ತಂದೆಯ ಮೃತದೇಹ ದಾನ ಮಾಡಿದ ಶಾಲಿನಿ ರಜನೀಶ್

ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎ ಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.

Subscribe to Oneindia Kannada

ಬೆಂಗಳೂರು ಮಾರ್ಚ್ 21: ಆದರ್ಶದ ಕತೆ ಹೇಳುವ ಹಲವು ಐಎ ಎಸ್ ಆಫೀಸರ್ ಗಳನ್ನು ನೋಡಿದ್ದೇವೆ. ಆದರೆ ಆದರ್ಶವನ್ನು ಸ್ವತಃ ಪಾಲಿಸುವವರು ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ. ಅಂಥ ಅಧಿಕಾರಿಗಳಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಮಹಿಳಾ ಐಎ ಎಸ್ ಅಧಿಕಾರಿ ಶಾಲಿನಿ ರಜನೀಶ್ ಸಹ ಒಬ್ಬರು.

ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎ ಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.[ಶವಚ್ಛೇದ : ಅಪ್ಪನ ಆಸೆ ಈಡೇರಿಸಿದ ಮಗ]

ಪಾಪದ ಭಯ

ಆಯಾ ಮತದ, ಜಾತಿಯ ಸಂಪ್ರದಾಯಕ್ಕನುಸಾರವಾಗಿ ಶವದ ಅಂತ್ಯಕ್ರಿಯೆ ಮಾಡದೇ ಇದ್ದಲ್ಲಿ ಆ ಕುಟುಂಬದ ಜನರು ಪಾಪಕ್ಕೆ ಭಾಜನರಾಗುತ್ತಾರೆ ಎಂಬ ನಂಬಿಕೆ ಬಹುಪಾಲು ಎಲ್ಲ ಮತಗಳಲ್ಲೂ ಇದೆ.[ಬೆಳಗಾವಿ ವೈದ್ಯನಿಂದ ತಂದೆಯ ದೇಹ ಛೇದನ!]

ಶವದ ಕೊರತೆ

ಇದರಿಂದಾಗಿ ಎಲ್ಲ ಮೆಡಿಕಲ್ ಕಾಲೇಜ್ ಗಳೂ ಸಂಶೋಧನೆಗಾಗಿ ಶವದ ಕೊರತೆಯನ್ನು ಎದುರಿಸುತ್ತಿವೆ. 50-60 ಮೆಡಿಕಲ್ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಒಂದು ಶವ ಸಿಕ್ಕುವುದೇ ಕಷ್ಟವಾಗಿದೆ.

ಜಾಗೃತಿ ಕಾರ್ಯಕ್ರಮ

ಸಂಶೋಧನೆಗಾಗಿ ಶವದ ಕೊರತೆಯ ಕುರಿತು ಹಲವು ಮೆಡಿಕಲ್ ಕಾಲೇಜುಗಳು ಈಗಾಗಲೇ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೂ, ಇದರಿಂದ ಹೆಚ್ಚೇನೂ ಪ್ರಯೋಜನವಾದಂತಿಲ್ಲ. ಶವ ಸಂಸ್ಕಾರಕ್ಕಿಂತ ದೇಹ ದಾನ ಅತ್ಯಂತ ಪುಣ್ಯದ ಕೆಲಸ ಎಂಬುದು ಜನರಿಗೆ ಅರಿವಾಗಬೇಕಿದೆ ಎಂಬುದು ಶಾಲಿನಿ ರಜನೀಶ್ ಅವರ ಅಭಿಪ್ರಾಯ.

ಕುಟುಂಬಸ್ಥರ ಒತ್ತಡ

ಹಲವರು ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಸಾವಿನ ನಂತರ ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ನೀಡಲು ಉತ್ಸುಕತೆ ತೋರಿದರೂ ಅವರ ಕುಟುಂಬಸ್ಥರೇ ತಡೆಯುತ್ತಿರುವ ಪರಿಸ್ಥಿತಿ ಹಲವೆಡೆ ಇದೆ.

ಮಗನಿಂದಲೇ ತಂದೆಯ ಅಂಗಚ್ಛೇದ

2010 ರಲ್ಲಿ ಬೆಳಗಾವಿಯ ಕೆ.ಎಲ್.ಇ. ಕಾಲೇಜಿನ ಅಂಗರಚನಾಶಾಸ್ತ್ರ ಸಹಪ್ರಾದ್ಯಾಪಕ ಡಾ. ಮಹಂತೇಶ್ ರಾಮಣ್ಣನವರ್ ತಮ್ಮ ತಂದೆ ಬೈಲಹೊಂಗಲದ ವಾ.ಬಿ.ಎಸ್.ರಾಮಣ್ಣನವರ ಮೃತದೇಹವನ್ನು ತಮ್ಮ ಕಾಲೇಜಿಗೆ ದಾನ ನೀಡಿ, ಸ್ವತಃ ಅಂಗಚ್ಛೇದ ಮಾಡಿ ದಾಖಲೆ ಬರೆದಿದ್ದರು. ಇದು ಇತಿಹಾಸದ ಪುಟ ಸೇರಿತ್ತು.

ಒಂದು ಶವಕ್ಕೆ 10,000 ರೂ.!

ಇಷ್ಟು ದಿನ ಸರ್ಕಾರಿ ಮೆಡಿಕಲ್ ಕಾಲೇಜುಗಳು ರೂ.10,000 ಕ್ಕೆ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಶವ ಪೂರೈಸುತ್ತಿದ್ದವು. ಆದರೆ ಈಗ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲೇ ಶವದ ಕೊರತೆ ಶುರುವಾಗಿದೆ.

English summary
Shalini Rajanish, an IAS officer of Karnataka donated his father's cadaver to Bangalore medical collage and Research Centre. Her father P.P.Chhabra (81) died on Friday (March 17th)
Please Wait while comments are loading...