ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಢನಂಬಿಕೆ, ಮಡೆಸ್ನಾನ ಬಗ್ಗೆ ಸಿದ್ದು ಗುಡುಗು

By Mahesh
|
Google Oneindia Kannada News

ಜಮಖಂಡಿ, ಜು.21: ರಾಜ್ಯದಲ್ಲಿ ಮೂಢನಂಬಿಕೆ ಆಚರಣೆ ಮಾಡಿದರೆ ಅಥವಾ ಪ್ರಚೋದಿಸಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ ಶೀಘ್ರವೇ ಮಡೆಸ್ನಾನದಂಥ ಮೂಢನಂಬಿಕೆ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ರಚಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ಹೇಳಿದ್ದಾರೆ.

'ನಾವು ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತೇವೆ. ಆದರೆ ಮಾಡುವ ಪೂಜೆ, ಪದ್ಧತಿಗಳು ವೈಚಾರಿಕತೆಯಿಂದ ಕೂಡಿರಬೇಕೇ ಹೊರತು ಮೌಢ್ಯತೆಯಿಂದ ಅಲ್ಲ. ಯಾವ ಶಾಸ್ತ್ರದಲ್ಲಿಯೂ ಉಲ್ಲೇಖವಾಗದ ಮಡೆಸ್ನಾನದಂಥ ಪದ್ಧತಿಗಳನ್ನು ನಿಷೇಧಿಸಬೇಕು. ಇಂದು ಜಾತಿ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಕಾಯಕ ಮಾಡಿ ಶ್ರೇಷ್ಠರಾಗಬೇಕೆ ಹೊರತು ಜಾತಿಯಿಂದ ಶ್ರೇಷ್ಠರಾಗುವುದು ಬೇಡ. ಮನುಕುಲ ಉದ್ಧಾರಕ್ಕೆ ಕನಕದಾಸರು ಶ್ರೇಷ್ಠ ಮಹಾನ್ ಪುರುಷರಾಗಿ ಹೋದರು. ಜಾತಿ, ಮತ-ಪಂಥಗಳಿಂದ ದೂರವಿದ್ದು, ಶ್ರೇಷ್ಠ ವ್ಯಕ್ತಿಗಳಾಗುವ ಕೆಲಸ ಮಾಡಬೇಕು ಎಂದರು.

CM Siddaramaiah bats for anti-superstition bill again

ವಿವಾದಿತ ಮಡೆ ಮಡೆಸ್ನಾನ, ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ, ಪಂಕ್ತಿಭೇದ, ಮೇಲು-ಕೀಳು ಭಾವನೆ ಪ್ರಚೋದಿಸುವ ಅಜಲು ಪದ್ಧತಿ, ಗೆಜ್ಜೆಪೂಜೆ, ಬೆತ್ತಲೆ ಸೇವೆ, ವಾಮಾಚಾರ, ಕುಂಡಲಿನಿ, ಹಸ್ತಸಾಮುದ್ರಿಕೆ, ಕಣಿ-ಶಕುನ, ಪ್ರಶ್ನೆ ಕೇಳುವುದು ಹಾಗೂ ಮಾಧ್ಯಮಗಳಲ್ಲಿ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಬೇಕು. ಶಾಲಾ ಹಂತದಿಂದಲೇ ಜಾತ್ಯತೀತ-ವೈಚಾರಿಕತೆ ಬಿತ್ತುವ ಸಲುವಾಗಿ ಅದನ್ನು ಪಠ್ಯಕ್ರಮವಾಗಿ ಅಳವಡಿಸಬೇಕು ಮುಂತಾದ ಶಿಫಾರಸ್ಸುಳ್ಳ ವಿಧೇಯಕದ ಕರಡು ಪ್ರತಿಯನ್ನು ರಾಷ್ಟ್ರೀಯ ಕಾನೂನು ವಿದ್ಯಾಲಯದ ನಿರ್ದೇಶಕ ಜಾಫೆಟ್‌ ನೇತೃತ್ವದ ಸಮಿತಿ ಕಳೆದ ವರ್ಷ ಸರ್ಕಾರಕ್ಕೆ ಸಲ್ಲಿಸಿತ್ತು.

ಆದರೆ, ಸರ್ಕಾರಿ ಕಚೇರಿಗಳಲ್ಲಿ ಪೂಜೆ-ಪುನಸ್ಕಾರ ನಡೆಸುವ, ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಗುದ್ದಲಿ ಪೂಜೆ ಮಾಡಿಸುವ, ವಿಧಾನಸೌಧ- ವಿಕಾಸಸೌಧಗಳಂತಹ ಸಾರ್ವಜನಿಕ ಕಟ್ಟಡಗಳಲ್ಲಿರುವ ಕೊಠಡಿಗಳನ್ನು ವಾಸ್ತುದೋಷ ನಿವಾರಣೆಯ ಹೆಸರಿನಲ್ಲಿ ಮನಬಂದಂತೆ ಬದಲಿಸಿ ಕಟ್ಟುವ ಮೌಢ್ಯಾಚರಣೆಗಳನ್ನು ಪ್ರತಿಬಂಧಿಸಬೇಕು ಎಂಬ ಅಂಶಗಳು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಮಠ-ಮಾನ್ಯಗಳ ವಿವಿಧ ಆಚರಣೆಗೂ ಕಡಿವಾಣ ಹಾಕುವಂತೆ ಸೂಚಿಸಲಾಗಿತ್ತು. ಹೀಗಾಗಿ ವಿಧೇಯಕ ಚರ್ಚೆ ಹಂತದಲ್ಲೇ ಇದ್ದು, ಇನ್ನೂ ಸದನದಲ್ಲಿ ಮಂಡನೆಯಾಗಿ ಕಾನೂನಾಗಿ ಜಾರಿಗೊಳ್ಳಬೇಕಿದೆ. [ಕರಡು ಮಸೂದೆ ವಿವರ ಇಲ್ಲಿ ಓದಿ]

English summary
Chief Minister Siddaramaiah said anti-superstition bill will be passed soon. Under Karnataka Prevention of Superstitious Practices Bill, 2013 thirteen rituals have been classified as evil practices and will attract severe punishment, including the death sentence for human sacrifice, madesnana according to the anti-superstition draft legislation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X