ರುಪಾಯಿ ಮೌಲ್ಯ ಕುಸಿದರೆ ಜನಸಾಮಾನ್ಯರಿಗೆ ಕೇಡು
ಬೆಂಗಳೂರು, ಜೂ.13: ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಕೆಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ. ಅನಿಲ ದರ, ಎಫ್ ಡಿಐ ಮಿತಿ, ಕಲ್ಲಿದಲು ಗೊಂದಲ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ವಿತ್ತ ಸಚಿವ ಚಿದಂಬರಂ ಭರವಸೆ ನೀಡಿದ್ದಾರೆ.
ಆದರೆ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದರೆ ಜನಸಾಮಾನ್ಯರಿಗೇನು ಏನು ತೊಂದರೆ? ರುಪಾಯಿ ಮೌಲ್ಯ ಕುಸಿದರೆ ಯಾವ ರೀತಿ ಹೊರೆ ಎದುರಿಸಬೇಕಾಗುತ್ತದೆ? ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಸ್ಫೋಟಗೊಳ್ಳುತ್ತದೆಯೇ? ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ.
ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 58.96 ಸರ್ವಕಾಲಿಕ ಕುಸಿತ ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ಎದುರಿಸಬಹುದಾದ ತೊಂದರೆಗಳ ಬಗ್ಗೆ ಒಂದು ನೋಟ ಇಲ್ಲಿದೆ...

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ತೈಲ ಬೆಲೆ ಏರಿಕೆ ಖಂಡಿತ. ನಮ್ಮ ತೈಲ ಕಂಪನಿಗಳು 58.50 ರು ಪ್ರತಿ ಡಾಲರ್ ನಂತೆ ನೀಡಬೇಕಾಗುತ್ತದೆ. ಕಳೆದ ವಾರ 54 ರು ನಷ್ಟಿತ್ತು.
ಹೀಗಾಗಿ ಪೆಟ್ರೋಲ್, ಡೀಸೆಲ್ ಇನ್ನಿತರ ಇಂಧನ ದರ ಏರಿಕೆಗೆ ತಯಾರಾಗಿ. ರುಪಾಯಿ ಮೌಲ್ಯ ಕುಸಿದಾಗ ಇಂಧನ ದರ ಏರಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನ ಸಾಮಾನ್ಯರಿಗೆ ಇದು ಮೊದಲ ಹೊಡೆತ.
ಹಣ ದುಬ್ಬರ ಏರಿಕೆ
ಇಂಧನ ದರ ಏರಿಕೆಯಾಗುತ್ತಿದ್ದಂತೆ ಸರಕು ಸಾರಿಗೆ ವೆಚ್ಚ ದುಬಾರಿಯಾಗುತ್ತದೆ. ದಿನ ನಿತ್ಯ ಬಳಸುವ ತರಕಾರಿ, ಹಣ್ಣು ಹಂಪಲು ಬೆಲೆ ಗಗನಕ್ಕೇರುತ್ತದೆ. ಈಗಾಗಲೇ ತರಕಾರಿ ಬೆಲೆ ಏರಿಕೆಯಿಂದ ಜನ ಕಷ್ಟಪಡುತ್ತಿದ್ದಾರೆ. ಆಹಾರ ಹಾಗೂ ರೀಟೈಲ್ ಕ್ಷೇತ್ರದ ಎಲ್ಲಾ ಉತ್ಪನ್ನಗಳ ಬೆಲೆ ಏರಿಕೆ ಖಾತ್ರಿ.
ಡಾಲರ್ ಎದುರು ರುಪಾಯಿ ಮೌಲ್ಯ ಶೇ 10 ರಷ್ಟು ಕುಸಿದರೂ ಹಣ ದುಬ್ಬರ ದರ ಶೇ 0.60 ರಷ್ಟು ಏರಿಕೆಯಾಗುತ್ತದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಜೊತೆ ಪ್ರತಿ ರಾಜ್ಯಗಳ ಪ್ರತ್ಯೇಕ ವ್ಯಾಟ್ ತೆರಿಗೆ ಸೇರಿ ನಿತ್ಯ ತುತ್ತು ಎತ್ತಲು ಭಾರಿ 'ಬಿಲ್' ತೆರಬೇಕಾಗುತ್ತದೆ.

