ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಮುಂದೆ ಮಂಕಾದ ಟಿಸಿಎಸ್ Q2 ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಅ.14: ದೇಶದ ಅಗ್ರಗಣ್ಯ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ಎರಡನೇ ತ್ರ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 6,055 ಕೋಟಿ ರು ನಿವ್ವಳ ಲಾಭ ಗಳಿಸಿದೆ. ಅದರೆ, ಆದಾಯ ಗಳಿಕೆ ನಿರೀಕ್ಷಿತ ಮಟ್ಟ ಮುಟ್ಟಲಾಗದೆ ಇನ್ಫೋಸಿಸ್ ವರದಿ ಮುಂದೆ ಮಂಕಾಗಿದೆ.

ತ್ರೈಮಾಸಿಕ ದಿಂದ ತ್ರೈಮಾಸಿಕ ಅವಧಿಗೆ ಶೇ 5.8ರಷ್ಟು ಆದಾಯ ಏರಿಕೆ ಕಂಡು 27,165 ಕೋಟಿ ರು ಬಂದಿದೆ. ಡಾಲರ್ ಆದಾಯ ಶೇ 3ರಷ್ಟು ಏರಿಕೆ ಕಂಡು 4156 ಮಿಲಿಯನ್ ಡಾಲರ್ ನಷ್ಟಿದೆ. [Q2: ಇನ್ಫಿಗೆ ನಿರೀಕ್ಷೆಗೂ ಮೀರಿದ ಲಾಭ, ಭರ್ಜರಿ ಆದಾಯ]

ಇದಕ್ಕೆ ಹೋಲಿಸಿದರೆ ಇನ್ಫೋಸಿಸ್ ನ ಡಾಲರ್ ಅದಾಯ ಪ್ರಗತಿ ದರ ಶೇ 6ರಷ್ಟಿದೆ. ಅದರೆ, ಲಾಭ ಶೇ 6.5 ರಂತೆ 6,052 ಕೋಟಿ ರು ಹಾಗೂ ಆದಾಯ ಶೇ 6.1ರಂತೆ 27,320 ಕೋಟಿ ರು ನಿರೀಕ್ಷಿಸಲಾಗಿತ್ತು.

TCS Q2 Net Profits At Rs 6055 Crores

ಟಿಸಿಎಸ್ ಸಂಸ್ಥೆ ಬೋರ್ಡ್ ಆಫ್ ಡೈರೆಕ್ಟರ್ ಗಳು ಉದ್ಯೋಗಿಗಳಿಗೆ 5.5 ಪ್ರತಿ ಷೇರಿನಂತೆ ಡಿವಿಡೆಂಡ್ ಘೋಷಿಸಿದ್ದಾರೆ. ಆಟ್ರಿಷನ್ ಪ್ರಮಾನ ಶೇ 16.2ರಷ್ಟಿದೆ. [ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!]

ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸುಮಾರು 30,000ಕ್ಕೂ ಅಧಿಕ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನದ ತರಬೇತಿ ಸಿಕ್ಕಿದೆ. 100 ಮಿಲಿಯನ್ ಯುಎಸ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಮೂರು ಕಂಪನಿ ಹಾಗೂ 10 ಮಿಲಿಯನ್ ಯುಎಸ್ ಡಿ ವರ್ಗದ ಆರು ಗ್ರಾಹಕರನ್ನು ಈ ಅವಧಿಯಲ್ಲಿ ಟಿಸಿಎಸ್ ಪಡೆದುಕೊಂಡಿದೆ ಎಂದು ಸಿಇಒ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ತ್ರೈಮಾಸಿಕ ಅವಧಿಯಲ್ಲಿ ಒಟ್ಟು 25,186 ಉದ್ಯೋಗಿಗಳನ್ನು ಸೇರಿಸಿಕೊಳ್ಳಲಾಗಿದ್ದು, ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 3,35,620ಕ್ಕೇರಿದೆ. ನಿರೀಕ್ಷಿತ ಮಟ್ಟದ ಆದಾಯ ಗಳಿಸದಿದ್ದರೂ ಪ್ರಸಕ್ತ ವರ್ಷದಲ್ಲಿ ನೇಮಕಾತಿ ಸಂಖ್ಯೆಯನ್ನು ಹೆಚ್ಚಿಸಲು ಟಿಸಿಎಸ್ ನಿರ್ಧರಿಸಿದೆ. ಈ ಆರ್ಥಿಕ ವರ್ಷದಲ್ಲಿ 60,000ಕ್ಕೆ ಬದಲಾಗಿ 75,000 ಹೊಸ ನೇಮಕಾತಿ ಮಾಡಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ.

English summary
India's largest software services provider, Tata Consultancy Services reported a net profit of Rs 6055 crores for the quarter ending June 30, 2015, which largely met estimates. Revenue grew by 5.8 percent quarter-on-quarter to Rs 27,165 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X