ಕ್ಯೂಬಾದ ಸ್ವಾಭಿಮಾನ ಫಿಡಲ್ ಕ್ಯಾಸ್ಟ್ರೋ ಯುಗಾಂತ್ಯ
ಬೆಂಗಳೂರು, ನವೆಂಬರ್ 26: ಕ್ಯೂಬಾದ ಮಾಜಿ ಅಧ್ಯಕ್ಷ, ಕಮ್ಯುನಿಸ್ಟ್ ಕ್ರಾಂತಿಯ ನಾಯಕ ಫಿಡಲ್ ಕ್ಯಾಸ್ಟ್ರೋ (9೦) ನಿಧನ ಸುದ್ದಿಯನ್ನು ಶನಿವಾರ ಅಲ್ಲಿನ ಸರಕಾರಿ ಟಿವಿ ಘೋಷಿಸಿದೆ. ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಟಿವಿ ಚಾನಲ್ ನೀಡಿಲ್ಲ. ಹತ್ತಿರಹತ್ತಿರ ಐವತ್ತು ವರ್ಷಗಳ ಕಾಲ ಕ್ಯೂಬಾದಲ್ಲಿ ಆಳ್ವಿಕೆ ನಡೆಸಿದ್ದ ಕ್ಯಾಸ್ಟ್ರೋ, 2008ರಲ್ಲಿ ತಮ್ಮ ಸಹೋದರ ರೌಲ್ ಗೆ ಅಧಿಕಾರ ಹಸ್ತಾಂತರಿಸಿದ್ದರು.
ಕ್ಯಾಸ್ಟ್ರೋ ಜನಿಸಿದ್ದು ಆಗಸ್ಟ್ 13, 1926ರಲ್ಲಿ. ಪೂರ್ವ ಕ್ಯೂಬಾದ ಸಣ್ಣ ಪಟ್ಟಣ ಬೈರನ್ ನಲ್ಲಿ. ಕ್ಯೂಬಾದಲ್ಲಿ ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುವಾಗ ಶ್ರೀಮಂತ ಸ್ಪ್ಯಾನಿಷ್ ಕಬ್ಬು ಬೆಳೆಗಾರರಾದ ಕ್ಯಾಸ್ಟ್ರೋ ಅವರ ತಂದೆ ಈ ದ್ವೀಪಕ್ಕೆ ಬಂದಿದ್ದರು, ಹವಾನಾದ ಕಾನೂನು ವಿದ್ಯಾಲಯಕ್ಕೆ ಸೇರಿದ ಕ್ಯಾಸ್ಟ್ರೋ ಅವರಿಗೆ ಅಲ್ಲಿ ರಾಜಕೀಯ ಆಸಕ್ತಿ ಮೊಳೆಯಿತು.[ಕಾಮ್ರೇಡ್ ಫಿಡೆಲ್ ಕ್ಯಾಸ್ಟ್ರೋಗೆ ಲಾಲ್ ಸಲಾಂ..]
ಅಲ್ಲಿ ಭ್ರಷ್ಟಾಚಾರ ವಿರೋಧಿ ಪಕ್ಷವನ್ನು ಸೇರಿದರು. ಡಾಮಿನಿಕನ್ ರಿಪಬ್ಲಿಕ್ ನ ಸರ್ವಾಧಿಕಾರಿ ರಾಫೆಲ್ ಟ್ರುಜಿಲ್ಲೊ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು. 1950ರಲ್ಲಿ ಪದವಿ ಪಡೆದ ನಂತರ ಕಚೇರಿ ಆರಂಭಿಸಿದ ಕ್ಯಾಸ್ಟ್ರೋ, ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದರು. ಅದರೆ ಚುನಾವಣೆಯೇ ನಡೆಯೋದಿಲ್ಲ. ಆ ಸನ್ನಿವೇಶಕ್ಕೆ ಸ್ಪಂದಿಸಿದ ಅವರು, ಕ್ರಾಂತಿಗೆ ಯೋಜನೆ ಮಾಡಿದರು.

