Get Updates
Get notified of breaking news, exclusive insights, and must-see stories!

ಸೇನೆ-ಉಗ್ರರ ಸಂಘರ್ಷದಲ್ಲಿ 2 ಸೈನಿಕರು, 4 ಭಯೋತ್ಪಾದಕರ ಸಾವು

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್ಕೌಂಟರಿನಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದು ಇಬ್ಬರು ಪೊಲೀಸ್ ಗಾಯಗೊಂಡಿದ್ದಾರೆ.

ಶ್ರೀನಗರ, ಫೆಬ್ರವರಿ 12: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಭೀಕರ ಎನ್ಕೌಂಟರಿನಲ್ಲಿ ಇಬ್ಬರು ಸೈನಿಕರು ಪ್ರಾಣ ಕಳೆದುಕೊಂಡಿದ್ದು ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನೂ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ನಾಲ್ವರು ಹಿಜ್ಬುಲ್ಲಾ ಮುಜಾಹಿದ್ದೀನ್ ಬಂಡುಕೋರರನ್ನೂ ಸೈನಿಕರು ಹೊಡೆದುರುಳಿಸಿದ್ದಾರೆ. ಕುಲ್ಗಾಮಾ ಜಿಲ್ಲೆಯ ನೌಪೊರಾ ಯಾರಿಪೊರಾ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆಯುತ್ತಿದೆ. [ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ]

Jammu and Kashmir: 2 army jawans, 4 Hizbul millitants killed in an encounter

ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ಸೇನೆ ಮತ್ತು ಕಾಶ್ಮೀರ ವಿಶೇಷ ಪೊಲೀಸ್ ಪಡೆಗಳ ಅಧಿಕಾರಿಗಳು ಮೌಪೊರಾ ಗ್ರಾಮದಲ್ಲಿ ದಾಳಿ ನಡೆಸಿದ್ದರು. ಪೊಲೀಸರು ಮತ್ತು ಸೈನಿಕರು ಮನೆ ಪಕ್ಕ ಬರುತ್ತಿದ್ದಂತೆ ಬಂಡುಕೋರರು ತಾವು ಅಡಗಿಕೊಂಡಿದ್ದ ಮನೆಯಿಂದ ಗುಂಡಿನ ದಾಳಿ ಆರಂಭಿಸಿದ್ದಾರೆ. ಸ್ಥಳದಲ್ಲಿ ಸೈನಿಕರು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಎನ್ಕೌಂಟರಿನಲ್ಲಿ ಸಾವಿಗೀಡಾದ ಇಬ್ಬರು ಬಂಡುಕೋರರನ್ನು ಮುದಾಸಿರ್ ತಾಂತರಿ ಮತ್ತು ಮಹಮ್ಮದ್ ಹಾಶಿಮ್ ಎಂದು ಗುರುತಿಸಲಾಗಿದೆ. ಸಾವಿಗೀಡಾದವರಿಂದ ನಾಲ್ಕು ರೈಫಲ್ ಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಉಗ್ರರ ಗುರುತು ಪತ್ತೆಯಾಗಿಲ್ಲ. [ಜನರ ಜೀವ ಕಸಿಯುತ್ತಿದೆ ಜಮ್ಮು-ಕಾಶ್ಮೀರದ ಹಿಮ ಕುಸಿತ!]

ಸ್ಥಳದಲ್ಲಿ ಎನ್ಕೌಂಟರ್ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+