ಎಸ್ ಬಿಐನಿಂದ ಬಡ್ಡಿದರ ಕಡಿತ, ಸಾಲ ಮಾಡಿ ತುಪ್ಪ ತಿನ್ನಿ!
ಮುಂಬೈ, ಸೆ. 30: ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ರೆಪೋ ದರವನ್ನು ಶೇ.0.5ರಷ್ಟು ಇಳಿಕೆ ಮಾಡಿದ ಬೆನ್ನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ ಮಾಸಿಕ ಕಂತುಗಳ ಮೇಲಿನ ಬಡ್ಡಿ ದರವನ್ನು ಶೇ.9.3ಕ್ಕೆ ಕಡಿತಗೊಳಿಸಿದೆ. ಇದರಿಂದ ಮನೆ, ವಾಹನ ಕೊಳ್ಳಲು ಸಾಲ ಪಡೆಯುವವರಿಗೆ ಅನುಕೂಲವಾಗಲಿದೆ.
ಎಸ್ಬಿಐ ಸದ್ಯ ಮಹಿಳೆಯರಿಗೆ ಕೊಡುವ ಗೃಹ ಸಾಲದ ಮೇಲೆ ಶೇ.9.7ರಷ್ಟು ಬಡ್ಡಿ ವಿಧಿಸುತ್ತಿದೆ. ಇತರರಿಗೆ ಶೇ.9.75ರಷ್ಟು ಬಡ್ಡಿ ವಿಧಿಸುತ್ತಿದೆ. ಬಡ್ಡಿ ದರದ ಕಡಿತದಿಂದಾಗಿ ಅದೀಗ ಕ್ರಮವಾಗಿ ಶೇ.9.3 ಮತ್ತು ಶೇ.9.35ಕ್ಕೆ ಇಳಿಕೆಯಾಗಲಿದೆ. ಇದರ ಜೊತೆಗೆ ನಿಶ್ಚಿತ ಠೇವಣಿ (fixed deposit) ಮೇಲಿನ ಠೇವಣಿ ದರವನ್ನು ಶೇ 0.25ರಷ್ಟು ತಗ್ಗಿಸಲಾಗಿದೆ. ಕಡಿತಗೊಂಡ ಬಡ್ಡಿ ದರಗಳು ಅಕ್ಟೋಬರ್ 5ರಿಂದ ಜಾರಿಗೆ ಬರಲಿದೆ ಎಂದು ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
ರೆಪೋ ದರ ಇಳಿಕೆಯಾದ ಕೂಡಲೇ ಬ್ಯಾಂಕುಗಳು ಬಡ್ಡಿದರ ಇಳಿಕೆ ಮಾಡಬೇಕು ಎಂಬ ನಿಯಮವೇನು ಇಲ್ಲ. ಅದರೆ, ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ಈ ರೀತಿ ಕ್ರಮ ಹಾಗೂ ಆರ್ ಬಿಐ ನಿಂದ ಕೊಳ್ಳುವ ದರ ಸಮತೋಲನ ಕಾಯ್ದುಕೊಳ್ಳಲು ಅನಿವಾರ್ಯ ಕ್ರಮವಾಗಿದೆ. [ರೆಪೋ 50 ಮೂಲಾಂಶ ದರ ಕಡಿತ]

ಎಸ್ಬಿಐ ನಂತರ ಆಂಧ್ರ ಬ್ಯಾಂಕ್ ಕೂಡಾ ಸೆ. 30ರಿಂದ ಅನ್ವಯವಾಗುವಂತೆ ಮೂಲಾಂಶದ ಶೇ 0.25ರಷ್ಟು ಅಥವಾ ಶೇ 9.75ಕ್ಕೆ ಬಡ್ಡಿದರವನ್ನು ಇಳಿಕೆ ಮಾಡಿದೆ.
ವಾಹನ ಸಾಲ, ಗೃಹ ಸಾಲ ವಿತರಿಸುವ ಎಚ್ಡಿಎಫ್ಸಿ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಇತರೆ ಪ್ರಮುಖ ಬ್ಯಾಂಕುಗಳು ಕೂಡಾ ಬಡ್ಡಿದರ ಇಳಿಸುವ ನಿರೀಕ್ಷೆ ಇದೆ.(ಪಿಟಿಐ)
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications