ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ Q4: ನಿರೀಕ್ಷೆ ಮಟ್ಟ ಮುಟ್ಟದೆ ನಿರಾಶೆ

By Mahesh
|
Google Oneindia Kannada News

ಬೆಂಗಳೂರು, ಏ.24: ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಶುಕ್ರವಾರ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ನಿರೀಕ್ಷೆಯಂತೆ ಲಾಭದತ್ತ ಮುಖ ಮಾಡಿರುವ ಇನ್ಫೋಸಿಸ್ ಗೆ 3,097 ಕೋಟಿ ರು ನಿವ್ವಳ ಲಾಭ(ತೆರಿಗೆ ಕಡಿತ ನಂತರ) ಬಂದಿದೆ.

ಕಳೆದ ವರ್ಷ ಇದೇ ಅವಧಿಗೆ ಬಂದಿದ್ದ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 3.5 ರಷ್ಟು ಪ್ರಗತಿ ಸಾಧಿಸಿದೆ. ಅದರೆ, ಮಾರುಕಟ್ಟೆ ತಜ್ಞರ ನಿರೀಕ್ಷೆ ಮಟ್ಟ ಮುಟ್ಟಲಾಗಿಲ್ಲ.[ಇನ್ಫೋಸಿಸ್ ಷೇರುಗಳು ನೆಲಕಚ್ಚುತ್ತಿವೆ ಏಕೆ?]

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟಾರೆ 13,411 ಕೋಟಿ ರು ಆದಾಯ ಸಿಕ್ಕಿದೆ. ಇದೇ ಅವಧಿಗೆ ಹೋಲಿಸಿದರೆ ಶೇ 4.2ರಷ್ಟು ಪ್ರಗತಿ ಕಂಡಿದೆ.

Infosys posts Rs.3,097 crore net for Q4

ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 2015 ಆರ್ಥಿಕ ವರ್ಷ 12,329 ರು ಶೇ 15.8 ರಷ್ಟು ಏರಿಕೆ ಬಂದಿದ್ದರೆ ಆದಾಯ 53,319 ರು ಶೇ 6.4ರಷ್ಟು ಪ್ರಗತಿ ಕಂಡಿದೆ.

Q4ರಲ್ಲಿ ಡಾಲರ್ ಆದಾಯ 498 ಮಿಲಿಯನ್ ಡಾಲರ್ ಇದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 2.3ರಷ್ಟು ಏರಿಕೆ ಕಂಡಿದೆ. ಆದಾಯ 2,159 ಮಿಲಿಯನ್ ಡಾಲರ್ ಶೇ 3.2ರಷ್ಟು ಪ್ರಗತಿ ಬಂದಿದೆ.

ಷೇರುಪೇಟೆ: ಬಿಎಸ್ಇಯಲ್ಲಿ ಶುಕ್ರವಾರ 2,131 ರು ನಂತೆ ಆರಂಭಗೊಂಡ ಇನ್ಫೋಸಿಸ್ ಷೇರುಗಳು 2,081 ರು ನಿಂದ 2,150 ರು ನಂತೆ ಏರಿಳಿತ ಕಂಡಿದೆ.

ನೇಮಕಾತಿ: ಈ ಅವಧಿಯಲ್ಲಿ ಸುಮಾರು 50,000 ಹೆಚ್ಚುವರಿ ನೇಮಕಾತಿ ಆಟ್ರಿಷನ್ ದರ ಶೇ 13.4ಕ್ಕೆ ಇಳಿದಿದೆ. 2015 ಆರ್ಥಿಕ ವರ್ಷದಲ್ಲಿ ಅಂತಿಮ ಡಿವಿಡೆಂಡ್ 29.50 ಪ್ರತಿ ಷೇರಿನಂತೆ ಘೋಷಣೆ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಶೇ 10 ರಿಂದ 12ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಸಿಒಒ ಯು.ಬಿ ಪ್ರವೀಣ್ ರಾವ್ ಹೇಳಿದ್ದಾರೆ.

ಬೋನಸ್ : ಡಿ.31ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸುಮಾರು 5 ರು ಮುಖಬೆಲೆಯ 57,42,36,166 ಷೇರುಗಳನ್ನು ಪಾವತಿಸಲಾಗಿದೆ. 1:1 ಅನುಪಾತದಲ್ಲಿ ಎಲ್ಲರಿಗೂ ಬೋನಸ್ ಘೋಷಿಸಲಾಗಿದೆ.

ಉತ್ತರ ಅಮೆರಿಕದಲ್ಲಿ ಆದಾಯ ಶೇ 0.7, ಯುರೋಪಿನಲ್ಲಿ ಶೇ 6.1ರಷ್ಟು ಕುಂಠಿತಗೊಂಡಿದೆ. ಯುಎಸ್ ಮೂಲದ ಕಾಲಿಡಸ್ ಐಎನ್ ಸಿ ಸಂಸ್ಥೆ ಖರೀದಿ ಡೀಲ್ ಗೆ ಸಹಿ ಹಾಕಿದೆ. ಸುಮಾರು 120 ಮಿಲಿಯನ್ ಡಾಲರ್ ಡೀಲ್ ಇದಾಗಿದೆ. ಏರ್ ವಿಜ್ ನಲ್ಲಿ 2 ಮಿಲಿಯನ್ ಡಾಲರ್ ತೊಡಗಿಸುತ್ತಿದೆ. ಹೊಸ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 500 ಮಿಲಿಯನ್ ಡಾಲರ್ ಮೀಸಲಿಟ್ಟಿದೆ ಎಂದು ಪ್ರವೀಣ್ ರಾವ್ ವಿವರಿಸಿದರು.

English summary
Software major Infosys Ltd on Friday reported net profit of Rs.3,097 crore for the fourth quarter of the fiscal 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X