ಹದಿನೈದು ವರ್ಷ ಜೈಲು
1953ರಲ್ಲಿ 120 ಮಂದಿಯನ್ನು ಒಟ್ಟು ಮಾಡಿಕೊಂಡು ಸಾಂಟಿಯಾಗೋ ಡಿ ಕ್ಯೂಬಾದ ಮೊಂಕಾಡ ಸೇನಾ ನೆಲೆ ಮೇಲೆ ದಾಳಿ ಮಾಡಿದರು ಕ್ಯಾಸ್ಟ್ರೋ. ಅಲ್ಲಿ ಅವರನ್ನು ಬಂಧಿಸಿ, ಹದಿನೈದು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು, 1955ರಲ್ಲಿ ಬಿಡುಗಡೆ ಆದ ಅವರು, ಮೆಕ್ಸಿಕೋಗೆ ಹೋಗಿ ಸಹ ಕ್ರಾಂತಿಕಾರಿ ಚೆ ಗುವೆರಾನ ಭೇಟಿಯಾಗಿ, ಕ್ಯೂಬಾಗೆ ಹಿಂತಿರುಗಲು ಯೋಜನೆ ರೂಪಿಸಿದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
ಸಹೋದರ ರೌಲ್, ಚೆಗುವೆರಾ ಇತರ 81 ಮಂದಿ ಜತೆಗೆ ಕ್ಯೂಬಾದ ಪೂರ್ವ ಕಡಲತೀರಕ್ಕೆ ಬಂದರು. ಅವರ ಪುಟ್ಟ ತಂಡದ ಮೇಲೆ ದಾಳಿಯಾಗಿ, ಕೊನೆಗೆ ಹದಿನೆಂಟು ಮಂದಿ ಉಳಿದುಕೊಂಡರು. 1957ರಲ್ಲಿ ಮತ್ತೆ ಹೊಸ ತಂಡ ಕಟ್ಟಿಕೊಳ್ಳುವ ಅವರು, 1959ರಲ್ಲಿ ಹವಾನಾಗೆ ಬಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಅಮೆರಿಕಾ ಜತೆ ಐತಿಹಾಸಿಕ ಕದನ
ಆ ನಂತರ ಅಮೆರಿಕಾ ಜತೆಗಿನ ಕ್ಯಾಸ್ಟ್ರೋ ಕದನ ಐತಿಹಾಸಿಕವಾದದ್ದು. ಫಿಡಲ್ ಕ್ಯಾಸ್ಟ್ರೋ ಕಾನೂನು ತಾರತಮ್ಯವನ್ನು ನಿವಾರಿಸಿದರು. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ತಂದರು. ಉದ್ಯೋಗ ಹಾಗೂ ಆರೋಗ್ಯ ಸುರಕ್ಷತೆ ಒದಗಿಸಿದರು.

ವಿರೋಧಿಗಳು ಜೈಲಿಗೆ
ಇವೆಲ್ಲ ಒಂದು ಕಡೆಯಾಯಿತು. ವಿಪಕ್ಷಗಳ ನಾಯಕರು ನಡೆಸುತ್ತಿದ್ದ ಪತ್ರಿಕೆಗಳ ವಿರುದ್ಧ ತುಂಬ ಕಠಿಣವಾಗಿ ನಡೆದುಕೊಳ್ಳುತ್ತಿದ್ದ ಅವರು, ಎಷ್ಟೋ ಮಂದಿ ವಿರೋಧಿಗಳನ್ನು ಜೈಲಿಗೆ ಅಟ್ಟಿದ್ದರು.

ಭೂಮಿ ಮಾಲೀಕತ್ವಕ್ಕೆ ಮಿತಿ
ಖಾಸಗಿ ವ್ಯಾಪಾರಗಳಿಗೆ ನಿಷೇಧ ಹೇರಿದ್ದ ಕ್ಯಾಸ್ಟ್ರೋ, ಭೂಮಿ ಮಾಲೀಕತ್ವ ವಿಚಾರದಲ್ಲಿ ಮಿತಿ ಹೇರಿದ್ದರು. ಲ್ಯಾಟಿನ್ ಅಮೆರಿಕಾ, ಆಫ್ರಿಕಾ ದೇಶಗಳಲ್ಲಿ ನಡೆಯುತ್ತಿದ್ದ ಎಡಪಂಥೀಯ ಗೆರಿಲ್ಲಾ ಹೋರಾಟಗಳಿಗೆ ಆರ್ಥಿಕ ಹಾಗೂ ಸೇನೆ ನೆರವು ಒದಗಿಸಿದ್ದರು. ಸೋವಿಯತ್ ಒಕ್ಕೂಟ ಛಿದ್ರವಾದಾಗ ಕ್ಯೂಬಾದ ಆರ್ಥಿಕತೆ ಕೂಡ ಕುಸಿತ ಕಂಡಿತ್ತು.

ಸಹೋದರನಿಗೆ ಅಧಿಕಾರ ಹಸ್ತಾಂತರ
2006ರಲ್ಲಿ ಕ್ಯಾಸ್ಟ್ರೋ ಕರುಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾದಾಗ ತಾತ್ಕಾಲಿಕವಾಗಿ ತಮ್ಮ ಸಹೋದರ ರೌಲ್ ಗೋ ತಾತ್ಕಾಲಿಕವಾಗಿ ಜವಾಬ್ದಾರಿ ವಹಿಸಿದ್ದರು. 2008ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸಂಪೂರ್ಣ ಜವಾಬ್ದಾರಿಯನ್ನು ರೌಲ್ ಗೆ ವಹಿಸಿಕೊಟ್ಟಿದ್ದರು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications