಾಸಗಿತನ ಮೂಲಭೂತ ಹಕ್ಕು' ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ಸುಪ್ರೀಂಕೋರ್ಟ್ ತೀರ್ಪಿನ ವರದಿಗಳನ್ನು ಪ್ರಕಟಿಸಿದೆ.

ಸಂಯುಕ್ತ ಕರ್ನಾಟಕ ಹೆಡ್ ಲೈನ್
ಸಂಯುಕ್ತ ಕರ್ನಾಟಕ 'ಆಧಾರ್ ಗೆ ಗುನ್ನ' ಎಂಬ ಶೀರ್ಷಿಕೆಯಡಿ ಐತಿಹಾಸಿಕ ತೀರ್ಪಿನ ವರದಿಗಳನ್ನು ಪ್ರಕಟಿಸಿದೆ.

ನನ್ನ ಖಾಸಗಿತನ ನನ್ನ ಹಕ್ಕು
'ನನ್ನ ಖಾಸಗಿತನ ನನ್ನ ಹಕ್ಕು' ಎಂಬ ಶೀರ್ಷಿಕೆಯಡಿ ಉದಯವಾಣಿ ಸುಪ್ರೀಂಕೋರ್ಟ್ ತೀರ್ಪಿನ ವರದಿಗಳನ್ನು ಪ್ರಕಟಿಸಿದೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications