ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿನ್‌ಗೆ ಯೋಗ ಕಲಿಸಿದ ಬೆಂಗಳೂರಿನ ಡಾ. ಓಂಕಾರ್ ಸಂದರ್ಶನ

By ಮೈತ್ರೇಯಿ ಬರುವಾ
|
Google Oneindia Kannada News

ಇಡೀ ವಿಶ್ವಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ. ಈ ಸಂದರ್ಭದಲ್ಲಿ ಯೋಗ ಗುರುಗಳನ್ನು ನೆನಪು ಮಾಡಿಕೊಳ್ಳಲೇಬೇಕು. ಬೆಂಗಳೂರಿನ ಯೋಗಗುರು ಡಾ. ಎಸ್ ಎನ್ ಓಂಕಾರ್ ಅವರನ್ನು ಒನ್ ಇಂಡಿಯಾ ಯೋಗ ದಿನದ ಸಂದರ್ಭ ಸಂದರ್ಶನ ಮಾಡಿದೆ.

ಒಂಕಾರ್ ಸದ್ಯ ಇಂಡಿಯನ್ ಇನ್ ಸ್ಟಿಟ್ಯೂಟ್ ನ ಏರೋಸ್ಪೇಸ್ ವಿಭಾಗದಲ್ಲಿ ಮುಖ್ಯ ಇಂಜಿನಿಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ , ಗೋಡೆ ರಾಹುಲ್ ದ್ರಾವಿಡ್, ಪಿಟಿ ಉಷಾ ಸೇರಿದಂತೆ ಅನೇಕ ಕ್ರೀಡಾಪಟುಗಳ ಯೋಗ ಗುರುವಾಗಿಯೂ ಓಂಕಾರ್ ಸಾಧನೆ ಮಾಡಿದ್ದಾರೆ. ಓಂಕಾರ್ ಅವರು ಯೋಗ ಬಗ್ಗೆ ಇಟ್ಟುಕೊಂಡ ಪರಿಕಲ್ಪನೆಯನ್ನು ಅವರ ಮಾತುಗಳಲ್ಲೇ ಕೇಳಿ...[ಇಚ್ಛಾಶಕ್ತಿ ಪ್ರಚೋದಿಸಲು ಶಾಸ್ತ್ರಬದ್ಧ ಯೋಗಾಸನ, ಪ್ರಾಣಾಯಾಮ]

yoga

'ಕಳೆದ ನಾಲ್ಕು ದಶಕಗಳಿಂದ ಯೋಗ ಸಾಧನೆಯಲ್ಲಿ ತೊಡಗಿದ್ದೇನೆ. ಅನೇಕರಿಗೆ ಮಾರ್ಗದರ್ಶನ ಮಾಡಿದ್ದೇನೆ. ಯೋಗ ಇಂದಿನಷ್ಟು ಪ್ರಖ್ಯಾತವಿರದ ಕಾಲದಲ್ಲಿ ನಾನು ಯೋಗದ ಮಹತ್ವ ಅರಿತು ಅದರೆಡೆಗೆ ಆಕರ್ಷಿತನಾಗಿದ್ದೆ.

ನಾನು ಯೋಗದ ಆಸನ, ಪ್ರಾಣಾಯಾಮ ಮತ್ತು ಪತಂಜಲಿ ಯೋಗ ಸೂತ್ರವನ್ನು ಜನರಿಗೆ ಹೇಳಿಕೊಡುತ್ತಿದ್ದೇನೆ. ಯೋಗ ವಿಜ್ಞಾನವಲ್ಲ, ಯೋಗ ವಿಜ್ಞಾನವನ್ನು ಮೀರಿದ್ದು. ನಾನು ಮೂಲತಃ ವಿಜ್ಞಾನದ ವ್ಯಕ್ತಿಯಾಗಿದ್ದರಿಂದ ಯೋಗವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಲು ಸಾಧ್ಯವಾಯಿತು.[ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

"ಓಂ" ಶಬ್ದದ ಆಳವನ್ನು ಅರಿತರೆ ಅದರ ಮಹತ್ವ ನಮಗೆ ತನ್ನಿಂದ ತಾನೇ ಗೊತ್ತಾಗುತ್ತದೆ. ಸೂರ್ಯ ನಮಸ್ಕಾರ ಅಥವಾ ಇನ್ನಿತರ ವೇಳೆಯಲ್ಲಿ 'ಓಂ' ಬಳಕೆಯನ್ನು ಸೀಮಿತ ಮಾಡುವುದು ಸರಿಯಲ್ಲ. ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧ ಮಾಡಲು ಕಾರಣವಾಗುವ ಶಬ್ದಕ್ಕೆ ಬೇರೆಯ ಬಣ್ಣ ಹಚ್ಚುವುದು ಸರಿ ಕಾಣುವುದಿಲ್ಲ.[ಸ್ಮಾರ್ಟ್ ಫೋನ್‌ನ ಬಳಕೆದಾರರಿಗಾಗಿ 'ಸ್ಮಾರ್ಟ್' ಯೋಗ!]

yoga

ನಾನು ಬ್ರೀಜೇಶ್ ಪಟೇಲ್ ಅಕಾಡೆಮಿಗೆ ಯೋಗ ಕೋಚ್ ಆಗಿ ನೇಮಕವಾದೆ. ಅದಾದ ಮೇಲೆ ಕರ್ನಾಟಕ ಕ್ರಿಕೆಟ್ ಮಂಡಳಿ ನನ್ನನ್ನು ಯೋಗ ಕೋಚ್ ಎಂದು ನೇಮಕ ಮಾಡಿಕೊಂಡಿತು. ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ರ ಸಂಪರ್ಕ ಸಿಕ್ಕಿದ್ದು ಇದೆ ವೇಳೆ.
1997-98, 1998-99 ರ ವೇಳೆ ಕರ್ನಾಟಕ ರಣಜಿ ತಂಡ ನಿರಂತರವಾಗಿ ಯೋಗ ಅಭ್ಯಾಸ ಮಾಡಿತು. ಪರಿನಾಮ ಎರಡು ರಣಜಿ ಟ್ರೋಫಿಗಳನ್ನು ತನ್ನದಾಗಿರಿಸಿಕೊಂಡಿತು.[ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]

ಜಾನ್ ರೈಟ್ ಭಾರತದ ಕೋಚ್ ಆಗಿದ್ದಾಗ ಯೋಗವನ್ನು ಆಟಗಾರರಿಗೆ ಪರಿಚಯ ಮಾಡಿಕೊಡಲಾಯಿತು. ನಾನು ಅಂಡರ್ 16, ಅಂಡರ್ 19 ತಂಡದ ಆಟಗಾರರಿಗೂ ನಂತರ ಯೋಗ ಗುರುವಾದೆ..

ಪೂರ್ಣ ಸಂದರ್ಶನಕ್ಕೆ ಇಲ್ಲಿ ಕ್ಲಿಕ್ ಮಾಡಿ

English summary
On the occasion of the International Yoga Day, observed across the globe on June 21 (Tuesday), OneIndia spoke to Dr SN Omkar, a well-known yoga exponent from Bengaluru. The yoga guru is also a scientist and currently works as the chief research scientist at the department of aerospace engineering in the prestigious Indian Institute of Science (IISc), Bengaluru. Omkar, who taught yoga to sporting legends like Sachin Tendulkar, Rahul Dravid and PT Usha, tells us why yoga has nothing to do with religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X