ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು

By Prasad
|
Google Oneindia Kannada News

ಶಿಕಾಗೋ, ಜೂ. 15 : Selfieಗೆ ಫೇಸ್ ಬುಕ್ ಸ್ನೇಹಿತರು 'ಸ್ವಂತಿ' ಅಂತ ಹೆಸರಿಟ್ಟಿದ್ದಾರೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ವಿರಾಜಮಾನವಾಗಿರುವ ಈ ಜಮಾನಾದಲ್ಲಿ ಯಾರು 'ಸ್ವಂತಿ' ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಹೇಳಿ? 'ಪ್ರತಿಯೊಬ್ಬರೂ' ಸೆಲ್ಫಿಯನ್ನು ತಗೊಂಡು ಫೇಸ್ ಬುಕ್ಕಿನಲ್ಲಿ ಹಾಕಿದ್ದೇ ಹಾಕಿದ್ದು, ವಾಟ್ಸಾಪಲ್ಲಿ ಕಳಿಸಿದ್ದೇ ಕಳಿಸಿದ್ದು!

ಇದನ್ನು ಓದೋದುತ್ತಲೇ ಮತ್ತೆ ಹುಮ್ಮಸ್ಸು ಬಂದು, ಸೆಲ್ಫಿ ಮೋಡಿಗೆ ಸೆಟ್ಟಿಂಗನ್ನು ಬದಲಾಯಿಸಿ ನಿಮ್ಮ 'ಸುಂದರ'ವಾದ ಮುಖದ ಸ್ವಂತಿ ತೆಗೆದುಕೊಳ್ಳುವ ಮುನ್ನ ಮುಂದಿನದನ್ನು ಸ್ವಲ್ಪ ಓದಿಬಿಡಿ. ನಂತರ ಸೆಲ್ಫಿ ತೆಗೆದುಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು.

ದಿ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ (APA) ಸ್ಥೂಲವಾಗಿ ಅಧ್ಯಯನ ಮಾಡಿದ್ದು, ಸೆಲ್ಫಿ ತೆಗೆದುಕೊಳ್ಳುವುದು ಒಂದು ಮಾನಸಿಕ ಕಾಯಿಲೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದರೆ, ಸೆಲ್ಫಿ ತೆಗೆದುಕೊಳ್ಳುವವರು ಮಾನಸಿಕ ರೋಗಿಗಳು! [ಸೆಲ್ಫಿ ಮೋಹಿ ನರೇಂದ್ರ ಮೋದಿ]

Clicking selfie is mental disorder American Psychiatric Association

ಈ ರೋಗವನ್ನು ಸೆಲ್ಫೈಟಿಸ್ (selfitis) ಎಂದು ಎಪಿಎ ಹೆಸರಿಸಿದೆ. ಇದರ ಅರ್ಥವೇನೆಂದರೆ, ಸ್ವಂತ ಫೋಟೋವನ್ನು ತೆಗೆದುಕೊಳ್ಳುವುದು ವ್ಯಕ್ತಿಗತವಾದ ಒಂದು ಗೀಳು. ಮತ್ತು ಆತ್ಮಗೌರವವಿಲ್ಲದವರು ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ.

ಇಲ್ಲಿ ಮೂರು ವಿಧವಾದ ಮಾನಸಿಕ ಕಾಯಿಲೆಗಳಿವೆ

* ಬಾರ್ಡರ್ಲೈನ್ ಸೆಲ್ಫೈಟಿಸ್ (Borderline Selfitis) : ಸ್ವಂತದ ಮೂರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದು ಮತ್ತು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳದಿರುವುದು.

* ಅಕ್ಯೂಟ್ ಸೆಲ್ಫೈಟಿಸ್ (Acute Selfitis) : ತನ್ನ ಸ್ವಂತ ಮುಖದ ಮೂರು ಫೋಟೋಗಳನ್ನು ತೆಗೆದುಕೊಳ್ಳುವುದು ಮತ್ತು ಅದನ್ನು ಒಂದೊಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು.

* ಕ್ರಾನಿಕ್ ಸೆಲ್ಫೈಟಿಸ್ (Chronic Selfitis) : ನಿಯಂತ್ರಣವಿಲ್ಲದಂತೆ ಯಾವಾಗಲೂ ತನ್ನದೇ ಸೆಲ್ಫಿ ತಗೆದುಕೊಳ್ಳುತ್ತಿರುವುದು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕನಿಷ್ಠ ಆರು ಬಾರಿ ಪೋಸ್ಟ್ ಮಾಡುವುದು.

ಸೆಲ್ಫಿ ಹುಚ್ಚಿರುವ ವೀರರೆ, ನೀವು ಯಾವ ಕೆಟಗರಿಗೆ ಸೇರುತ್ತೀರೆಂದು ನೀವೇ ನಿರ್ಧರಿಸಿ. ಅಥವಾ ಇದನ್ನು ಮಾನಸಿಕ ಕಾಯಿಲೆ ಅಂದ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ನವರೇ ಹುಚ್ಚರಾ? ಹಾಹಾಹಾ!

English summary
Do you take selfies? Do you post your selfies on social media? Then, think twice before taking your selfie and posting it on social media. Because, American Psychiatric Association has officially announced it as mental disorder. APA has made some interesting observations on it. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X