ಬಡ್ಡಿದರ ಏರಿಕೆ
ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ಆರ್ ಬಿಐ ಬಲವಂತವಾಗಿ ಹೆಚ್ಚಿನ ಬಡ್ಡಿದರ ಬಯಸುತ್ತದೆ. ಮನೆ, ಕಾರು ಕೊಳ್ಳುವ ಕನಸು ಹೊತ್ತು ಸಾಲ ಪಡೆಯಲು ಯೋಜನೆ ಹಾಕಿಕೊಂಡವರಿಗೆ ಭಾರಿ ಹೊಡೆತ ಬೀಳಲಿದೆ. ವೈಯಕ್ತಿಕ ಸಾಲ, ಗೃಹಸಾಲ ಎಲ್ಲಾ ರೀತಿಯ ಸಾಲಗಳ ಬಡ್ಡಿದರ ಏರಿಕೆಯಾಗಲಿದೆ.

ಚಿನ್ನದ ದರ ಏರಿಕೆ
ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಚಿನ್ನದ ಮೇಲೆ ಹೂಡಿಕೆ ಸದ್ಯಕ್ಕೆ ಬೇಡ ಎಂದು ಕಿವಿಮಾತು ಹೇಳಲಾಗಿದೆ. ಆದರೂ ಧೈರ್ಯ ಮಾಡಿ ಚಿನ್ನ ಖರೀದಿ ಮಾಡಲು ಮುಂದಾದರೆ 10 ಗ್ರಾಂ ಚಿನ್ನದ ದರ ಬೆಲೆ ಕಂಡು ಹೌಹಾರಬೇಕಾಗುತ್ತದೆ.
ಕಾರಣ,ಭಾರತ ಅತಿ ಹೆಚ್ಚು ಚಿನ್ನವನ್ನು ಅಮದು ಮಾಡಿಕೊಳ್ಳುತ್ತದೆ. ಈಗ ಆಮದು ಚಿನ್ನದ ಸುಂಕ ಕೂಡಾ ಹೆಚ್ಚಳವಾಗಿದೆ. ಹೆಚ್ಚು ಡಾಲರ್ ತೆತ್ತು ಚಿನ್ನವನ್ನು ಖರೀದಿಸಿದ ಮೇಲೆ ಸ್ಥಳೀಯ ಚಿನ್ನದ ಬೆಲೆ ಏರಿಸುವುದು ಅನಿವಾರ್ಯವಾಗಲಿದೆ.

ಅಭಿವೃದ್ಧಿ ಕುಂಠಿತ
ದೇಶದ ವಿತ್ತೀಯ ಕೊರತೆ ನಿವಾರಣೆ ಆಗದಿದ್ದರೆ, ಹಣ ದುಬ್ಬರ ಏರುತ್ತಿದ್ದರೆ, ಬಡ್ಡಿದರ ಹೊರೆಯಾದರೆ, ದೈನಂದಿನ ವ್ಯವಹಾರ ತುಂಬಾ ದುಬಾರಿಯಾದರೆ ಅಭಿವೃದ್ಧಿ ತಾನೇ ತಾನಾಗಿ ಕುಂಠಿತಗೊಳ್ಳುತ್ತದೆ. ಆಗ ಜನ ಸಾಮಾನ್ಯರ ಉಳಿತಾಯಕ್ಕೆ ಕತ್ತರಿ ಬೀಳುತ್ತದೆ.
ಇದರ ಪರಿಣಾಮ ನೇರವಾಗಿ ಹೂಡಿಕೆ ಹಾಗೂ ಅಭಿವೃದ್ಧಿಯ ಮೇಲಾಗುತ್ತದೆ. ಜನ ಸಾಮಾನ್ಯರ ಆರ್ಥಿಕ ಜೀವನ ಮಟ್ಟ ಸುಧಾರಣೆ ಕನಸಾಗೇ ಉಳಿಯುತ್ತದೆ.-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications