ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ 7 ಕಡೆ ಹಾದಿ ತಪ್ಪಿದ ಪೊಲೀಸರು
ಬೆಂಗಳೂರು, ಸೆಪ್ಟೆಂಬರ್ 7: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಕೈಗೆತ್ತಿಕೊಳ್ಳುವ ವೇಳೆ ಪೊಲೀಸರು 7 ಸ್ವಯಂಕೃತ ತಪ್ಪುಗಳನ್ನು ಎಸಗಿದ್ದಾರೆ. ಈ ತಪ್ಪುಗಳು ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ.
ಮೊದಲಿಗೆ ಈ ಪ್ರಕರಣ ಎಂಎಂ ಕಲಬುರ್ಗಿ ಪ್ರಕರಣದಂತೆಯೇ ಸೂಕ್ಷ್ಮ ಪ್ರಕರಣ ಎಂದು ಹೇಳಲಾಗಿದ್ದು, ಪೊಲೀಸರ ಅಸೂಕ್ಷ್ಮತೆಯಿಂದ ಕೆಲವು ಪ್ರಮುಖ ಸಾಕ್ಷಿಗಳೇ ಕೈತಪ್ಪಿರುವ ಸಾಧ್ಯತೆಯೂ ಇದೆ.

ಪೊಲೀಸರು ಎಸಗಿದ ತಪ್ಪುಗಳೇನು?
1. ಕೃತ್ಯ ನಡೆದ ತಕ್ಷಣ ಪೊಲೀಸರು ಸ್ಥಳ ತಲುಪಲು 25 ನಿಮಿಷಗಳನ್ನು ತೆಗೆದುಕೊಂಡಿದ್ದರು. ಪೊಲೀಸ್ ತನಿಖೆಯಲ್ಲಿ ಕರೆಯುವ 'ಕ್ರೈಂ ಸೀನ್' ಅಂದರೆ ಘಟನೆ ನಡೆದ ಸ್ಥಳದಲ್ಲಿ ಅದಾಗಲೇ ಹಲವರು ನಡೆದಾಡಿದ್ದರು. ಇದರಿಂದ ಹಲವು ಮಹತ್ವದ ಸಾಕ್ಷ್ಯಗಳು ಸಿಕ್ಕದೇ ಹೋಗಿರಬಹುದು.
2. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಎನ್ನಲಾದ ನೆರೆ ಮನೆಯವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ವಿಚಾರಣೆ ಭಯದಿಂದ ಅವರು ಆ ರೀತಿ ಮಾಡಿರಬಹುದು. ಇದು ಪ್ರಕರಣದ ತನಿಖೆಯ ನಿಧಾನಗತಿಗೆ ಕೊಡುಗೆ ನೀಡಲಿದೆ.
3. ವಿಶೇಷವೆಂದರೆ ಘಟನೆ ನಡೆದ ಸ್ಥಳದಲ್ಲಿ ಶ್ವಾನ ದಳ ಇರಲಿಲ್ಲ.
4. ಘಟನೆ ನಡೆದ ಸ್ಥಳ ಸರಗಳತನಕ್ಕೆ ಹೆಸರುವಾಸಿಯಾದ ಜಾಗವಾಗಿದೆ. ಸಾಮಾನ್ಯವಾಗಿ ಈ ಸ್ಥಳದ ಸುತ್ತ ಮುತ್ತ ಪೊಲೀಸರು ಸುತ್ತಾಡುತ್ತಾ ಇರುತ್ತಾರೆ. ಆದರೆ ಘಟನೆ ನಡೆದ ದಿನ ಹೆಚ್ಚಿನ ಪೊಲೀಸರು ಬಿಜೆಪಿ ಜಾಥಾ ತಡೆಯಲು ಹೋಗಿದ್ದರು. ಸ್ಥಳದ ಸುತ್ತ ಮುತ್ತ ಪೊಲೀಸರು ಇರಲಿಲ್ಲ.
5. ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ನಾಲ್ಕು ಗಂಟೆಗಳೇ ಹಿಡಿಯಿತು. ಈ ಸಿಸಿಟಿವಿ ದೃಶ್ಯಾವಳಿಗಳಿಂದ ಅವರಿಗೆ ಏನು ಸುಳಿವು ಸಿಕ್ಕಿದೆಯೋ ಗೊತ್ತಿಲ್ಲ.
6. ಸಾಮಾನ್ಯವಾಗಿ ಘಟನೆ ನಡೆದ ತಕ್ಷಣ ಪ್ರವೇಶ ಮತ್ತು ನಿರ್ಗಮನದ ದಾರಿಗಳನ್ನು ಪೊಲೀಸರು ಮುಚ್ಚುತ್ತಾರೆ. ಆದರೆ ಈ ರೀತಿ ಮಾಡಿಯೂ ಯಾರೂ ಒಳಗೆ ಬರದಂತೆ ಯಾವ ಅಧಿಕಾರಿ ತಡೆಯಬೇಕು ಎಂದು ಸರಿಯಾಗಿ ನಿರ್ದೇಶನ ನೀಡಿರಲಿಲ್ಲ. ಹೀಗಾಗಿ ಯಾರನ್ನು ಒಳಗೆ ಬಿಡಬೇಕು, ಯಾರನ್ನು ತಡೆಯಬೇಕು ಎಂಬುದು ಪೊಲೀಸರಿಗೇ ತಿಳಿದಿರಲಿಲ್ಲ.
7. ಬಹಳ ಮುಖ್ಯವಾಗಿ ಪೊಲೀಸರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications