Get Updates
Get notified of breaking news, exclusive insights, and must-see stories!

ಎಚ್ ಸಿಎಲ್ ಸಂಸ್ಥೆಗೆ ಈ ವರ್ಷ ಶೇ 14ರಷ್ಟು ನಿವ್ವಳ ಲಾಭ

ಬೆಂಗಳೂರು, ಆಗಸ್ಟ್ 03: ಸಾಫ್ಟ್ ವೇರ್ ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್ 2015-16ರ ಆರ್ಥಿಕ ವರ್ಷದಲ್ಲಿ 7,254 ಕೋಟಿ ರು ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಶೇ 14ರಷ್ಟು ಪ್ರಗತಿ ಕಂಡಿದೆ ಎಂದು ಸೋಮವಾರ ಪ್ರಕಟಿಸಲಾಗಿದೆ.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ ಇ) ಗೆ ನೀಡಿದ ಮಾಹಿತಿಯಂತೆ 2015ರ ಆರ್ಥಿಕ ವರ್ಷವೊಂದರಲ್ಲೇ ವರ್ಷದಿಂದ ವರ್ಷಕ್ಕೆ (Y0Y) ಲೆಕ್ಕಾಚಾರದಲ್ಲಿ ಶೇ 12.6ರಷ್ಟು ಏರಿಕೆ ಕಂಡು 37,061 ಆದಾಯ ಗಳಿಸಿದೆ.

HCL net profit up 14 per cent in 2015-16

ಎಚ್ ಸಿಎಲ್ ನ ನಾಲ್ಕನೇ ತ್ರೈಮಾಸಿಕ (ಏಪ್ರಿಲ್- ಜೂನ್ ) ವರದಿಯಲ್ಲಿ ನಿವ್ವಳ ಲಾಭ ಶೇ 2.8ರಷ್ಟು ಇಳಿಕೆಯಾಗಿ 1,783 ಕೋಟಿ ರು ರಷ್ಟಿದ್ದರೆ, ಆದಾಯ ಶೇ 16ರಷ್ಟು ಏರಿಕೆ ಕಂಡು ವರ್ಷದಿಂದ ವರ್ಷಕ್ಕೆ 9,777 ಕೋಟಿ ರು ಏರಿಕೆಯಾಗಿದೆ.

ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕ ಫಲಿತಾಂಶಕ್ಕೆ ಹೋಲಿಸಿದರೆ ನಿವ್ವಳ ಲಾಭ ಶೇ 5.5ರಿಂದ ಶೇ 5.9ಕ್ಕೆ ಏರಿಕೆಯಾಗಿದೆ. ನೋಯ್ಡಾ ಮೂಲದ ಕಂಪನಿ ಆರ್ಥಿಕ ವರ್ಷ ಜುಲೈ ಹಗೂ ಜೂನ್ ಕ್ಯಾಲೆಂಡರ್ ಮಾದರಿಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಇತರೆ ಸಾಫ್ಟ್ ವೇರ್ ಕಂಪನಿಗಳ ಮೊದಲ ತ್ರೈಮಾಸಿಕ ವರದಿ ಫಲಿತಾಂಶ ಬರುವ ವೇಳೆಗೆ ಎಚ್ ಸಿಎಲ್ ತನ್ನ ವಾರ್ಷಿಕ ವರದಿ ನೀಡುತ್ತದೆ.( ಐ ಎ ಎನ್ ಎಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+