ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ Q1: ಆದಾಯ 12%, ಲಾಭ 5% ಏರಿಕೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 21: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಆದಾಯ, ಕೊಂಚ ಲಾಭ ಪಡೆದುಕೊಂಡಿದೆ.

ಬೆಂಗಳೂರು ಮೂಲದ ಸಂಸ್ಥೆ ನಿವ್ವಳ ಆದಾಯ ಈ ತ್ರೈಮಾಸಿಕಕ್ಕೆ ಶೇ12.4ರಷ್ಟು ಏರಿಕೆಯಾಗಿದ್ದು, 14,354 ಕೋಟಿ ರು ನಷ್ಟಿದೆ. ಜೂ 30, 2015ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 3,030 ಕೋಟಿ ರು ನಂತೆ ಶೇ 5ರಷ್ಟು ಆದಾಯ ಪಡೆದುಕೊಂಡಿದೆ.

ಅದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಕಳೆದ 15 ತ್ರೈಮಾಸಿಕದಲ್ಲಿ ಕಾಣದಷ್ಟು ಆದಾಯ ಗಳಿಕೆ ಬಂದಿದೆ. ಶೇ 7ರಷ್ಟು ಆದಾಯ ಏರಿಕೆಯಾಗಿದೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಮೌಲ್ಯ ವರ್ಧನೆ ಶೇ 5.4ರಷ್ಟಿದೆ.

Vishal Sikka

ಜೂನ್ ತ್ರೈಮಾಸಿಕದಲ್ಲಿ ಒಟ್ಟು 6 ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಟಿವಿಸಿ ಜೊತೆ 688 ಮಿಲಿಯನ್ ಡಾಲರ್ ಮಹತ್ವದ್ದಾಗಿದೆ. 79 ಹೊಸ ಕ್ಲೈಂಟುಗಳನ್ನು ಪಡೆಯಲಾಗಿದೆ. ಹೆಚ್ಚೆಚ್ಚು ಹೊಸ ಗ್ರಾಹಕರು ಹೊಸ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ ಎಂದು ಇನ್ಫೋಸಿಸ್ ನ ಸಿಒಒ ಯು.ಬಿ ಪ್ರವೀಣ್ ರಾವ್ ಹೇಳಿದ್ದಾರೆ.

ಸಂಸ್ಥೆಯ ಆಟ್ರಿಷನ್ ದರ ಕಳೆದ ವರ್ಷಕ್ಕೆ ಹೋಲಿಸಿದರೆ ತಗ್ಗಿದ್ದು 24.4 % ನಿಂದ 14.2%ಗೆ ಇಳಿದಿದೆ.

English summary
India’s second largest IT services company Infosys witnessed a 5 per cent growth in its profit at Rs 3,030 crore for the first quarter of FY16 ended June 30, 2015 as against same period last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X